ಈ ವಸ್ತುಗಳು ಕೈಯಿಂದ ಕೆಳಗೆ ಬಿದ್ದರೆ ಅಶುಭ ಸಂಕೇತ ; ಧನ ಹಾನಿ ಖಂಡಿತ!!

Bad luck signs: ಹಿಂದೂ ಧರ್ಮದಲ್ಲಿ (Hinduism) ಶಾಸ್ತ್ರಗಳಿಗೆ ಹೆಚ್ಚಿನ ಪ್ರಾಶಸ್ತ್ಯತೆ ನೀಡಲಾಗುತ್ತದೆ. ಅದು ವಾಸ್ತು ಶಾಸ್ತ್ರವೂ ಆಗಿರಬಹುದು. ಕೆಲವೊಂದು ನಂಬಿಕೆಗಳು, ಆಚರಣೆಗಳು ಇವುಗಳಿಗೆ ತನ್ನದೇ ಆದ ಮಹತ್ವವಿದೆ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಕೆಲವು ವಸ್ತುಗಳು ಕೈಯಿಂದ ಕೆಳಗೆ ಬಿದ್ದರೆ ಅಮಂಗಳಕರ (Bad luck signs) ಪರಿಣಾಮ ಕೆಟ್ಟದಾಗಿರುತ್ತದಂತೆ. ಯಾವುದು ಆ ವಸ್ತುಗಳು? ನೋಡೋಣ.

ಅರಿಶಿನ-ಕುಂಕುಮ: ಹಿಂದೂ ಧರ್ಮದಲ್ಲಿ ಅರಿಶಿನ-ಕುಂಕುಮಕ್ಕೆ ಮಹತ್ವದ ಸ್ಥಾನವಿದೆ. ಅದನ್ನು ಗೌರವಿಸುತ್ತಾರೆ. ಹೆಣ್ಣು ಮಕ್ಕಳಿಗೆ ಅರಿಶಿನ-ಕುಂಕುಮ ಸೌಭಾಗ್ಯದ ಸಂಕೇತವಾಗಿದೆ. ಇದನ್ನು ಶುಭಕಾರ್ಯಗಳಲ್ಲಿ ಬಳಸಲಾಗುತ್ತದೆ. ಹಾಗಾಗಿ ಮಂಗಳಕರ ಅರಿಶಿನ-ಕುಂಕುಮವು ಕೆಳಗೆ ಬೀಳುವುದು ಸರಿಯಲ್ಲ. ಇದು ಅಶುಭ ಸಂಕೇತ. ನಿಮ್ಮ ಕುಟುಂಬದಲ್ಲಿ ಏನಾದರೂ ಅನಾಹುತವಾಗುತ್ತದೆ ಎಂಬುದರ ಸೂಚನೆ ಆಗಿರುತ್ತದೆ ಎಂದು ಹೇಳಲಾಗಿದೆ.

ಉಪ್ಪು: ಉಪ್ಪು (salt) ಇಲ್ಲದೇ ಊಟ ರುಚಿಸೊಲ್ಲ. ಊಟ (food) ರುಚಿಯಾಗಿರಲು ಉಪ್ಪಿನ ಪಾತ್ರ ತುಂಬಾನೇ ಇದೆ. ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಉಪ್ಪು ಕೈತಪ್ಪಿ ಕೆಳಗೆ ಚೆಲ್ಲಬಾರದು. ಚೆಲ್ಲಿದರೆ, ಮನೆಯಲ್ಲಿ ಆರ್ಥಿಕ ಸಂಕಷ್ಟ (financial loss) ಎದುರಾಗುತ್ತದೆ ಎಂಬುದರ ಸಂಕೇತವಾಗಿದೆ.

ಅಕ್ಕಿ (Rice): ಅಕ್ಕಿಯನ್ನು ಅನ್ನಪೂರ್ಣೆಗೆ ಹೋಲಿಸಲಾಗುತ್ತದೆ‌. ಅಕ್ಕಿಯನ್ನು ಲಕ್ಷ್ಮಿ ಸ್ವರೂಪಿಣಿ ಎಂದೂ ಕರೆಯಲಾಗುತ್ತದೆ. ಅನ್ನಪೂರ್ಣೆ ಮನುಷ್ಯನ ಹಸಿವನ್ನು ತಣಿಸುತ್ತಾಳೆ. ಅಕ್ಕಿಯನ್ನು ದೇವರು ಎನ್ನುವ ಕಾರಣ ಇದನ್ನು ಕೈಯಿಂದ ಕೆಳಗೆ ಬೀಳಿಸಬಾರದು. ಬಿದ್ದರೆ ಧನ ಹಾನಿಯ (money loss) ಸಂಕೇತ ಎಂದು ಹೇಳಲಾಗುತ್ತದೆ. ಹಣದ ಸಮಸ್ಯೆ ಕಾಡಬಹುದು ಎನ್ನಲಾಗಿದೆ.

ಎಣ್ಣೆ ಪಾತ್ರೆ: ಎಣ್ಣೆ (oil) ಪಾತ್ರೆ ಕೈಯಿಂದ ಜಾರಿ ಬಿದ್ದರೆ ಅದು ನಿಮ್ಮ ಆತ್ಮೀಯರು ಕಷ್ಟದಲ್ಲಿದ್ದಾರೆ, ಆತ್ಮೀಯರಿಗೆ ಏನಾದರೂ ಕೆಡುಕಾಗಬಹುದು ಎಂಬುದರ ಸಂಕೇತ ಎಂದು ಹೇಳಲಾಗಿದೆ. ಹಾಗಾಗಿ ಎಣ್ಣೆ ಪಾತ್ರೆ ಕೈಯಲ್ಲಿ ಹಿಡಿದಿದ್ದರೆ, ಸ್ವಲ್ಪ ಜಾಗರೂಕರಾಗಿರುವುದು ಉತ್ತಮ.

ತುಪ್ಪದ ದೀಪ: ಶುಭ ಸಂದರ್ಭಗಳಲ್ಲಿ ದೇವರಿಗೆ ತುಪ್ಪದ ದೀಪವನ್ನು ಹಚ್ಚಲಾಗುತ್ತದೆ. ಇದನ್ನು ಶುಭಸಂಕೇತ ಎಂದು ಬಿಂಬಿಸಲಾಗುತ್ತದೆ. ಹಾಗಾಗಿ ತುಪ್ಪದ ದೀಪ ಕೆಳಗೆ ಬಿದ್ದರೆ ಅದು ಸಂಭವಿಸುವ ಅಹಿತಕರ ಘಟನೆಯ ಸೂಚನೆ ನೀಡುತ್ತಿದೆ ಎಂದು ಅರ್ಥ. ತುಪ್ಪದ ದೀಪವನ್ನು ಜಾಗರೂಕತೆಯಿಂದ ಹಿಡಿದುಕೊಳ್ಳಬೇಕು. ಇಲ್ಲವಾದರೆ, ಅವಘಡಗಳು ಸಂಭವಿಸಬಹುದು.

Leave A Reply

Your email address will not be published.