Relationship: ಈತ ತಂಗಿಯನ್ನೇ ಮದುವೆಯಾಗಿ 6 ವರ್ಷ ಸಂಸಾರ ಮಾಡಿದ್ದ! ಈ ಒಂದು ಘಟನೆಯಿಂದ ಬಯಲಾಯ್ತು ಬೆಚ್ಚಿಬೀಳಿಸೋ ಸತ್ಯ!
Relationship :ಕೆಲವೊಂದು ಸಂಬಂಧಗಳೇ ಹಾಗೆ. ನಮ್ಮ ಸುತ್ತಲೇ ಅವು ಸುತ್ತು ಹಾಕಿಕೊಂಡಿದ್ದರು ನಮಗದು ತಿಳಿಯದಾಗುತ್ತದೆ. ಕೆಲವೊಮ್ಮೆ ಎಷ್ಟೋ ಸಮಯದ ನಂತರ ತಿಳಿದು ಅವುಗಳ ಪ್ರಾಮುಖ್ಯತೆಯ ಅರಿವಾಗುತ್ತದೆ. ಅಂತೆಯೇ ಇಲ್ಲೊಂದೆಡೆ ಅನ್ಯೋನ್ಯವಾಗಿದ್ದ ದಂಪತಿಗೆ ಈ ರೀತಿಯಾಗಿ ತಮ್ಮ ಪೂರ್ವ ಸಂಬಂಧದ ಅರಿವಾಗಿ ಧಿಗ್ಭ್ರಾಂತವಾಗಿದೆ. ಯಾಕೆ ಗೊತ್ತಾ? ಈ ದಂಪತಿಗಳು ಸಂಬಂಧಲ್ಲಿ ಅಣ್ಣ ತಂಗಿಯಂತೆ! ತಮ್ಮ ನಿಜವಾದ ಸಂಬಂಧಗಳ ಅರಿವಿಲ್ಲದೆ ಇವರು ಮದುವೆಯಾಗಿ 6 ವರ್ಷಗಳ ಕಾಲ ಸಂಸಾರವನ್ನೂ ಮಾಡಿದ್ದಾರೆ!
ಹೌದು, ಇಲ್ಲೊಬ್ಬ ವ್ಯಕ್ತಿ ತನ್ನ ತಂಗಿಯನ್ನೇ ಮದ್ವೆಯಾಗಿ ಸುಮಾರು 6 ವರ್ಷಗಳ ಕಾಲ ಸಂಸಾರ (Relationship) ಮಾಡಿದ್ದಾನೆ. ಮದ್ವೆಯಾಗಿ ಆರು ವರ್ಷದ ನಂತ್ರ ಆತನಿಗೆ ಈ ಸತ್ಯಾಂಶ ತಿಳಿದಿದೆ. ತಾನು ಮದುವೆಯಾಗಿರುವ ಹುಡುಗಿಯೇ ತನ್ನ ತಂಗಿಯೆಂಬ ವಿಚಾರವೀಗ ಬಯಲಾಗಿ ಈತ ಇದೀಗ ಆಘಾತಕ್ಕೆ ಒಳಗಾಗಿದ್ದಾನೆ. ಚಿಕ್ಕಂದಿನಲ್ಲೇ ಇಬ್ಬರೂ ಬೇರೆ ಬೇರೆಯಾಗಿದ್ದ ಕಾರಣ ತಾವಿಬ್ಬರೂ ಅಣ್ಣ-ತಂಗಿ ಎಂಬುದು ಇಬ್ಬರಿಗೂ ಗೊತ್ತಿರಲ್ಲಿಲ್ಲ.
ಅದೂ ಕೂಡ ಈ ಪ್ರಕರಣದ ಹಿನ್ನೆಲೆಯೇ ಎಲ್ಲರಿಗೂ ಆಶ್ಚರ್ಯ ಉಂಟುಮಾಡುತ್ತದೆ. ಇಷ್ಟು ವರ್ಷ ಏನೂ ತಿಳಿಯದೆ ಸಂಸಾರ ಮಾಡುತ್ತಿದ್ದ ಇವರಿಗೆ ಇದ್ದಕ್ಕಿದ್ದಂತೆ ಅಣ್ಣ ತಂಗಿ ಅನ್ನೋ ಸತ್ಯ ಹೇಗೆ ಗೊತ್ತಾಯ್ತು ಅನ್ನೋ ವಿಚಾರವನ್ನು ನೀವು ತಿಳಿದರೆ ಹೀಗೂ ಕಾಕತಾಳೀಯಗಳು ನಡೆಯುತ್ತವೆಯೇ ಅಂತ ನಿಮಗನಿಸುತ್ತದೆ. ಈ ಕುರಿತಾದ ಮಾಹಿತಿಯನ್ನು ಆಘಾತಕ್ಕೆ ಒಳಗಾದ ಈ ವ್ಯಕ್ತಿಯೇ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಈ ದಂಪತಿಗಳಿಗೆ ಮಗ ಜನಿಸಿದ ನಂತರ ಹೆಂಡತಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಆಗ ಆಕೆಗೆ ಮೂತ್ರಪಿಂಡ ಕಸಿ (Kidney transplant) ಮಾಡಿಸಬೇಕೆಂಬುದು ತಿಳಿದಿದೆ. ಇವರು ಸಂಬಂಧಿಕರು, ಸ್ನೇಹಿತರು, ಪರಿಚಯಸ್ಥರು ಎಲ್ಲರನ್ನೂ ಸಂಪರ್ಕಿಸಿದಾಗ ಅವರ್ಯಾರ ಕಿಡ್ನಿಯು ಹೊಂದಾಣಿಕೆಯಾಗಿಲ್ಲ. ಆದರೂ ಕೆಲವರು ಒಪ್ಪಿಲ್ಲ. ಹೀಗಾಗಿ ಕೊನೆಗೆ ಗಂಡನೇ ಕಿಡ್ನಿ ನೀಡಲು ಮುಂದಾಗಿ ಹೊಂದಾಣಿಕೆಯ ಪರೀಕ್ಷೆ ನಡೆದಿದೆ. ಮರುದಿನ ಇವರ ಕಿಡ್ನಿ ಹೊಂದಾಣಿಕೆಯಾಗಿದೆಯೆಂದು ಆಸ್ಪತ್ರೆಯಿಂದ ಕರೆ ಬಂದಿದೆ. ನಂತರ ವೈದ್ಯರು ಹೆಚ್ಚುವರಿ ಪರೀಕ್ಷೆಯನ್ನು ಮಾಡಬೇಕೆಂದು ಹೇಳಿ ಅವುಗಳನ್ನೂ ಮಾಡಿದ್ದಾರೆ. ಆದರೆ ಈ HLA (ಹ್ಯೂಮನ್ ಲ್ಯುಕೋಸೈಟ್ ಆಂಟಿಜೆನ್) ಅಂಗಾಂಶ ಪರೀಕ್ಷೆಯ ಫಲಿತಾಂಶ ಹೊರಬಂದಾಗ ಆಘಾಕಕಾರಿ ವಿಚಾರ ತಿಳಿದುಬಂತು’ ಎಂದು ವ್ಯಕ್ತಿ ಹೇಳಿಕೊಂಡಿದ್ದಾನೆ.
ಇದಲ್ಲದೆ ಇವರು ಹೇಗೆ ಅಣ್ಣ ತಂಗಿ, ಮದುವೆಯಾದದ್ದು ಹೇಗೆ ಎಂಬ ವಿಚಾರ ಇನ್ನೂ ಕುತೂಹಲವಾಗಿದೆ. ಅಂದು ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಗಂಡು ಮಗುವನ್ನು ದತ್ತು ತೆಗೆದುಕೊಳ್ಳಲಾಯಿತು. ದತ್ತು ಸ್ವೀಕಾರದ ವಿಚಾರಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ನಿಯಮವಿರುವ ಕಾರಣ ಹುಡುಗನಿಗೆ (Boy) ತನ್ನ ಪೋಷಕರ (Parents) ಬಗ್ಗೆ ಯಾವುದೇ ಮಾಹಿತಿ ಇರಲ್ಲಿಲ್ಲ. ಅದೆಷ್ಟೋ ವರ್ಷಗಳ ನಂತರ ಈತ ಹುಡುಗಿಯೊಬ್ಬಳನ್ನು ಮದುವೆಯಾದ (Marriage). ಜೊತೆಯಾಗಿ ಆರು ವರ್ಷ ಸಂಸಾರವೂ ನಡೆಸಿದ. ಆದರೆ ಇತ್ತೀಚಿಗೆ ತನ್ನ ಹೆಂಡತಿಗೆ ಕಿಡ್ನಿ ಸಮಸ್ಯೆ ಎದುರಾಗಿ ತಾನು ಕಿಡ್ನಿಯನ್ನು ದಾನಮಾಡಲು ಮುಂದಾದಾಗ, ಇತರೆ ಪರೀಕ್ಷೆಗಳಿಗೆ ಒಳಪಡಿಸಿದಾಗ ಇಬ್ಬರೂ ಒಂದೇ ತಾಯಿಯ ಮಕ್ಕಳೆಂಬುದು ತಿಳಿದು ಬಂದಿದೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಆ ವ್ಯಕ್ತಿ ‘ನಾನು ಆಘಾತಕ್ಕೊಳಗಾಗಿದ್ದೇನೆ ಮತ್ತು ಗೊಂದಲಕ್ಕೊಳಗಾಗಿದ್ದೇನೆ. ಡಿಎನ್‌ಎ ಮಾಹಿತಿಯ ಪ್ರಕಾರ ಮಗು ಹಾಗೂ ಪೋಷಕರು ಕನಿಷ್ಠ 50 ಪ್ರತಿಶತದಷ್ಟು ಹೊಂದಾಣಿಕೆಯನ್ನು ಹೊಂದಬಹುದು. ಮತ್ತು ಒಡಹುಟ್ಟಿದವರು 0-100 ಪ್ರತಿಶತ ಹೊಂದಾಣಿಕೆಯನ್ನು ಹೊಂದಿರಬಹುದು. ಪತಿ ಮತ್ತು ಪತ್ನಿ ಹೆಚ್ಚಿನ ಹೊಂದಾಣಿಕೆಯನ್ನು (Matching) ಹೊಂದುವುದು ಅಪರೂಪ. ಆದರೆ ನಮ್ಮಿಬ್ಬರ ನಡುವೆ ಈ ಹೋಲಿಕೆ ಕಂಡುಬಂದಾಗ ನಾನು ಅದರ ಅರ್ಥವೇನು ಎಂದು ವೈದ್ಯರ ಬಳಿ ಕೇಳಿದೆ. ಅದಕ್ಕವರು ಸಂಬಂಧದಲ್ಲಿ ಆಕೆ ನಿಮಗೆ ತಂಗಿಯಾಗಬೇಕು ಎಂದು ಹೇಳಿದರೆಂದು’ ಆ ವ್ಯಕ್ತಿ ತಿಳಿಸಿದ್ದಾರೆ.
ಅಲ್ಲದೆ ಈ ರೀತಿಯ ವಿಚಿತ್ರ ಪ್ರಕರಣ ಎಲ್ಲಿ ನಡೆದಿದೆ ಎಂದು ಯಾವುದೇ ಮಾಹಿತಿ ಲಭ್ಯವಿಲ್ಲ. ಇದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಬಗೆ ಬಗೆಯಾಗಿ ಕಮೆಂಟ್ಗಳು ಬಂದಿವೆ. ಒಬ್ಬ ಬಳಕೆದಾರರು ‘ನೀವು ಈಗಾಗಲೇ ಆಕೆಯನ್ನು ಮದುವೆಯಾಗಿ ಮಕ್ಕಳನ್ನು ಹೊಂದಿದ್ದೀರಿ. ನೀವು ಅದನ್ನು ಹಿಂದಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇದೇ ರೀತಿ ಮುಂದುವರಿಯಿರಿ’ ಎಂದು ಸಲಹೆ ನೀಡಿದ್ದಾರೆ. ಇನ್ನೊಬ್ಬರು ‘ಆದುದರ ಬಗ್ಗೆ ಯೋಚಿಸಬೇಡಿ. ನೀವು ಈಗಾಗಲೇ ಮಕ್ಕಳನ್ನು ಪಡೆದಿದ್ದೀರಿ. ಅರಿಯದೆ ಎಲ್ಲವೂ ಆಗಿ ಹೋಗಿದೆ. ನಿಮ್ಮ ಶ್ರೀಮತಿ ಕೂಡ ಆರೋಗ್ಯವಾಗಿದ್ದಾರೆ ಎಂದು ಭಾವಿಸುತ್ತೇವೆ. ನೀವು ಸಂತೋಷವಾಗಿದ್ದರೆ, ಅದುವೇ ಮುಖ್ಯವಲ್ಲವೇ. ನಿಮ್ಮ ಪತ್ನಿಗೆ ಮೂತ್ರಪಿಂಡವನ್ನು ದಾನ ಮಾಡಿ ಮತ್ತು ನಿಮ್ಮ ಮಕ್ಕಳಿಗೆ ಉತ್ತಮ ಪೋಷಕರಾಗಿ ಮುಂದುವರಿಯಿರಿ’ಎಂದು ಸಲಹೆ ನೀಡಿದ್ದಾರೆ.