Post Office ಈ ಯೋಜನೆಯಲ್ಲಿ ಗ್ರಾಹಕರಿಗೆ ಸಿಗಲಿದೆ 5.8% ಬಡ್ಡಿ !

RD scheme :ಸರ್ಕಾರವು ವಿವಿಧ ವರ್ಗದ ಜನಗಳಿಗೆ ವಿವಿಧ ರೀತಿಯ ಯೋಜನೆಯನ್ನು ನೀಡುತ್ತಾ ಬಂದಿದೆ. ಹಾಗಾಗಿ ಜನರ ಅನುಕೂಲಕ್ಕಾಗಿ ಸರ್ಕಾರದಿಂದ ಹಲವು ರೀತಿಯ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಅಡಿಯಲ್ಲಿ ಜನರಿಗೆ ಅಂಚೆ ಕಚೇರಿಯ (post office)ಮೂಲಕ ಹಲವು ಉಳಿತಾಯ(savings) ಯೋಜನೆ ಲಭ್ಯವಾಗುತ್ತಿದೆ. ಸರ್ಕಾರವು ನೀಡಿರುವ ಉಳಿತಾಯ ಯೋಜನೆಯಲ್ಲಿ ಆರ್‌ಡಿ (RD scheme)ಉಳಿತಾಯಕ್ಕೆ ಜನರಿಗೆ ಉತ್ತಮವಾದ ಆಯ್ಕೆಯಾಗಿದೆ. ಇಂದು ವಿವಿಧ ವರ್ಗದ ಜನರಿಗೆ ಹಲವು ರೀತಿಯ ಸೌಲಭ್ಯಗಳನ್ನು ನೀಡುತ್ತಿದ್ದು ಹಾಗೆಯೇ ಅಂಚೆ ಕಚೇರಿಯ ಆರ್ ಡಿ (RD)ಗಳ ಮೂಲಕ ಜನರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಹಾಗೆಯೇ ಒಂದು ಯೋಜನೆಯನ್ನು ಜನರು ದೀರ್ಘಕಾಲ ಉಳಿಸಬೇಕಾದರೆ ಆರ್ ಡಿ ಯೋಜನೆಯಲ್ಲಿ ಉಳಿಸಬಹುದು.

ಜನರು ತಮ್ಮ ಹಣವನ್ನು ಉಳಿತಾಯ ಮಾಡಲು ಯಾವ ರೀತಿ ಖಾತೆ (account)ತೆರೆಯಬಹುದು?

ಈ ಯೋಜನೆಯ ಅಡಿಯಲ್ಲಿ ಜನರು ತಮಗೆ ಬೇಕಾದಷ್ಟು ಎಷ್ಟು ಖಾತೆಗಳನ್ನು (account) ಬೇಕಾದರೂ ತೆರೆಯಬಹುದು. ಈ ಖಾತೆಯನ್ನು ಯಾರೆಲ್ಲ ತೆರೆಯಬಹುದೆಂದರೆ ವಯಸ್ಕ, ಜಂಟಿ ಖಾತೆ (ಮೂರು ವಯಸ್ಕರ ವರೆಗೆ) ಹಾಗೂ ಅಪ್ರಾಪ್ತ ವಯಸ್ಕ , ಆರೋಗ್ಯಕರವಲ್ಲದ ಮನಸ್ಸಿನ ವ್ಯಕ್ತಿ ಮತ್ತು 10 ವರ್ಷಕ್ಕಿಂತ ಮೇಲ್ಪಟ್ಟ ಅಪ್ರಾಪ್ತ ವಯಸ್ಕರು ತಮ್ಮ ಸ್ವಂತ ಹೆಸರಿನಲ್ಲಿ ಈ ಖಾತೆಯನ್ನು ಧಾರಾಳವಾಗಿ ತೆರೆಯಬಹುದು. ಪ್ರತಿ ತಿಂಗಳು ಖಾತೆ ತೆರೆದು ಹಣವನ್ನು ಹೂಡಿಕೆ (investment) ಮಾಡುವುದರಿಂದ ಜನರು ಈ ಯೋಜನೆಯ ಲಾಭವನ್ನೂ ಸುಲಭವಾಗಿ ಪಡೆಯಬಹುದು.

ಈ ಯೋಜನೆಯಲ್ಲಿ ಯಾವ ರೀತಿ ಬಂಡವಾಳ(capital) ಮಾಡಬಹುದೆಂದರೆ ಪೋಸ್ಟ್ ಆಫೀಸ್ ಪುನರಾವರ್ತಿಸುವ ಠೇವಣಿ(deposit) ಖಾತೆಯಲ್ಲಿ (RD) ಹಣವನ್ನು ಜನರು ಹೂಡಿಕೆ ಮಾಡಬಹುದು. ಈ ಯೋಜನೆಯ ಮೂಲಕ ಅಂಚೆ ಕಛೇರಿಯು 5.8 ಶೇ. ಬಡ್ಡಿಯನ್ನು ಜನರಿಗೆ ನೀಡುತ್ತಿದೆ. ಈ ಯೋಜನೆಯಲ್ಲಿ ಜನರು ನಿರಾಳವಾಗಿ ತಮ್ಮ ಹಣವನ್ನು ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವವರು ಪ್ರಥಮವಾಗಿ ತಿಂಗಳಿಗೆ ಕನಿಷ್ಠ 100 ರೂಪಾಯಿ ಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇರುವುದಿಲ್ಲ.

ಇನ್ನು ಈ ಖಾತೆಯ ಮುಕ್ತಾಯ ಅವಧಿ ಯಾವ ರೀತಿ ಇರಬಹುದು ಎಂದರೆ ಪೋಸ್ಟ್ ಆಫೀಸ್ನಲ್ಲಿ (post office) ತೆರೆಯಲಾದ ಆರ್ ಡಿ (RD)ಯ ಮುಕ್ತಾಯ ಅವಧಿಯು ಐದು ವರ್ಷಗಳ (5 year) ವರೆಗೆ ಇರುತ್ತದೆ. ಅದಕ್ಕಿಂತ ಅಧಿಕವಾಗಿ ಇರುವುದಿಲ್ಲ. ಈ ಆರ್‌ಡಿಯನ್ನು ಐದು ವರ್ಷಗಳ ಕಾಲ ಹಣವನ್ನು ಕಟ್ಟಿ ನಡೆದುಕೊಂಡು ಬರಬೇಕು. ಅಂದರೆ 60 ತಿಂಗಳು (60 month) ನಡೆಸಬೇಕಾಗುತ್ತದೆ. ಯಾರಾದರೂ ತಮಗೆ ಮೊದಲೇ ತನ್ನ ಆರ್‌ಡಿಯನ್ನು ಮುಚ್ಚಲು ಬೇಕೆಂದು ಬಯಸಿದರೆ ಅವರು ಮೂರು ವರ್ಷಗಳ ನಂತರ ಆರ್‌ಡಿಯನ್ನು ಮುಚ್ಚಬಹುದು. ಇದಕ್ಕಿಂತ ಮಿಗಿಲಾಗಿ ಸಾಲವನ್ನು ಪಡೆಯಬೇಕೆಂದರೆ ಪೋಸ್ಟ್ ಆಫೀಸ್ ಆರ್‌ಡಿ ಯೋಜನೆಯಲ್ಲಿಯೂ ಸಾಲವನ್ನು ಪಡೆಯಬಹುದು.

Leave A Reply

Your email address will not be published.