Home News Toyota Fortuner : ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಕಾರ್! Creta ಬೆಲೆಯಲ್ಲಿ ಟೊಯೊಟಾ ಫಾರ್ಚುನರ್...

Toyota Fortuner : ಕಡಿಮೆ ಬಜೆಟ್‌ನಲ್ಲಿ ಅತ್ಯುತ್ತಮ ಕಾರ್! Creta ಬೆಲೆಯಲ್ಲಿ ಟೊಯೊಟಾ ಫಾರ್ಚುನರ್ ಕಾರ್ ನಿಮ್ಮದಾಗಿಸಿ!!!

Toyota fortuner car

Hindu neighbor gifts plot of land

Hindu neighbour gifts land to Muslim journalist

Toyota fortuner car : ಎಸ್‌ಯುವಿ ಕಾರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಇದೀಗ ಟೊಯೊಟಾ ಫಾರ್ಚುನರ್ ಕಾರನ್ನು ಕಡಿಮೆ ಬಜೆಟ್‌ನಲ್ಲಿ ನೀವು ಕೊಂಡುಕೊಳ್ಳುವ ಅವಕಾಶ ಇಲ್ಲಿದೆ. ಹೌದು, ಕ್ರೆಟಾ ಬೆಲೆಯಲ್ಲಿ ನೀವು ಟೊಯೊಟಾ ಫಾರ್ಚುನರ್ ಕಾರ್ ಅನ್ನು ಖರೀದಿಸಬಹುದಾಗಿದೆ.

ವಾಸ್ತವವಾಗಿ, ಟೊಯೊಟಾ ಫಾರ್ಚುನರ್ (Toyota fortuner car) ಎಸ್‌ಯುವಿ ಕಾರಿನ ಬೆಲೆ ಅಂದಾಜು 32.5 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಇದರ ಉನ್ನತ ರೂಪಾಂತರದ ಬೆಲೆ ಸುಮಾರು 50 ಲಕ್ಷ ರೂ.ಗಳವರೆಗೆ ಇರಲಿದೆ.

ಟೊಯೊಟಾ ಫಾರ್ಚುನರ್ ಎಸ್‌ಯುವಿ ದುಬಾರಿ (costly ) ಬೆಲೆಯಿಂದಾಗಿ ಎಷ್ಟೇ ಆಸೆ ಇದ್ದರೂ ಕೂಡ ಎಲ್ಲರಿಗೂ ಎಸ್‌ಯುವಿ ಕಾರ್ ಅನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಆದರೆ, ಇಲ್ಲಿ ನೀವು ಕ್ರೆಟಾ ಬೆಲೆಯಲ್ಲಿ ಟೊಯೊಟಾ ಫಾರ್ಚುನರ್ ಕಾರ್ ಅನ್ನು ಖರೀದಿಸಬಹುದಾಗಿದೆ. ಆದರೆ, ಇವು ಸೆಕೆಂಡ್ ಹ್ಯಾಂಡ್ ಟೊಯೊಟಾ ಫಾರ್ಚುನರ್ ಆಗಿರಲಿವೆ.

ನೀವು ಸೆಕೆಂಡ್ ಹ್ಯಾಂಡ್ ಟೊಯೊಟಾ ಫಾರ್ಚುನರ್ ಅನ್ನು ಖರೀದಿಸಲು ಯೋಚಿಸುತ್ತಿದ್ದರೆ ಕಾರ್ ದೇಖೋ ವೆಬ್‌ಸೈಟ್‌ನಲ್ಲಿ ಸುಮಾರು 12 ಲಕ್ಷ ರೂ. ಗಳಲ್ಲಿ ಟೊಯೊಟಾ ಫಾರ್ಚುನರ್ ಅನ್ನು ಖರೀದಿಸಬಹುದಾಗಿದೆ.

ಕಾರ್ ದೇಖೋ ವೆಬ್‌ಸೈಟ್‌ನಲ್ಲಿ 2015 ಟೊಯೋಟಾ ಫಾರ್ಚುನರ್ 4×2 ಮ್ಯಾನುವಲ್‌, ಇದು ಒಟ್ಟು 96,004 ಕಿಮೀ ಕ್ರಮಿಸಿರುವ ಈ ಕಾರಿಗೆ 13 ಲಕ್ಷ ರೂ. ಎಂದು ಪ್ರಕಟಿಸಿದ್ದು . ಎರಡನೇ ಮಾಲೀಕರ ಒಡೆತನದಲ್ಲಿರುವ ಈ ಕಾರು (car ) ಗಾಜಿಯಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ.

ಕಾರ್ ದೇಖೋ ವೆಬ್‌ಸೈಟ್‌ನಲ್ಲಿರುವ ಇನ್ನೊಂದು ಕಾರ್ ಎಂದರೆ 2014 ಟೊಯೋಟಾ ಫಾರ್ಚುನರ್ 4×2 ಮ್ಯಾನುಯಲ್. ಒಟ್ಟು 1,27,429 ಕಿಮೀ ಕ್ರಮಿಸಿರುವ ಈ ಕಾರಿನ ಬೆಲೆ 12.62 ಲಕ್ಷ ರೂ. ಆಗಿದೆ. ಈ ಕಾರ್ ಮೊದಲ ಮಾಲೀಕರಿಂದ ಮಾರಾಟಕ್ಕೆ ಲಭ್ಯವಿರಲಿದೆ. ಇದೂ ಸಹ ಗಾಜಿಯಾಬಾದ್‌ನಲ್ಲೂ ಮಾರಾಟಕ್ಕೆ ಲಭ್ಯವಿದೆ.

ಕಾರ್ ದೇಖೋ ವೆಬ್‌ಸೈಟ್‌ನಲ್ಲಿ (car dekho website ) ಪಟ್ಟಿ ಮಾಡಲಾಗಿರುವ ಮತ್ತೊಂದು ಕಾರ್ ಎಂದರೆ, 2014 Toyota Fortuner 4×4 MT ಅನ್ನು 12.40 ಲಕ್ಷ ರೂ.ಗಳಲ್ಲಿ ಪಟ್ಟಿ ಮಾಡಲಾಗಿದೆ. ಈ ಡೀಸೆಲ್ ಎಂಜಿನ್ ಮತ್ತು ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಕಾರ್ ಇದುವರೆಗೂ 1,59,166 ಕಿ.ಮೀ ಕ್ರಮಿಸಿದ್ದು, ಕಾರು ಎರಡನೇ ಓನರ್ ಮಾಲೀಕತ್ವದಲ್ಲಿದೆ. ಈ ಕಾರ್ ಗಾಜಿಯಾಬಾದ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ನೀವು ಕಡಿಮೆ ಬೆಲೆಯಲ್ಲಿ ಟೊಯೊಟಾ ಫಾರ್ಚುನರ್ ಎಸ್‌ಯುವಿ ಕಾರನ್ನು ಕಾರ್ ದೇಖೋ ವೆಬ್‌ಸೈಟ್‌ನಲ್ಲಿ ಮೂಲಕ ಖರೀದಿಸಬಹುದಾಗಿದೆ.