Car Loan Tips : ಕಾರು ಸಾಲ ಮಾಡಿ ಖರೀದಿ ಮಾಡಿದ್ರೆ, ಈ ಸೂತ್ರ ಬಳಕೆ ಮಾಡಿ ಆರ್ಥಿಕ ಮುಗ್ಗಟ್ಟಿಂದ ಪಾರಾಗಿ
Car Loan Tips: ಎಲ್ಲರಿಗೂ ಸ್ವಂತ ಕಾರು ಖರೀದಿ ಮಾಡಬೇಕು ಅನ್ನೋ ಬಯಕೆ ಇರೋದು ಸಹಜ. ಆದರೆ, ಎಷ್ಟೋ ಬಾರಿ ಕನಸಿನ ವಾಹನಗಳನ್ನು ಕೊಂಡುಕೊಳ್ಳಲು ಹಣದ ಕೊರತೆ ಉಂಟಾಗಬಹುದು. ಆದರೆ, ಇಂದಿನ ಕಾಲದಲ್ಲಿ ನಮ್ಮ ಕನಸನ್ನು ನನಸು ಮಾಡಲು ಬ್ಯಾಂಕ್ಗಳು( Bank), ಇನ್ನಿತರ ಹಣಕಾಸು ವ್ಯವಸ್ಥೆ ಮೂಲಕ ಸಾಲ ಪಡೆದುಕೊಳ್ಳಲು ಅನುವು ಮಾಡಿಕೊಟ್ಟಿದೆ. ಹಬ್ಬ ಹರಿದಿನಗಳ ಸಂದರ್ಭ ಭರ್ಜರಿ ಆಫರ್ ಬೆಲೆಯಲ್ಲಿ ವಾಹನಗಳನ್ನು (Vechicles)ಖರೀದಿ ಮಾಡಬಹುದು.
ಒಂದು ವೇಳೆ, ನೀವೇನಾದರೂ ಸಾಲ(Loan) ಮಾಡಿ ದುಬಾರಿ ಕಾರು (Luxury Car)ಕೊಂಡುಕೊಳ್ಳುವ ಯೋಜನೆ ಹಾಕಿದ್ದರೆ, ಕಾರು ಖರೀದಿ ಮಾಡುವ ಮುನ್ನ ಕೆಲ ಸರಳ ಸೂತ್ರಗಳನ್ನು(Car Loan Tips) ಅನುಸರಿಸುವುದು ಒಳ್ಳೆಯದು. ಹಾಗಿದ್ರೆ, ಯಾವುದೀ ಸೂತ್ರಗಳು ಎಂಬ ಮಾಹಿತಿ ನಿಮಗಾಗಿ.
ಕಾರ್ ಲೋನ್ ಕೊಳ್ಳುವಾಗ 20-10-4 ಸೂತ್ರವನ್ನು(Car Loan Formula) ಅನ್ವಯ ಮಾಡಿಕೊಳ್ಳುವುದು ಉತ್ತಮ.
ಎಲ್ಲಿಗಾದರೂ ಪ್ರಯಾಣ ಮಾಡ್ಬೇಕು ಅಂದುಕೊಳ್ಳಿ!! ಒಂದು ವೇಳೆ, ಮನೆಯವರೆಲ್ಲ ಒಟ್ಟಿಗೆ ಹೊರಗೆ ಅಡ್ಡಾಡಬೇಕು ಎಂದುಕೊಂಡರೆ ಒಂದು ವೇಳೆ ಮನೆಯಲ್ಲೇ ಸ್ವಂತ ವಾಹನವಿದ್ದರೆ ಪರ್ವಾಗಿಲ್ಲ. ಇಲ್ಲ ಎಂದಾದರೆ ಬೇರೆ ಗಾಡಿಗಾಗಿ ಕಾಯಬೇಕು. ಇದರ ಬದಲಿಗೆ ಸ್ವಂತ ಗಾಡಿಯಿದ್ದರೆ ಒಳ್ಳೆಯದು ಎಂದೆನಿಸುವುದು ಸುಳ್ಳಲ್ಲ. ಆದರೆ, ದುಬಾರಿ ದುನಿಯಾದಲ್ಲಿ ಒಂದೇ ಬಾರಿ ದೊಡ್ಡ ಮೊತ್ತ ಕೊಟ್ಟು ಕಾರು ಕೊಳ್ಳೋದು ಸುಲಭವೇನಲ್ಲ!! ಆದರೆ, ಬ್ಯಾಂಕ್ ಇಲ್ಲವೇ ಇನ್ನಿತರ ಸುರಕ್ಷಾ ಮೂಲದ ಮೂಲಕ ಸಾಲ ಮಾಡಿ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಕೂಡ ಇದೆ ಎಂಬುದನ್ನು ಮರೆಯವಂತಿಲ್ಲ.
ನಮ್ಮಲ್ಲಿ ಅನೇಕ ಬ್ಯಾಂಕ್ ಗಳು( Bank)ಸಾಲ ಸೌಲಭ್ಯ ಒದಗಿಸಿ ಕಾರು ಕೊಳ್ಳುವ ಕನಸನ್ನೂ ನನಸು ಮಾಡಲು ಅನುವು ಮಾಡಿಕೊಡುತ್ತದೆ. ಇದಕ್ಕಾಗಿ, ನೀವು ಸಾಕ್ಷಿಯಾಗಿ ಕೆಲವು ದಾಖಲೆಗಳನ್ನು (Documents) ಒದಗಿಸುವ ಮೂಲಕ ಸುಲಭವಾಗಿ ಕಾರ್ ಲೋನ್ ಪಡೆಯಲು ಅವಕಾಶವಿದ್ದು, ನೀವು ಕಾರ್ ಲೋನ್ ಪಡೆಯುವಾಗ ಒಂದು ಸೂತ್ರವನ್ನು ಅನುಸರಿಸಿದರೆ ಭವಿಷ್ಯದಲ್ಲಿ ಹಣಕಾಸಿನ ಸಮಸ್ಯೆಯಿಂದ(Financial Problems) ಪಾರಾಗಬಹುದು. 20-10-4 ಸೂತ್ರವನ್ನು ನೀವು ಅನುಸರಿಸಿದರೆ ಸಾಲ ಪಡೆದಾಗ ನಿಮಗೆ ನೆರವಾಗುವುದು ಖಚಿತ.
ಏನಿದು 20-10-4 ಕಾರ್ ಲೋನ್ ಫಾರ್ಮುಲಾ( Car Loan Formula) ಎಂದು ಗಮನಿಸಿದರೆ,
ಆರ್ಥಿಕ ತಜ್ಞರ ಪ್ರಕಾರ, ಕಾರ್ ಲೋನ್( Car Loan) ತೆಗೆದುಕೊಳ್ಳುವಾಗ 20-10-4 ಫಾರ್ಮುಲಾ ಅನುಸರಿಸುವುದು ಒಳ್ಳೆಯದು.
20-10-4 ಸೂತ್ರದಲ್ಲಿ,(Car Loan Formula) ಕಾರ್ ಲೋನ್ ತೆಗೆದುಕೊಳ್ಳುವಾಗ 20 ಎಂದರೆ – 20% ಡೌನ್ ಪೇಮೆಂಟ್ (On- Road) 10 ಎಂದರೆ – ಮಾಸಿಕ ಆದಾಯದ 10% ನ EMI ಮತ್ತು 4 ಎಂದರೆ – ನಾಲ್ಕು ವರ್ಷಗಳ ಸಾಲದ ಅವಧಿಯನ್ನು ಸೂಚಿಸುತ್ತದೆ.ನೀವು ಕಾರ್ ಲೋನ್ ಕೊಳ್ಳುವಾಗ 20-10-4 ಕಾರ್ ಲೋನ್ ಫಾರ್ಮುಲಾವನ್ನು ಅನುಸರಿಸಿದರೆ, ಸಾಲವು ಸುಲಭವಾಗಿ ಮರುಪಾವತಿ ಮಾಡಬಹುದು. ಕಾರ್ ಲೋನ್ ನಿಂದಾಗಿ ನಿಮ್ಮ ಮಾಸಿಕ ವೆಚ್ಚವೂ ಹೊರೆಯಾಗದು. ಕಾರ್ ಖರೀದಿಸುವಾಗ ಡೌನ್ ಪೇಮೆಂಟ್ ಅನ್ನು ಹೆಚ್ಚು ಮಾಡಲು ಪ್ರಯತ್ನಿಸಿದರೆ ನಿಮ್ಮ ಮಾಸಿಕ ಇಎಂಐ ಹೊರೆ ಕೂಡ ಕಡಿಮೆ ಆಗುತ್ತದೆ.
20 ಎಂದರೆ ಡೌನ್ ಪೇಮೆಂಟ್ ವಾಹನದ ಆನ್-ರೋಡ್ ಬೆಲೆಯ ಕನಿಷ್ಠ 20% ಆಗಿರಬೇಕಾಗುತ್ತದೆ. ಇದಲ್ಲದೆ ಉಳಿದ ಮೊತ್ತವು ಸಾಲವಾಗಿರುತ್ತದೆ. 10 ಎಂದರೆ ಸಾಲದ ಇಎಂಐ ನಿಮ್ಮ ಮಾಸಿಕ ಆದಾಯದ 10% ಗಿಂತ ಕಡಿಮೆ ಇರದಂತೆ ನೋಡಿಕೊಳ್ಳಿ. 4 ಎಂದರೆ ನಿಮ್ಮ ಕಾರ್ ಲೋನ್ ಸಾಲದ ಅವಧಿ ಗರಿಷ್ಠ ನಾಲ್ಕು ವರ್ಷಗಳನ್ನು ಮೀರಬಾರದು .
ಇದನ್ನೂ ಓದಿ: Tata Nano : ಕೇವಲ 30ರೂ.ನಲ್ಲಿ 100 ಕಿ.ಮೀ.ಓಡೋ ಕಾರು! ಈ ವ್ಯಕ್ತಿಯ ಚಾಕಚಕ್ಯತೆಗೆ ನೆಟ್ಟಿಗರು ಫಿದಾ!!!