Home Technology Honda scooter : ಮಾರುಕಟ್ಟೆಗೆ ಎಲೆಕ್ಟ್ರಿಕ್ ಆಕ್ಟೀವಾ ಎಂಟ್ರಿ?! ಮಾರ್ಚ್ 29ಕ್ಕೆ ಹೋಂಡಾದಿಂದ ಘೋಷಣೆ!!

Honda scooter : ಮಾರುಕಟ್ಟೆಗೆ ಎಲೆಕ್ಟ್ರಿಕ್ ಆಕ್ಟೀವಾ ಎಂಟ್ರಿ?! ಮಾರ್ಚ್ 29ಕ್ಕೆ ಹೋಂಡಾದಿಂದ ಘೋಷಣೆ!!

Honda Scooter

Hindu neighbor gifts plot of land

Hindu neighbour gifts land to Muslim journalist

Honda scooter : ವಿವಿಧ ಕಾರುಗಳು ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಹಾಗೆಯೇ ಇದೀಗ ಜನಪ್ರಿಯ ಕಂಪನಿ ಹೋಂಡಾ (Honda) ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಯೋಜನೆಯನ್ನು ಮಾರ್ಚ್ 29 ರಂದು ಪ್ರಾರಂಭಿಸಲಿದ್ದು, ಆಕ್ಟೀವಾ ಸ್ಕೂಟರ್ ಅನ್ನು ಎಲೆಕ್ಟ್ರಿಕ್ ಆವೃತ್ತಿಗೆ ಪರಿವರ್ತಿಸಿ ಮಾರಾಟಕ್ಕೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಹೋಂಡಾ ಮೋಟಾರ್‌ಸೈಕಲ್ (motor cycle) ಮತ್ತು ಸ್ಕೂಟರ್ (honda scooter) ಕಂಪನಿಯ ಸಿಇಒ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ 2024 ರಲ್ಲಿ ಮಾರಾಟವಾಗಲಿದೆ ಎಂದು ಹೇಳಿದ್ದರು.

ಅಂತೆಯೇ ಮಾರ್ಚ್ 29 ರಂದು ಯೋಜನೆಯ ಘೋಷಣೆಗಳು ಮಾತ್ರ ಹೊರಬರುವ ನಿರೀಕ್ಷೆಯಿದೆ. HP ಯೊಂದಿಗೆ ಹೋಂಡಾ ಕೈಜೋಡಿಸಿದೆ ಮತ್ತು HP ಪೆಟ್ರೋಲ್ ಬಂಕ್‌ಗಳಲ್ಲಿ ಚಾರ್ಜಿಂಗ್ ಕೇಂದ್ರಗಳು ಮತ್ತು ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಆಕ್ಟೀವಾ ಎಲೆಕ್ಟ್ರಿಕ್ ಸ್ಕೂಟರ್ ಬದಲಾಯಿಸಬಹುದಾದ ಬ್ಯಾಟರಿ ಚಾಲಿತ ಸ್ಕೂಟರ್ ಆಗಿರಲಿದೆ ಎನ್ನಲಾಗುತ್ತಿದ್ದು, ಇದು ಕಡಿಮೆ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಎಂಬ ಮಾತು ಕೇಳಿಬರುತ್ತಿದೆ.

ಸದ್ಯ ಮಾರ್ಚ್ 29 ರವರೆಗೆ ಆಕ್ಟೀವಾ ಎಲೆಕ್ಟ್ರಿಕ್ (Honda Activa electric ) ಮಾರುಕಟ್ಟೆಗೆ ಲಗ್ಗೆ ಇಟ್ಟರೆ, ಓಲಾ (ola), ಎಥರ್ (ethar), ಟಿವಿಎಸ್ (TVs) , ಐಕ್ಯೂಬ್ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ. ಕಳೆದ ಜನವರಿಯಲ್ಲಿ ಬಿಡುಗಡೆಯಾದ ಹೋಂಡಾ ಆಕ್ಟೀವಾ 6G, 109 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 7.84 hp ಗರಿಷ್ಠ ಪವರ್ 8.90 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. 5.3 ಲೀಟರ್ ಫ್ಯುಯೆಲ್ ಟ್ಯಾಂಕ್ ಇದ್ದು, 60 ಕಿ.ಮೀ ಮೈಲೇಜ್ ನೀಡುತ್ತದೆ. ಇದರ ಬೆಲೆ ರೂ.75,655 ದಿಂದ ರೂ. 81,656 ಆಗಿದೆ.

ಸದ್ಯ ಈ ಸ್ಕೂಟರ್ ಮಾರುಕಟ್ಟೆಯಲ್ಲಿ ಧೂಳೆಬ್ಬಿಸೋದು ಪಕ್ಕಾ!! ಅದಕ್ಕಾಗಿ ಮಾರ್ಚ್ 29 ರವರೆಗೆ ಕಾದು ನೋಡಬೇಕಿದೆ. ಹೋಂಡಾ ಈವರೆಗೂ ಹಲವು ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಜನಮನ ಸೆಳೆದಿದೆ. ಈ ಹಿಂದೆ ಹೋಂಡಾ ದ್ವಿಚಕ್ರ ವಾಹನಗಳಿಗೆ ಏರ್‌ಬ್ಯಾಗ್‌ (airbag) ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಿದ್ದು, ಗ್ರಾಹಕರಿಗೆ ಹೊಸ ಹೊಸ ವಾಹನಗಳನ್ನು ಪರಿಚಯಿಸುತ್ತಿದೆ.