SDPI : 2018ರಲ್ಲಿ ಕಾಂಗ್ರೆಸ್ ಜೊತೆ ನಮ್ಮ SDPI ಪಾರ್ಟಿ ಮೈತ್ರಿ ಮಾಡಿಕೊಂಡಿತ್ತು! ಕುತೂಹಲ ಕೆರಳಿಸಿದ SDPI ನಾಯಕನ ಹೇಳಿಕೆ
2018 ಕರ್ನಾಟಕದ ನಡೆದ ವಿಧಾನಸಭಾ ಚುನಾವಣೆ(Assembly Election) ಯಲ್ಲಿ ಯಾವ ಪಕ್ಷಕ್ಕೂ ಪೂರ್ಣ ಬಹುಮತ ಬರದೆ, ಹೆಚ್ಚು ಸ್ಥಾನ ಗಳಿಸಿದ ಬಿಜೆಪಿ(BJP) ಸರ್ಕಾರ ರಚಿಸಿ, ಅಸೆಂಬ್ಲಿಯಲ್ಲಿ ಬಹುಮತ ಸಾಬೀತು ಪಡಿಸದೆ ಸರ್ಕಾರವನ್ನು ವಿಸರ್ಜನೆ ಮಾಡಿತ್ತು. ನಂತರ ಕಾಂಗ್ರೆಸ್(Congress) ಮತ್ತು ಜೆಡಿಎಸ್(JDS) ಮೈತ್ರಿ ಮಾಡಿಕೊಂಡು ಸುಮಾರು ಒಂದೂವರೆ ವರ್ಷಗಳ ಕಾಲ ಸರ್ಕಾರ ನಡೆಸಿತ್ತು. ಆದರೆ ಈ ಮೈತ್ರಿ ಕುರಿತಂತೆ ಇದೀಗ ಮತ್ತೊಂದು ವಿಚಾರ ಬಯಲಾಗಿದೆ. ಕಾಂಗ್ರೆಸ್ ನೊಂದಿಗೆ ಜೆಡಿಎಸ್ ಮಾತ್ರವಲ್ಲದೆ, SDPI ಕೂಡ ಮೈತ್ರಿ ಮಾಡಿತ್ತಂತೆ!
ಹೌದು, 2018ರಲ್ಲಿ ಕಾಂಗ್ರೆಸ್ ಜೊತೆ ನಮ್ಮ ಮೈತ್ರಿ ಇತ್ತು, ಎಂದು SDPI ನಾಯಕನ ಹೇಳಿದ್ದಾರೆ. ಅಂದು ಕಾಂಗ್ರೆಸ್ ಜೊತೆಗೆ ನಡೆದಿದ್ದ ಒಳ ಒಪ್ಪಂದ ಕುರಿತು ಎಸ್‌ಡಿಪಿಐ ಮುಖಂಡರೊಬ್ಬರು ಬಾಯ್ಬಿಟ್ಟಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ನಂಬಿಕೆ ದ್ರೋಹ ಮಾಡಿತ್ತು. ಈ ಬಾರಿ ಹಾಗಾಗಲು ಬಿಡೋದಿಲ್ಲ ಎಂದೂ ಗುಡುಗಿದ್ದಾರೆ.
ಕಳೆದ ಚುನಾವಣೆಯಲ್ಲಿ ರಾಜಕೀಯ ಪ್ರಬುದ್ಧತೆ ಕೊರತೆ ಇಂದ ಕಾಂಗ್ರೆಸ್ ನಂಬಿ ಸೋತಿದ್ದೇವೆ. ಈ ಬಾರಿ ಹಾಗಾಗೋದಿಲ್ಲ. ಈ ಬಾರಿ ನಾವು ಕಣದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಸಾಮರ್ಥ್ಯ ಮೀರಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವಂತೆ ಹೋರಾಡುತ್ತೇವೆ ಎಂದು ಬಂಟ್ವಾಳ ಕ್ಷೇತ್ರದ ಎಸ್‌ಡಿಪಿಐ ಅಭ್ಯರ್ಥಿ ಇಲ್ಯಾಸ್ ತುಂಬೆ ಹೇಳಿದ್ದಾರೆ.
ಎಸ್‌ಡಿಪಿಐನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ತುಂಬೆ ಅವರು 2018ರಲ್ಲಿ ರಾಜ್ಯದ 3 ಕ್ಷೇತ್ರಗಳಲ್ಲಿ ಮಾತ್ರ ಎಸ್‌ಡಿಪಿಐ ಸ್ಪರ್ಧೆ ಮಾಡಬೇಕು. ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ರಾಷ್ಟ್ರೀಯ ನಾಯಕರ ಸೂಚನೆಯಂತೆ, ಅವರ ನೇತೃತ್ವದಲ್ಲಿ ಒಪ್ಪಂದ ಆಗಿತ್ತು. ರಾಜ್ಯ ಕಾಂಗ್ರೆಸ್‌ನ ಹಿರಿಯ ತಲೆಗಳು ಕೂಡ ಕಳೆದ ಬಾರಿ ನಮಗೆ ಮನವಿ ಮಾಡಿಕೊಂಡಿದ್ದರು. ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಹೇಳಿದ್ದರಿಂದ ಮೈತ್ರಿ ಮಾಡಿಕೊಂಡಿದ್ದೆವು ಆದರೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ತಾನು ನೀಡಿದ ಮಾತನ್ನು ಪಾಲಿಸಿರಲಿಲ್ಲ. ನಂಬಿಕೆ ದ್ರೋಹ ಮಾಡಿತ್ತು’ ಎಂದು ಅವರು ಹೇಳಿದ್ದಾರೆ.
ಇನ್ನು ಬಿಜೆಪಿ ಭದ್ರಕೋಟೆ ಕರಾವಳಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತೆ ತನ್ನ ಪ್ರಾಬಲ್ಯ ಕಾಣಲು ಕಸರತ್ತು ನಡೆಸುತ್ತಿದ್ದರೆ, ಇತ್ತ ಎಸ್.ಡಿ.ಪಿ.ಐ ಮುಸ್ಲಿಂ ಸಮುದಾಯ ಪ್ರಾಬಲ್ಯ ಇರುವ ಕ್ಷೇತ್ರಗಳನ್ನ ಆಯ್ಕೆ ಮಾಡಿಕೊಂಡು ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ತಯಾರಿ ನಡೆಸಿದೆ. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾದರೆ, ಬಿಜೆಪಿಗೆ ವರವಾಗುತ್ತಾ ಎನ್ನುವ ಲೆಕ್ಕಾಚಾರ ಇದೀಗ ಕ್ಷೇತ್ರಗಳಲ್ಲಿ ಪ್ರಾರಂಭವಾಗಿದೆ.
ಭಟ್ಕಳ(Bhatkala) ಮತ್ತು ಶಿರಸಿ(Shirsi) ಭಾಗದಲ್ಲಿ ಹಿಂದೂ ಸಂಘಟನೆಯಂತೆಯೇ ಎಸ್.ಡಿ.ಪಿ.ಐ(S.D.P.I) ಹಾಗೂ ಪಿ.ಎಫ್.ಐ ಸಂಘಟನೆ ಸಹ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದ್ದು ಗ್ರಾಮಪಂಚಾಯತಿ, ಪುರಸಭೆಗಳಲ್ಲಿ ಎಸ್.ಡಿ.ಪಿ.ಐ ತಮ್ಮವರನ್ನು ಕಣಕ್ಕಿಳಿಸಿ ಒಟ್ಟು 9 ಸ್ಥಾನಗಳನ್ನು ತನ್ನದಾಗಿಸಿಕೊಂಡಿತ್ತು. ಈ ಯಶಸ್ವಿನ ನಂತರ ಇದೇ ಮೊದಲಬಾರಿಗೆ ಜಿಲ್ಲೆಯ ಭಟ್ಕಳ ಹಾಗೂ ಶಿರಸಿ ವಿಧಾನಸಭಾ ಕ್ಷೇತ್ರಕ್ಕೆ ಎಸ್.ಡಿ.ಪಿ.ಐ ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ದವಾಗಿದ್ದು ಭಟ್ಕಳದಿಂದ ಎಸ್.ಡಿ.ಪಿ.ಐ ಜಿಲ್ಲಾಧ್ಯಕ್ಷ ತೋಫಿಕ್ ಬ್ಯಾರಿ ಅವರನ್ನು ಕಣಕ್ಕಿಳಿಸಲಿದ್ರೆ, ಶಿರಸಿಯಲ್ಲಿ ಹಿಂದೂ ಮುಖಂಡರನ್ನೇ ಕಣಕ್ಕಿಳಿಸಲು ಸಜ್ಜಾಗಿದೆ.