Home Breaking Entertainment News Kannada Kabzaa word meaning: ತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ ‘ಕಬ್ಜ’! ಆದ್ರೆ ಈ ‘ಕಬ್ಜಾ’ ಅಂದ್ರೆ ಏನಂತಾ...

Kabzaa word meaning: ತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ ‘ಕಬ್ಜ’! ಆದ್ರೆ ಈ ‘ಕಬ್ಜಾ’ ಅಂದ್ರೆ ಏನಂತಾ ಗೊತ್ತೇನಣ್ಣೋ?

Kabza word meaning

Hindu neighbor gifts plot of land

Hindu neighbour gifts land to Muslim journalist

Kabzaa word meaning: “ನನಗೆ ಸಂತೋಷದಾಯಕವಾದ ಮನೆಯೊಂದು ಬಾಡಿಗೆಗೆ ಬೇಕಿದೆ. ಸದ್ಯ ಈಗಿರುವ ಮನೆಯಲ್ಲಿ ದುಃಖವು ನನ್ನನ್ನು ‘ಕಬ್ಜ’ ಮಾಡ್ಬಿಟ್ಟಿದೆ”. ನನ್ನ ಅಣ್ಣ ನನ್ನೆಲ್ಲಾ ಜಮೀನನ್ನು ‘ಕಬ್ಜ’ ಮಾಡ್ಕೋಬಿಟ್ಟ. ಅರೇ ಇದೇನಿದು ಇಂದು ರಿಲೀಸ್ ಆಗ್ತಿರೋ ಕನ್ನಡದ ಸೂಪರ್ ಡೂಪರ್ ಹಿಟ್ ಆಗುವ ನಿರೀಕ್ಷೆಯಲ್ಲಿರುವ ಸಿನಿಮಾ ‘ಕಬ್ಜ’ ಇಲ್ಲಿ ಏನೇನೋ ವಿಚಾರಗಳಲ್ಲಿ ಬಳಕೆಯಾಗ್ತಿದೆ ಅನ್ಕೊಳ್ತಿದ್ದೀರಾ? ಯಾಕೆಂದ್ರೆ ಇಂದು ರಿಲೀಸ್ ಆಗ್ತಿರೋ ಈ ಸಿನೆಮಾದ ಕಬ್ಜ ಪದದ ನಿಜವಾದ ಅರ್ಥವೇ ಇದು ನೋಡಿ. ( Kabzaa release Today)

ಹೌದು, ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಕಬ್ಜ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ಹೊತ್ತಿನಲ್ಲಿ 4000 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜನ ಸಿನಿಮಾವನ್ನು ವೀಕ್ಷಿಸಿ ಆನಂದಿಸಲಿದ್ದಾರೆ. ಈ ಚಿತ್ರವನ್ನು ಕೆಜಿಎಫ್ ಎರಡು ಚಿತ್ರದ ಛಾಯೆಯಿಂದ ತಯಾರಿಸಲಾಗಿದೆ ಎನ್ನುವ ಆಪಾದನೆ ಕೂಡ ಚಿತ್ರದ ಮೇಲಿದೆ. ಯಾಕೆಂದರೆ ಈ ಚಿತ್ರ ಕೂಡ ಭೂಗತ ಜಗತ್ತಿನ ಕಥೆಯನ್ನು ಹೇಳುತ್ತದೆ. ಒಟ್ನಲ್ಲಿ ಕಬ್ಜ ಕುತೂಹಲ ಮೂಡಿಸಿದೆ. ಸೆಟ್ಟೇರಿದಾಗಿನಿಂದಲೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಾ ಬೆಟ್ಟದಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಬ್ಜ ಚಿತ್ರದ ಮೊದಲನೇ ಪ್ರದರ್ಶನವನ್ನೇ ವೀಕ್ಷಿಸಿಬಿಡಬೇಕು ಎಂದು ಸಿನಿ ರಸಿಕರು ಕಾಯುತ್ತಿದ್ದಾರೆ.

ಈ ಮಧ್ಯೆ ಕಬ್ಜಾ ಎಂಬ ಹೆಸರು ಕೂಡ ತನ್ನ ಕುತೂಹಲ ಉಳಿಸಿಕೊಂಡಿದೆ. ಕಬ್ಜಾ ಉಪನಾಮದ ಅರ್ಥವೇನು (Kabzaa word meaning)? ಇದು ಕನ್ನಡ ಪದವೇ, ಇಲ್ಲ ಇಂಗ್ಲೀಷ್ ಪದವೇ ಅಥವಾ ಬೇರೆ ಯಾವುದೋ ಭಾಷೆಯ ಪದವೇ ಎನ್ನುವ ಬಗೆಗಿನ ಸಂದೇಹಗಳು ಹಲವರಲ್ಲಿ ಕಾಡ್ತಿದ್ದು, ಈಗ ಕ್ಲಿಯರ್ ಆಗಲಿದೆ. ಅಂದಹಾಗೆ ‘ಕಬ್ಜಾ’ ಎಂಬ ಪದವು ಆಸ್ತಿ ಪತ್ರಗಳಲ್ಲಿ ಅಥವಾ ಹಳೆಯ ಕೋರ್ಟು ಕಚೇರಿಗಳ ದಾಖಲೆಗಳಲ್ಲಿ ಕಂಡು ಬರುತ್ತದೆ. ಕೆಲವು ಸಂದರ್ಭಗಳಲ್ಲಿ ಇದು ಕಾನೂನುಬದ್ಧವಾಗಿ ಅನುಮೋದಿಸಲ್ಪಟ್ಟ ಕ್ರಮ ಅಥವಾ ತೀರ್ಪಿನದ್ದಾಗಿದೆ. ಆದರೆ ಹೆಚ್ಚಾಗಿ ಇದು ಬಲಾತ್ಕಾರ ಅಥವಾ ಬಲದಿಂದ ಅಕ್ರಮ ಎಸಗಿದುದನ್ನು ಅಥವಾ ಸ್ವಾಧೀನವನ್ನು ಸೂಚಿಸುತ್ತದೆ. ಕೆಲವು ಸಂದರ್ಭಗಳಲ್ಲಿ ಯಾರು ಬಳಸದೆ ಇದ್ದ ಜಾಗವನ್ನು ಅಕ್ರಮಿಸಿಕೊಳ್ಳುವುದಕ್ಕೆ ಕಬ್ಜ ಅನ್ನಲಾಗುತ್ತದೆ.

ಕಬ್ಜಾ ಎನ್ನುವ ಪದ ಮೂಲತಃ ಅರೇಬಿಕ್ ಪದ. ಮೊದಲೇ ಹೇಳಿದಂತೆ ಈ ಕಬ್ಜಾ ಎಂಬ ಪದದ ಮೂಲಾರ್ಥ ಸ್ವಾಧೀನಪಡಿಸಿಕೊಳ್ಳುವುದು, ನಿಯಂತ್ರಣವನ್ನು ತೆಗೆದುಕೊಳ್ಳುವುದು, ಆಕ್ರಮಿಸಿಕೊಳ್ಳುವುದು, ಪಡೆದುಕೊಳ್ಳುವುದು ಅಥವಾ ವಶಪಡಿಸಿಕೊಳ್ಳುವುದು, ಬೀಗ ಹಾಕುವುದು ಹೀಗೆ ನಾನಾರ್ಥಗಳೊಂದಿಗೆ ಸಾಗುತ್ತದೆ. ಇನ್ನು ಈ ಚಿತ್ರವು ಭೂಗತ ಜಗತ್ತಿನ ನಾಲ್ಕು ದಶಕಗಳ ಕಥೆಯಾದ್ದರಿಂದ ಒಟ್ಟಾರೆ ಚಿತ್ರದ ಟೈಟಲ್ ಕತೆಗೆ ಸೂಕ್ತವಾಗಿ ಹೊಂದುತ್ತದೆ.

ಕಬ್ಜದ ಇತರ ಅರ್ಥಗಳು ಮಾನಸಿಕ ಮತ್ತು ಭಾವನಾತ್ಮಕ ಮಟ್ಟದಲ್ಲಿವೆ. ಪ್ರೀತಿಯ ಭಾವೋದ್ರೇಕ, ಹಣವು ಆಕ್ರಮಿಸಿಕೊಂಡಾಗ ಆಗುವ ಬದಲಾವಣೆ, ಮುಂತಾದ ಸಂದರ್ಭಗಳಲ್ಲಿ. ಈ ಶಬ್ದವನ್ನು ಸಾಹಿತ್ಯಕವಾಗಿ ಬಳಸಲಾಗುತ್ತಿದೆ. ಈ ಕೆಳಗಿನ ಶಾಹಿರಿಯನ್ನು ಗಮನಿಸಿ : “ದುಃಖವು ನನ್ನ ಮನೆಯನ್ನು ಆಕ್ರಮಿಸಿಕೊಂಡಿರುವುದರಿಂದ ( Kabzaa) ನನಗೆ ಸಂತೋಷದ ಮನೆ ಬಾಡಿಗೆಗೆ ಬೇಕು”.

ಇನ್ನು ಕೆಲವರು ಈ ‘ಕುಬ್ಜ’ ಪದವನ್ನೇ ‘ಕಬ್ಜ’ ಎಂದು ಭಾವಿಸಿದ್ದಾರೆ. ಕುಬ್ಜವನ್ನೇ ಸಿನಿಮಾ ಹಿನ್ನೆಲೆಯಲ್ಲಿ ಕಬ್ಜವಾಗಿ ಮಾಡಿದ್ದಾರೆಂದು ಅಂದು ಕೊಂಡಿದ್ದಾರೆ. ಆದರೆ ಇವೆರಡೂ ಬೇರೆ ಬೇರೆ ಪದಗಳು. ನೋಡಿದಾಗ, ಓದಿದಾಗ ಒಂದೇ ರೀತಿ ಕಾಣುವ ಇಂತಹ ಹಲವು ಪರಭಾಷಾ ಪದಗಳು ಕನ್ನಡದ ಅಂಗಿ ತೊಟ್ಟು, ಕನ್ನಡಿಗರ ಮಾತಲ್ಲಿ, ನಿಘಂಟುಗಳಲ್ಲಿ ಬೆರೆತು ಹೋಗಿವೆ. ಈ ಕುಬ್ಜ ಅಥವಾ ಕುಬ್ಜೆ ಅಂದ್ರೆ ಕಡಿಮೆ ಗಾತ್ರದ ಹಾಗೂ ಬಾಗಿದ ಬೆನ್ನಿನ್ನು ಹೊಂದಿರೋ ಗಂಡು-ಹೆಣ್ಣನ್ನು ಸೂಚಿಸುತ್ತದೆ. ಇದರೊಂದಿಗೆ ವಕ್ರವಾದ ಮನಸ್ಥಿತಿ ಎಂಬ ಅರ್ಥವನ್ನು ನೀಡುತ್ತದೆ.

ಒಟ್ಟಿನಲ್ಲಿ ಹೀಗೆ ಸಾಕಷ್ಟು ವಿಷಯಗಳಿಂದ ನಿರೀಕ್ಷೆ ಹುಟ್ಟುಹಾಕಿರುವ ಕಬ್ಜ ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಅನ್ನು ಮೂರು ದಿನಗಳ ಹಿಂದೆಯೇ ತೆರೆಯಲಾಗಿದ್ದು, ಸಿನಿ ರಸಿಕರು ಟಿಕೆಟ್ ಖರೀದಿಸಲು ಮುಗಿಬಿದ್ದಿದ್ದಾರೆ. ಅದರಲ್ಲೂ ಬೆಂಗಳೂರಲ್ಲಂತೂ ಚಿತ್ರದ ಟಿಕೆಟಿನ ಭರ್ಜರಿ ಭೇಟೆ ನಡೆದಿದೆ. ಇದರಿಂದ ಮೊದಲ ದಿನ ಚಿತ್ರ ದೊಡ್ಡ ಓಪನಿಂಗ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಮಾರ್ಚ್ 16ರ ಮಧ್ಯಾಹ್ನ 1.30ರವರೆಗೆ ಕಬ್ಜ ಚಿತ್ರದ ಬಿಡುಗಡೆ ದಿನದ 68000 ಟಿಕೆಟ್‌ಗಳು ಬೆಂಗಳೂರಿನಲ್ಲೕ ಮಾರಾಟವಾಗಿದ್ದು ಅಚ್ಚರಿ. ಇದರೊಂದಿಗೆ ಮೊದಲ ದಿನವೇ ಕಬ್ಜ ಚಿತ್ರಕ್ಕೆ ಬೆಂಗಳೂರಿನಲ್ಲಿ 535 ಪ್ರದರ್ಶಗಳು ಲಭಿಸಿವೆ.

ಚಿತ್ರ ತೆರೆಗೆ ಅಪ್ಪಳಿಸಲು ಇನ್ನೂ ಸಮಯವಿದ್ದು, ಈ ಅಂಕಿಗಳು ಎಷ್ಟರ ಮಟ್ಟಕ್ಕೆ ಹೋಗಿ ಮುಟ್ಟುತ್ತವೆಯೋ ಕಾದು ನೋಡಬೇಕಿದೆ. ಸದ್ಯ 535 ಪ್ರದರ್ಶನಗಳನ್ನು ಹೊಂದಿರುವ ಕಬ್ಜ ಈ ವರ್ಷ ಬಿಡುಗಡೆಯ ದಿನ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ ಚಿತ್ರಗಳ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ನಂಬರ್ ಒನ್ ಎನಿಸಿಕೊಳ್ಳಲು ಪಠಾಣ್ ಸಿನಿಮಾದ 821 ಪ್ರದರ್ಶನಗಳ ದಾಖಲೆಯನ್ನು ಹಿಂದಿಕ್ಕಬೇಕಿದೆ. ಇನ್ನು ಸ್ಯಾಂಡಲ್ ವುಡ್ ನಲ್ಲಿ ಪ್ರತೀ ವರ್ಷ ಒಂದರ ಹಿಂದೆ ಒಂದಂತೆ ಸೂಪರ್ ಡೂಪರ್ ಸಿನೆಮಾಗಳು ರಿಲೀಸ್ ಆಗ್ತಿದ್ದು, ಇಡೀ ಭಾರತೀಯ ಚಿತ್ರರಂಗವೇ ನಮ್ಮ ಕನ್ನಡ ಚಿತ್ರಗಳಿಗಾಗಿ ಕಾದು ಕೂರುವಂತಾಗಿದೆ.