Home Interesting Donkey : ಅಬ್ಬಾ! ಕತ್ತೆಗೂ ಒಂದು ಕಾಲ! ಈ ಕತ್ತೆ ಕೊಳ್ಳೋ ರೇಟಿಗೆ ಒಂದು ಐಷರಾಮಿ...

Donkey : ಅಬ್ಬಾ! ಕತ್ತೆಗೂ ಒಂದು ಕಾಲ! ಈ ಕತ್ತೆ ಕೊಳ್ಳೋ ರೇಟಿಗೆ ಒಂದು ಐಷರಾಮಿ ಕಾರು ಖರೀದಿಸಬಹುದು! ಅಷ್ಟಕ್ಕೂ ಈ ಕತ್ತೆದೇನು ವಿಶೇಷ?

Donkey

Hindu neighbor gifts plot of land

Hindu neighbour gifts land to Muslim journalist

Donkey: ಈ ಊರಿನ ಜನರು ಕತ್ತೆಗೆ(Donkey)ವ್ಯಯಿಸುವ ಬೆಲೆ (Rate) ತಿಳಿದರೆ ನೀವು ಗಾಬರಿಯಾಗೋದು ಗ್ಯಾರಂಟಿ!! ಯಾಕೆ ಅಂತೀರಾ? ಏನು ರೇಟ್ ಗುರು!! ಈ ಕತ್ತೆಗೆ ಹಾಕೋ ದುಡ್ಡಲ್ಲಿ ಬೈಕ್ ಇಲ್ಲವೇ ಕಾರನ್ನೇ (Car) ಖರೀದಿ ಮಾಡಬಹುದೇನೋ!! ಅರೇ ಕತ್ತೆಗೆ ಈ ಪಾಟಿ ಡಿಮ್ಯಾಂಡಾ?? ಎಂದು ನಿಮಗೆ ಅಚ್ಚರಿಯಾಗಬಹುದು.

ರಾಜ್ಯದಲ್ಲಿ ಮಾಲೆಗಾಂವ್, ನಾಂದೇಡ್, ಜೆಜುರಿ ‘ದೇಲ್ಗಾಂವ್ ರಾಜಾ’ ಮತ್ತು ಮಧಿಯಲ್ಲಿ ಕತ್ತೆ ಮಾರುಕಟ್ಟೆಯಲ್ಲಿ ಕತ್ತೆ ಖರೀದಿಗೆ ವ್ಯಾಪಾರಕ್ಕೆ ವ್ಯಾಪಾರಿಗಳು( Sellers) ಬರುತ್ತಾರೆ. ಜೇನು ಮಾರುಕಟ್ಟೆಗೆ ಆಂಧ್ರಪ್ರದೇಶ, ಕರ್ನಾಟಕ (Karnataka) ಗುಜರಾತ್, ತೆಲಂಗಾಣ ರಾಜ್ಯಗಳಿಂದಲೂ ವ್ಯಾಪಾರಿಗಳು ಬರುತ್ತಾರೆ.

ರಾಜ್ಯದಲ್ಲಿ (State) ಒಂದೇ ಕಡೆ ಕತ್ತೆಗಳು ಲಕ್ಷಗಟ್ಟಲೆ ಹಣ ವ್ಯಯಿಸುತ್ತಾರೆ. ಅರೇ ಇದೆಲ್ಲಿ ಅಂತೀರಾ?? ಕಾನಿಫ್‌ನಾಥ್ ಯಾತ್ರೆಯ ಕತ್ತೆ ಮಾರುಕಟ್ಟೆಗೆ ಪಥರ್ಡಿ ತಾಲೂಕಿನ ಮಧಿ ಖ್ಯಾತಿ ಪಡೆದಿದ್ದು, ಇಲ್ಲಿ ಸಾವಿರಾರು ನಾಥ ಭಕ್ತರು ಆಗಮಿಸುತ್ತಾರಂತೆ. ಹಿಂದಿನಿಂದಲೂ ಕತ್ತೆಗಳ (Donkey)ಮಾರುಕಟ್ಟೆ (Market)ಖಯಾಳಿ ಚಾಲ್ತಿಯಲ್ಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ!. ಮಾರುಕಟ್ಟೆಗೆ ಮುಂಚೆಯೇ ಟಿಸ್‌ಗಾಂವ್‌ನಲ್ಲಿ ಕೆಲವು ಸರಕುಗಳನ್ನು(Goods) ಮಾರಾಟ ಮಾಡಲಾಗುತ್ತಿತ್ತು. ರಾಜ್ಯದ ಎಲ್ಲಾ ಪ್ರಮುಖ ಭಾಗಗಳಿಂದ ವ್ಯಾಪಾರಿಗಳು ಮತ್ತು ಗ್ರಾಹಕರು ಖರೀದಿಸಲು ಮತ್ತು ಮಾರಾಟ ಮಾಡಲು ಬರುತ್ತಾರಂತೆ.

ಕತ್ತೆವಾಡ್ (ಗುಜರಾತ್) ಕತ್ತೆಗಳಿಗೆ ಏನು ಡಿಮ್ಯಾಂಡ್ ಅಂತೀರಾ!! ಶುದ್ಧ ಬಿಳಿ(White) ಎತ್ತರ(Height) ಮತ್ತು ಹೆಚ್ಚಿನ ಹೊರೆಗಳನ್ನು ಹೊತ್ತುವ ಸಾಮರ್ಥ್ಯ ಹೊಂದಿರುತ್ತವೆ. ಇದು ಗವ್ರಾನ್ ಕತ್ತೆಗಿಂತ ಹೆಚ್ಚು ವೆಚ್ಚ ತಗುಲುತ್ತದೆ. ಈ ವರ್ಷ ಕಥೇವಾಡ್ ಪ್ರಾಂತ್ಯದಿಂದ ಮುನ್ನೂರು ಕತ್ತೆಗಳು ಬಂದಿದೆಯಂತೆ. ಎರಡು ವರ್ಷಗಳ ಬಳಿಕ ಮತ್ತೆ ಕತ್ತೆ ಮಾರುಕಟ್ಟೆ ಶುರುವಾಗಿದ್ದು, ಈ ವರ್ಷ ಪಂಜಾಬಿ (Panjabi)ಹೈಬ್ರಿಡ್ ಕತ್ತೆಗಳು ಅತಿ ಹೆಚ್ಚು ಬೆಲೆ ಗಳಿಸಿಕೊಂಡಿದೆ ಎನ್ನಲಾಗಿದೆ. ಸರಿ ಸುಮಾರು ಮೂರು ಕತ್ತೆಗಳು ಬರೋಬ್ಬರಿ 2 ಲಕ್ಷ 80 ಸಾವಿರಕ್ಕೆ ಮಾರಾಟವಾಗಿವೆ ಎನ್ನಲಾಗಿದೆ. ಏನು ಗುರು ಅವಸ್ಥೆ? ಈ ದುಡ್ಡಿಗೆ ಬೈಕೊ, ಕಾರೋ ಖರೀದಿ ಮಾಡಬಹುದಿತ್ತು ಎಂದು ನೀವು ಅಂದುಕೊಳ್ಳಬಹುದು!! ಆದ್ರೆ, ಇಲ್ಲಿನ ಜನ ಒಂದು ಕತ್ತೆಗೆ ಲಕ್ಷಗಟ್ಟಲೆ ದುಡ್ಡು ಸುರಿಯುತ್ತಾರೆ ಎಂದು ಕೇಳಿದಾಗಲೇ ಆಶ್ಚರ್ಯವಾಗುತ್ತೆ!

ಟಿಸ್ಗಾಂವ್ ಪ್ರದೇಶದಲ್ಲಿ ಮಧಿಯಲ್ಲಿ ತೀರ್ಥೋದ್ಭವದ ವೇಳೆ ಕತ್ತೆ (Donkey) ಮಾರುಕಟ್ಟೆ ಈ ವರ್ಷ ಎರಡು ದಿನಗಳ ಹಿಂದೆ ನಡೆದಿದ್ದು, ಮದ್ದಿನ ಕತ್ತೆ ಮಾರುಕಟ್ಟೆಯಲ್ಲಿ ಸಾಮಾಗ್ರಿ ಕೊರತೆಯ ಹಿನ್ನೆಲೆ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಈ ವರ್ಷ ಪ್ರಥಮ ಬಾರಿಗೆ ಪಂಜಾಬ್ (Punjab) ರಾಜ್ಯದಿಂದ ಕತ್ತೆಗಳು ಮಾರಾಟಕ್ಕೆ ಬಂದಿದ್ದು,ಪಂಜಾಬಿ ಕತ್ತೆಯೊಂದನ್ನು ಸುಮಾರು ಒಂದು ಲಕ್ಷ ರೂಪಾಯಿಗೆ ಮಾರಾಟವಾಗಿದೆಯಂತೆ.

ಕತ್ತೆಯನ್ನು ಯಾಕೆ ಬಳಕೆ (Why People Use Donkey) ಮಾಡುತ್ತಾರೆ ಗೊತ್ತಾ?? ಯಾಕೆ ಇಷ್ಟು ಡಿಮ್ಯಾಂಡ್(Demand) ಅಂತೀರಾ?? ಕಟ್ಟಡ ನಿರ್ಮಾಣ ವ್ಯವಹಾರ, ಇಟ್ಟಿಗೆ ಗೂಡು ಕ್ಷೇತ್ರದಲ್ಲಿ ಕತ್ತೆಗಳ ಬಳಕೆ ಮಾಡಲಾಗುತ್ತದೆ. ಕತ್ತೆಗಳೇ ಹೆಚ್ಚು ಭಾರ ಹೊರುವುದರಿಂದ ಕೂಲಿಗೆ ವ್ಯಯಿಸುವ ಹಣ (Money) ಉಳಿಯುತ್ತದೆ ಎಂದು ಅಂದಾಜಿಸಲಾಗುತ್ತದೆ. ಗವ್ರಾನ್ ಕತ್ತೆಯ ಬೆಲೆಯನ್ನು ಬಣ್ಣ, ವಯಸ್ಸು, ಹಲ್ಲುಗಳ ಸಂಖ್ಯೆ ಮತ್ತು ಎತ್ತರದಿಂದ ನಿರ್ಧರಿಸಲಾಗುತ್ತದೆ.

 

ಮಡಿಯಲ್ಲಿ ಈ ವರ್ಷ ಕಥೇವಾಡಿ ಕತ್ತೆಯನ್ನು ಮಾದರಿ ಹೆಚ್ಚು ಇರಲಿಲ್ಲ ಎನ್ನಲಾಗಿದೆ. ತುಕಾರಾಂ ಬಿಜೆಯ ದಿನದಂದು ಅಂದರೆ ಮಧಿ ಮಾರುಕಟ್ಟೆಗೆ ಎರಡು ದಿನ ಮುಂಚಿತವಾಗಿ, ಮಾಧಿ ಮಾರುಕಟ್ಟೆಯಲ್ಲಿ ಕೆಲವೇ ಗವ್ರಾನ್ ಕತ್ತೆಗಳು ಮಾರಾಟಕ್ಕೆ ಬಂದಿದೆ.ಇದರ ಜೊತೆಗೆ ಈ ವರ್ಷ ಪಂಜಾಬಿ ಕತ್ತೆಗಳು ಮಾರಾಟಕ್ಕೆ ಬಂದಿದ್ದು, ಪಂಜಾಬಿ ಕತ್ತೆಗಳು, ಎತ್ತರದ ಮತ್ತು ಶಕ್ತಿಯುತ, ಬಹುತೇಕ ಕುದುರೆಗಳಂತೆ ನೋಡುವವರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಕತ್ತೆಯನ್ನು ನೋಡಿ ಆಕರ್ಷಿತರಾದ ಯಾತ್ರಿಕರೊಬ್ಬರು 1 ಲಕ್ಷದ 20 ಸಾವಿರ ರೂಪಾಯಿಗೆ ಕತ್ತೆಯನ್ನು ಖರೀದಿ ಮಾಡಿದ್ದಾರಂತೆ.

ಇನ್ನು ಈ ಕತ್ತೆಗಳಿಗೆ ಉತ್ತರಾಖಂಡ ಅದರಲ್ಲಿಯೂ ವಿಶೇಷವಾಗಿ ಬದರಿನಾಥ ಕೇದಾರನಾಥ ಕಾಶ್ಮೀರ ಪ್ರದೇಶದಲ್ಲಿ ಭಾರಿ ದೊಡ್ಡ ಮಟ್ಟದ ಡಿಮ್ಯಾಂಡ್ ಇದೆಯಂತೆ. ಇದರ ವಿಶೇಷತೆ ಏನು ಅಂದರೆ, ಕತ್ತೆಗಳನ್ನು ಗುಡ್ಡಗಾಡು ಪ್ರದೇಶಗಳಲ್ಲಿ ಸೇನೆಯ ಸಾಮಗ್ರಿಗಳನ್ನು ಸಲೀಸಾಗಿ ಸುಲಭವಾಗಿ ಸಾಗಿಸುವ ನಿಟ್ಟಿನಲ್ಲಿ ಬಳಕೆ ಮಾಡಲಾಗುತ್ತದೆ. ಸದ್ಯ, ಉತ್ತರ ಭಾರತದಲ್ಲಿ ಈ ಹೈಬ್ರಿಡ್ ತಳಿಯ ಕತ್ತೆಯನ್ನು ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ : Fitness : 103ರ ಹರೆಯದಲ್ಲೂ ತಾರುಣ್ಯದ ಉತ್ಸಾಹ! ಈಗಲೂ ಜಿಮ್‌ನಲ್ಲಿ ಬಾಡಿ ಫಿಟ್ನೆಸ್‌ ಮಾಡುತ್ತಿರುವ ಅಜ್ಜಿ!