iPhone 11: ಫ್ಲಿಪ್​ಕಾರ್ಟ್ ನಲ್ಲಿ ವಿಶೇಷ ಆಫರ್ ; ಕೇವಲ ₹17,999ಕ್ಕೆ ಪಡೆಯಿರಿ iPhone 11 !!

iPhone 11: ಸದ್ಯ ಸ್ಮಾರ್ಟ್ ಫೋನ್ (smartphone) ಇಲ್ಲದೇ ಇರುವವರು ಯಾರೂ ಇಲ್ಲ. ಅದರಲ್ಲೂ iPhone ಅಂದ್ರೆ ಎಲ್ಲಾರೂ ಮುಗಿಬೀಳುತ್ತಾರೆ. ಹಾಗೆಯೇ ಕಂಪನಿಗಳು ಕೂಡ ಜನರನ್ನು ಸೆಳೆಯಲು ಹೊಸ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುತ್ತಿವೆ. ಇದೀಗ iPhone ಖರೀದಿಗೆ ಬಯಸುವವರಿಗೆ ಉತ್ತಮ ಅವಕಾಶ ಇಲ್ಲಿದೆ. ಹೌದು, ಗ್ರಾಹಕರಿಗೆ ವಿಶೇಷ ಆಫರ್​ನಲ್ಲಿ iPhone 11 ಲಭ್ಯವಾಗಲಿದೆ.

ಜನಪ್ರಿಯ ಇ-ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್ (flipkart) ಆ್ಯಪಲ್ ಐಫೋನ್ 11 ಮೇಲೆ ವಿಶೇಷ ಡಿಸ್ಕೌಂಟ್ ಪ್ರಕಟಿಸಿದೆ. ಇದರಲ್ಲಿ ಎಕ್ಸ್​​ಚೇಂಜ್ (Flipkart exchange offer), ಕ್ಯಾಶ್​ಬ್ಯಾಕ್ ಕೊಡುಗೆಯ ಪ್ರಯೋಜನ ಪಡೆಯಬಹುದಾಗಿದೆ.

ಫ್ಲಿಪ್​ಕಾರ್ಟ್​ನಲ್ಲಿ ಐಫೋನ್ 11 ಸ್ಮಾರ್ಟ್ ಫೋನ್ ನ 64 ಜಿಬಿ ಮಾದರಿಯ ಬೆಲೆ ₹43,900 ಇದೆ. ಆದರೆ, ಇದೀಗ ಫ್ಲಿಪ್​ಕಾರ್ಟ್ ವಿಶೇಷ ಆಫರ್ ಸೇಲ್ ನಿಂದ​ ಶೇ. 11ರ ಡಿಸ್ಕೌಂಟ್ ಬಳಿಕ ₹38,999ಕ್ಕೆ ದೊರೆಯುತ್ತಿದೆ. ಈ ಬೆಲೆಯ ಮೇಲೆ ನೀವು ಫ್ಲಿಪ್​ಕಾರ್ಟ್​ನಲ್ಲಿ ಸೂಚಿಸಿರುವ ಬ್ಯಾಂಕ್​ಗಳ ಡೆಬಿಟ್ (debit) ಮತ್ತು ಕ್ರೆಡಿಟ್ ಕಾರ್ಡ್ (credit card) ಬಳಕೆಗೆ ₹1,000ವರೆಗೆ ಡಿಸ್ಕೌಂಟ್ ಪಡೆಯಬಹುದು. ಇದಿಷ್ಟೇ ಅಲ್ಲದೆ, ಎಕ್ಸ್​ಚೇಂಜ್ ಗೆ ₹20,000 ವರೆಗೆ ಗರಿಷ್ಠ ಉಳಿತಾಯ ಮಾಡಬಹುದು.

ಡಿಸ್ಕೌಂಟ್, ಕ್ಯಾಶ್​​ಬ್ಯಾಕ್ ಮತ್ತು ಎಕ್ಸ್​ಚೇಂಜ್ ಕೊಡುಗೆ ಬಳಿಕ ಆ್ಯಪಲ್ iPhone 11 64 GB ₹17,999 ದರಕ್ಕೆ ಲಭ್ಯವಾಗುತ್ತದೆ. ಆದರೆ, ಎಕ್ಸ್​ಚೇಂಜ್ ಆಫರ್ ನಲ್ಲಿ ನಿಮ್ಮ ಹಳೆಯ ಫೋನ್​ಗೆ ವಿನಿಮಯ ಮೌಲ್ಯ ಹೆಚ್ಚು ದೊರೆಯದಿದ್ದರೆ ಬೆಲೆಯಲ್ಲಿ ವ್ಯತ್ಯಾಸವಾಗಬಹುದು.

ಐಫೋನ್ 11, 6.1-ಇಂಚಿನ ಲಿಕ್ವಿಡ್ ರೆಟಿನಾ HD ಡಿಸ್ಪ್ಲೇಯನ್ನು ಹೊಂದಿದೆ. ಇದು A13 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. ಈ ಸ್ಮಾರ್ಟ್​ಫೋನ್​ನ ಹಿಂಭಾಗದಲ್ಲಿ ಡ್ಯುಯಲ್ 12MP ಸೆನ್ಸಾರ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 12MP ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಆ್ಯಪಲ್ ಐಫೋನ್ 11, 5G ಸಂಪರ್ಕ ಬೆಂಬಲ ಹೊಂದಿಲ್ಲ. ಇಎಂಐ ಮೂಲಕವೂ ಆ್ಯಪಲ್ ಐಫೋನ್ 11 ಖರೀದಿಗೆ ಅವಕಾಶವನ್ನು ಫ್ಲಿಪ್​ಕಾರ್ಟ್ ನೀಡಿದೆ.

ಈ ಫೋನ್ ನೇರಳೆ, ಹಸಿರು, ಹಳದಿ, ಕಪ್ಪು, ಬಿಳಿ ಮತ್ತು ಕೆಂಪು ಎಂಬ ಆರು ಬಣ್ಣಗಳಲ್ಲಿ ಲಭ್ಯವಿರಲಿದೆ. 6.1 ಲಿಕ್ವಿಡ್ ರೆಟಿನಾ’ ಪ್ಯಾನೆಲ್ ಅನ್ನು ಹೊಂದಿರುವ ಈ ಫೋನ್ ಆನೊಡೈಸ್ಡ್ ಅಲ್ಯೂಮಿನಿಯಂ ಬಾಡಿ ಮತ್ತು ಕಠಿಣವಾದ ಗಾಜನ್ನು ಹೊಂದಿದೆ. ಇನ್ನು ಐಪಿ 68 ಸಾಮರ್ಥ್ಯದಲ್ಲಿ ಐಫೋನ್ 11 ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆ ನೀಡುತ್ತದೆ ಎನ್ನಲಾಗಿದೆ.

Leave A Reply

Your email address will not be published.