Home Interesting Uttar Pradesh: ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ !

Uttar Pradesh: ವಧುವಿಗೆ ಪಿಯುಸಿಯಲ್ಲಿ ಕಡಿಮೆ ಅಂಕ ಎಂದು ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವರ !

Uttar Pradesh

Hindu neighbor gifts plot of land

Hindu neighbour gifts land to Muslim journalist

UttarPradesh groom cancels marriage: ಮದುವೆ (marriage) ಮಂಟಪದಲ್ಲಿ ಹಲವು ರಾದ್ಧಾಂತಗಳು ನಡೆದು ಮದುವೆ ಕ್ಯಾನ್ಸಲ್ ಆಗುವ ಪ್ರಕರಣಗಳು ಸಾಕಷ್ಟಿವೆ. ಕೆಲವೊಮ್ಮೆ ಸಣ್ಣಪುಟ್ಟ ವಿಷಯಗಳಿಗೆ ಮದುವೆ ಕ್ಯಾನ್ಸಲ್ ಆಗಿಬಿಡುತ್ತೆ. ಆದರೆ ಇಲ್ಲಿ ನಡೆದಿರುವ ಘಟನೆ ವಿಭಿನ್ನವಾಗಿದೆ. ಜನರು ಹೀಗೂ ಇರ್ತಾರಾ?? ಅಂತ ನೀವೇ ಪ್ರಶ್ನೆ ಮಾಡಿಕೊಳ್ಳುವಂತಿದೆ ಈ ಘಟನೆ. ಹೌದು, ಇಲ್ಲೊಬ್ಬ ವರ, ವಧುವಿಗೆ (bride) ಪಿಯುಸಿಯಲ್ಲಿ ಕಡಿಮೆ ಅಂಕ ಎಂದು ಮದುವೆ ಕ್ಯಾನ್ಸಲ್ ಮಾಡಿದ್ದಾನೆ.

ಸದ್ಯ ಈ ಘಟನೆ ಉತ್ತರ ಪ್ರದೇಶದ (Uttar Pradesh) ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಬಗಾನ್ವಾ ಗ್ರಾಮದ ರಾಮಶಂಕರ್ ಅವರ ಪುತ್ರ ಸೋನು ಅವರೊಂದಿಗೆ ಸೋನಿ ಎಂಬ ಹುಡುಗಿಯ ಜೊತೆಗೆ ವಿವಾಹವನ್ನು ನಿಶ್ಚಯಿಸಿದ್ದರು. ಎರಡೂ ಕುಟುಂಬದ ಒಪ್ಪಿಗೆಯ ಮೇರೆಗೆ ವಿವಾಹ ನಡೆಯುತ್ತಿತ್ತು. ಮದುವೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನೂ ಮಾಡಿದ್ದರು. ಇದಕ್ಕಾಗಿ ವಧುವಿನ ಮನೆಯವರು 60,000 ರೂಪಾಯಿಗಳನ್ನು ಖರ್ಚು ಮಾಡಿದ್ದರು ಮತ್ತು ವರನಿಗೆ 15,000 ರೂಪಾಯಿಗಳ ಚಿನ್ನದ ಉಂಗುರವನ್ನು (gold ring) ಸಹ ನೀಡಿದ್ದರು ಎನ್ನಲಾಗಿದೆ.

ಆದರೆ, ವರನ ಕುಟುಂಬಸ್ಥರು ಮರುದಿನವೇ ವರದಕ್ಷಿಣೆಗಾಗಿ ಬೇಡಿಕೆ ಇಟ್ಟಿದ್ದಾರೆ. ಈ ವೇಳೆ ವಧುವಿನ ತಂದೆ ಹೆಚ್ಚಿನ ವರದಕ್ಷಿಣೆ (dowry) ನೀಡಲು ನಿರಾಕರಿಸಿದ್ದಾರೆ. ಈ ಕಾರಣ ವರನ ಕುಟುಂಬಸ್ಥರು ಹುಡುಗಿ ಪಿಯುಸಿಯಲ್ಲಿ (puc) ಕಡಿಮೆ ಅಂಕಗಳನ್ನು ಪಡೆದಿದ್ದಾಳೆ ಎಂಬ ನೆಪವೊಡ್ಡಿ ಮದುವೆಯನ್ನು ಕ್ಯಾನ್ಸಲ್ (UttarPradesh groom cancels marriage) ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ವರನ ಕುಟುಂಬಸ್ಥರ ವಿರುದ್ಧ ಎಫ್ಐಆರ್ (FIR) ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಪೊಲೀಸರು ಎರಡು ಕುಟುಂಬಸ್ಥರನ್ನು ಕೂರಿಸಿಕೊಂಡು ಕೌನ್ಸೆಲಿಂಗ್ ಮಾಡುವ ಮೂಲಕ ಪ್ರಕರಣವನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ. ಇಷ್ಟಾದರೂ
ಒಮ್ಮತಕ್ಕೆ ಬರದಿದ್ದರೆ, ಪೊಲೀಸರು ಇವರ ವಿರುದ್ಧ ಸೂಕ್ತವಾದ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತ್ರಿವಾ ಕೊತ್ವಾಲಿ ಪ್ರದೇಶದ ಪೊಲೀಸ್ ಠಾಣೆಯ ಉಸ್ತುವಾರಿ ಪಿ.ಎನ್. ಬಾಜಪೈ ಹೇಳಿದ್ದಾರೆ.