Summer Rain Alert : ಮುಂದಿನ 48 ಗಂಟೆಗಳಲ್ಲಿ ಜೋರಾದ ಮಳೆ! ಹವಾಮಾನ ಇಲಾಖೆ ಎಚ್ಚರಿಕೆ

Summer Rain Alert: ರಾಜ್ಯದ ಬಹುತೇಕ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ವರುಣ ದರ್ಶನ ನೀಡಿದ್ದು, ಮತ್ತೆ ಕೆಲವೆಡೆ ಮೋಡ ಮುಸುಕಿದ ವಾತಾವರಣ , ಕೆಲವೆಡೆ ತುಂತುರು ಮಳೆಯಾಗಿದೆ. ಸದ್ಯ ಮಳೆಯ ಕುರಿತಂತೆ ಇದೀಗ ಹವಾಮಾನ ಇಲಾಖೆ ಎಚ್ಚರಿಕೆ (Summer Rain Alert) ನೀಡಿದೆ.

ಇತ್ತೀಚಿನ ಕೆಲ ದಿನಗಳಿಂದ ಮೋಡ ಕವಿದ ವಾತಾವರಣ, ಉರಿ ಬಿಸಿಲಿನ ನಡುವೆ ವರುಣ ದರ್ಶನ ನೀಡಿದ್ದು, ರಾಜ್ಯದ ಕೆಲವೆಡೆ ಮಳೆಯ ಅಬ್ಬರಕ್ಕೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಂಗಳೂರು ನಗರದಲ್ಲಿಂದು ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿರಲಿದ್ದು, ಲಘು ಮಳೆಯಾಗುವ ಸಂಭವವಿರುವ ಕುರಿತು ಭಾರತೀಯ ಹವಾಮಾನ ಇಲಾಖೆ(Indian Meteorological Department (IMD) ಮುನ್ಸೂಚನೆ(Weather Forecasting ) ನೀಡಿದೆ. ಈ ನಡುವೆ ದಕ್ಷಿಣ ಒಳನಾಡು ಜಿಲ್ಲೆಗಳಾದ ಹಾಸನ, ಕೊಡಗು, ರಾಮನಗರ, ಮೈಸೂರು, ಮಂಡ್ಯದಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಹವಾಮಾನ( Weather Report) ವರದಿಯ ಅನುಸಾರ ಮುಂದಿನ 48 ಗಂಟೆಗಳಲ್ಲಿ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಸಹಿತ(Rain And Thundershowers )ಮಳೆಯಾಗುವ ಕುರಿತು ಮಾಹಿತಿ ನೀಡಿ ಎಚ್ಚರಿಕೆ ನೀಡಿದೆ.

ಈ ನಡುವೆ ಕೆಲ ಪ್ರದೇಶಗಳಲ್ಲಿ ಮುಂಜಾನೆಯ(Morning) ಸಮಯದಲ್ಲಿ ಮಂಜು ಹೆಚ್ಚು ಕಂಡುಬರುವ ಸಾಧ್ಯತೆಗಳಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ಮಲೆನಾಡು,ಕೊಡಗು ಮತ್ತು ಕರಾವಳಿ ಭಾಗದಲ್ಲಿ ತುಂತುರು (Light Moderate Rainfall)ಮಳೆಯಾಗಿದೆ. ಈ ನಡುವೆ ಕರ್ನಾಟಕ ಒಳನಾಡು ಮತ್ತು ಕರಾವಳಿ ಭಾಗದಲ್ಲಿ ವರುಣನು ಇಂದು ಕೂಡ ಅಬ್ಬರಿಸುವ(Karnataka Rains) ಸಾಧ್ಯತೆಗಳಿವೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಬಳ್ಳಾರಿಯಲ್ಲಿ ಕೂಡ ಮಳೆಯಾಗುವ ನಿರೀಕ್ಷೆಯಿದೆ.

ವರುಣನ ಆರ್ಭಟಕ್ಕೆ ಕೆಲವೆಡೆ ಭಾರೀ ದೊಡ್ಡ ಪ್ರಮಾಣದ ನಷ್ಟವಾಗಿದ್ದು, ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಈ ನಡುವೆ, ಹಾವೇರಿಯಲ್ಲಿ ಕೂಡ ಮಳೆಯಾಗಿದ್ದು, ಬುಧವಾರ ಕಲಘಟಗಿ ತಾಲೂಕಿನಲ್ಲಿ ಗುಡುಗು, ಸಿಡಿಲಿನ ವರುಣ ಅಬ್ಬರಿಸಿರುವ ಬಗ್ಗೆ ವರದಿಯಾಗಿದೆ

Leave A Reply

Your email address will not be published.