Highest Mileage SUV : ಅತಿ ಹೆಚ್ಚು ಮೈಲೇಜ್ ನೀಡುವ ಜನಪ್ರಿಯ ಎಸ್‌ಯುವಿ ಕಾರುಗಳು ಯಾವುದು ಗೊತ್ತಾ? ಇಲ್ಲಿದೆ ಲಿಸ್ಟ್‌!

Highest Mileage SUV: ಹೊಸ ವರ್ಷದಲ್ಲಿ ಆಟೊಮೊಬೈಲ್ (Automobile )ಕ್ಷೇತ್ರವು ಸಾಕಷ್ಟು ಸುಧಾರಣೆ ಕಂಡಿದ್ದು, 2023ರ ಅಂಕಿ ಅಂಶ ಪ್ರಕಾರ ಕಾರು (Car) ಉದ್ಯಮದ ಮಾರುಕಟ್ಟೆಯಲ್ಲಿ (Market ) ಭಾರತದಲ್ಲಿ( India)ಅತಿ ಹೆಚ್ಚು ಮಾರಾಟವಾದ ಟಾಪ್ 5 ಕಾರುಗಳ ಪೈಕಿ ಮಾರುತಿ ಸುಜುಕಿ(Maruti Suzuki) ಅಗ್ರಗಣ್ಯ (Top Position)ಸ್ಥಾನದಲ್ಲಿದ್ದು, ಇದರ ನಾಲ್ಕು ಮಾದರಿ ಕಾರುಗಳು ಮುಂಚೂಣಿ ಸ್ಥಾನವನ್ನು ಪಡೆದುಕೊಂಡಿದೆ. ನೀವು ಹೊಸ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಮಾಹಿತಿ ನಿಮಗೆ ನೆರವಾಗುವುದು ಖಚಿತ.

ಪ್ರಸ್ತುತ ಎಸ್ ಯುವಿ ಕಾರುಗಳೆಂದರೆ ಜನರಿಗೆ (SUV Car) ಕ್ರೇಜ್ ಇದ್ದರೂ ಕೂಡ ಎಸ್ ಯುವಿ ಕಾರುಗಳು ಹೆಚ್ಚು ಮೈಲೇಜ್ ನೀಡುವುದಿಲ್ಲ ಎಂಬ ಕಾರಣದಿಂದ ಕೊಂಡುಕೊಳ್ಳಲು ಹಿಂದೆ ಮುಂದೆ ಆಲೋಚನೆ ಮಾಡುತ್ತಾರೆ. ಆದರೆ, ನೀವಿನ್ನೂ ಹೀಗೆ ಯೋಚಿಸುವ ಅವಶ್ಯಕತೆ ಇಲ್ಲ. ನೀವು ಎಸ್ ಯುವಿ ಕಾರುಗಳನ್ನು ಖರೀದಿಸುವ ಯೋಜನೆ ಹಾಕಿದ್ದರೆ ಅತ್ಯಧಿಕ ಮೈಲೇಜ್( Highest Mileage SUV)ನೀಡಬಲ್ಲ ಆರು ಜನಪ್ರಿಯ ಎಸ್ ಯುವಿ ಕಾರುಗಳ ಮಾಹಿತಿ ಇಲ್ಲಿದೆ.

ದಿನಂಪ್ರತಿ ಹೊಸ ಹೊಸ ವೈಶಿಷ್ಟ್ಯದ ಆಕರ್ಷಕ ಲುಕ್ ಗ್ರಾಹಕರ ಮನ ಸೆಳೆಯುವ ಕಾರುಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿ ಮಾಡುತ್ತಲೇ ಇರುತ್ತವೆ. ಈ ನಡುವೆ ಮೈಲೇಜ್ ವಿಷಯವನ್ನೂ ಗಮನದಲ್ಲಿರಿಸಿ ಹೆಚ್ಚಿನ. ಗ್ರಾಹಕರು SUV ಕಾರುಗಳ ಖರೀದಿಗೆ ಹಿಂದೇಟು ಹಾಕುತ್ತಿರುವುದನ್ನೂ ಗಮನಿಸಿದ ಕಾರು ತಯಾರಿಕಾ ಕಂಪನಿಗಳು ಇದೀಗ, ಹೆಚ್ಚಿನ ಮೈಲೇಜ್ ನೀಡುವ ಕಾರುಗಳನ್ನು ಪರಿಚಯಿಸಿದೆ. ಹಾಗಿದ್ರೆ, ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರುಗಳು ಯಾವುವು ಎಂದು ತಿಳಿಯ ಹೊರಟರೆ:

ಭಾರತದಲ್ಲಿ ಹಲವು ಎಸ್ಯುವಿ ಕಾರುಗಳು ಲಭ್ಯವಿದ್ದರು ಕೂಡ, ಅತ್ಯಧಿಕ ಮೈಲೇಜ್ (Highest Mileage SUV)ನೀಡುವ ಟಾಪ್ 6 ಎಸ್ಯುವಿ ಕಾರುಗಳು ಹೀಗಿವೆ:

ಹುಂಡೈ ವೆನ್ಯೂ ಎಸ್ಯುವಿ(Hyundai Venue):
ಹ್ಯುಂಡೈ Venue ಸದ್ಯ, 16 ವೆರಿಯೆಂಟ್‌‌ಗಳನ್ನು ಹೊಂದಿದ್ದು, ವಿವಿಧ ನಮೂನೆಯ 6 ಬಣ್ಣಗಳಲ್ಲಿ ಲಭ್ಯವಿರಲಿದೆ. ಹ್ಯುಂಡೈ Venue ಮಾದರಿಯ ಬೆಲೆ, ತಾಂತ್ರಿಕ ವೈಶಿಷ್ಟ್ಯತೆಗಳನ್ನೂ ಹೊಂದಿದ್ದು, ಹುಂಡೈ ಕಂಪನಿ (Hyundai Company)ವೆನ್ಯೂ ಎಸ್ಯುವಿ ಸಹ 23.4KMPL ವರೆಗೆ ಮೈಲೇಜ್ ನೀಡಬಲ್ಲದು ಎಂದು ಕಂಪನಿ ತಿಳಿಸಿದೆ.

ಮಾರುತಿ ಬ್ರೆಝಾ:(Maruti Suzuki Brezza)
ದೇಶದ ಅತಿ ಹೆಚ್ಚು ಜನರ ಆಕರ್ಷಕ ಕಾರ್ ಆಗಿರುವ ಮಾರುತಿ ಬ್ರೆಝಾ ಪೆಟ್ರೋಲ್ ಎಂಜಿನ್ನೊಂದಿಗೆ ಮಾತ್ರ ಬರುತ್ತದೆ. ಈ ಕಾರ್ 20.15KMPL ವರೆಗೆ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ. ಮಾರುತಿ ಸುಜುಕಿಯ ಬ್ರೆಝಾ ಸಿಎನ್ಜಿ (Maruti Suzuki Brezza CNG )ಕೂಡ ಈ ವರ್ಷದ ದ್ವಿತೀಯಾರ್ಧದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಲಗ್ಗೆ ಇಡಲು ಅಣಿಯಾಗುತ್ತಿದೆ. ಬ್ರೆಝಾ ಸಿಎನ್ಜಿ (Brezza CNG)ಎಂಜಿನ್ ಕಾರ್ಯಕ್ಷಮತೆ ಗಮನಿಸಿದರೆ, ಇದು 1.5-ಲೀಟರ್, 4-ಸಿಲಿಂಡರ್ K15C ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 87 hp ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಕಿಯಾ ಸೋನೆಟ್( Kia Sonet)
ಕಿಯಾ ಸೋನೆಟ್ 24.2 ಕಿ,.ಮೀ/ ಪಿಎಲ್ ವರೆಗೆ ಮೈಲೇಜ್ ಒದಗಿಸುತ್ತದೆ.

ಮಾರುತಿ ಸುಜುಕಿಯ ಗ್ರಾಂಡ್ ವಿಟಾರಾ(Maruti Suzuki Grand Vitara)
ಮಾರುತಿ ಸುಜುಕಿ ಕಾರುಗಳಲ್ಲಿ SUV ಹೆಚ್ಚಿನ ಮೈಲೇಜ್ ನೀಡಬಲ್ಲ ಕಾರುಗಳಲ್ಲಿ ಮಾರುತಿ ಸುಜುಕಿಯ ಗ್ರಾಂಡ್ ವಿಟಾರಾ(Maruti Suzuki Grand Vitara) ಕೂಡ ಒಂದಾಗಿದೆ. (Maruti Suzuki Grand Vitara S-CNG ) ಗ್ರ್ಯಾಂಡ್‌ ವಿಟಾರಾವು ಡೆಲ್ಟಾ ಮತ್ತು ಝೆಟಾ ಎಂಬ ಎರಡು ಆವೃತ್ತಿಗಳಲ್ಲಿ ಲಭ್ಯವಿದೆ ಮಾರುತಿ ಸುಜುಕಿಯ ತನ್ನ ಗ್ರಾಂಡ್ ವಿಟಾರಾ ಎಸ್ಯುವಿ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 27.97 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಟಾಟಾ ನೆಕ್ಸಾನ್:(Tata Nexon)
ಟಾಟಾ (Tata) ಕಂಪೆನಿಯ ಕಾರುಗಳು ಮತ್ತು SUVಗಳು ಉತ್ತಮ ಗುಣಮಟ್ಟದ್ದಾಗಿರುತ್ತವೆ ಎನ್ನುವುದು ಹಲವರ ನಂಬಿಕೆ. ಬಹುತೇಕರು ಟಾಟಾ ಕಂಪೆನಿ ತಯಾರಿಸಿದ ಹೊಸ ಮಾದರಿಯ ಎಸ್‌ಯುವಿಗಳನ್ನು ಖರೀದಿಸಲು ಎದುರು ನೋಡುವುದು ವಾಡಿಕೆ.ಟಾಟಾ ನೆಕ್ಸನ್ ಎಸ್‌ಯುವಿಯಲ್ಲಿ ಪಂಚ್‌ಗಿಂತಲೂ ಹೆಚ್ಚಿನ ಸ್ಥಳವಕಾಶವಿದ್ದು, ನೆಕ್ಸನ್ ಪಂಚ್‌ ಗಿಂತ ಸುಮಾರು 170 ಮಿಲಿಮೀಟರ್ ಉದ್ದ ಮತ್ತು ಸುಮಾರು 60 ಮಿಲಿಮೀಟರ್ ಅಗಲವಿದೆ. ದೇಶದ ಅತಿ ಬೇಡಿಕೆಯ ಎಸ್ಯುವಿ ಆಗಿರುವ ಟಾಟಾ ನೆಕ್ಸಾನ್ ಕೂಡ ಒಂದು ಲೀಟರ್ ಪೆಟ್ರೋಲ್ ನಲ್ಲಿ ಸುಮಾರು 21.5ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ.

ಟೊಯೋಟಾ ಅರ್ಬನ್ ಕ್ರೂಸರ್ ಹೈರೈಡರ್:(Urban Cruiser Hyryder)

ಬಿ ಎಸ್.ಯು.ವಿ ಸೆಗ್ಮೆಂಟ್ ನಲ್ಲಿ(SUV) ಮೊದಲ ಬಾರಿಗೆ ಸೆಲ್ಫ್-ಚಾರ್ಜಿಂಗ್(Self Charging) ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್(Hybrid Electrical Vehicle) ವೆಹಿಕಲ್ ಆಗಿರುವ ಅರ್ಬನ್ ಕ್ರೂಸರ್ ಹೈರೈಡರ್ ಮಾದರಿಯು ಕಾರ್ಯಕ್ಷಮತೆ, ಅತ್ಯುತ್ತಮ ದರ್ಜೆಯ ಇಂಧನ ದಕ್ಷತೆ, ತ್ವರಿತ ವೇಗವರ್ಧನೆ, ಸಂಪರ್ಕಿತ ಕಾರು ವೈಶಿಷ್ಟ್ಯಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.ಟೊಯೋಟಾದ( Toyota) ಅರ್ಬನ್ ಕ್ರೂಸರ್ ಹೈರೈಡರ್ ಸಹ ಒಂದು ಲೀಟರ್ ಪೆಟ್ರೋಲ್ ನಲ್ಲಿ 27.97 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ ಎನ್ನಲಾಗಿದೆ.

 

ಇದನ್ನೂ ಓದಿ: Mahindra XUV700: ಚಾಲಕನಿಲ್ಲದೇ ಓಡಿಸಬಹುದಾದ ಕಾರನ್ನು ರಸ್ತೆಗಳಿಸಿದ ಮಹೀಂದ್ರಾ! ತಾನಾಗೇ ಓಡುವ ಮಹೀಂದ್ರಾ XUV700 ನ ವೀಡಿಯೊ ಈಗ ವೈರಲ್!

Leave A Reply

Your email address will not be published.