ಮಂಗಳೂರಿನಲ್ಲಿ ಹೆಚ್ಚುತ್ತಿದೆ ಬಿಸಲಿನ ತಾಪಮಾನ; ತಂಪು ಪಾನೀಯಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು
Soft drinks: ಮಂಗಳೂರು: ಇನ್ನೇನು ಬೇಸಿಗೆ (Summer) ಆರಂಭವಾಗಿದೆ. ಇದರಿಂದ ಬಿಸಲಿನ ಶಾಖ ಹೆಚ್ಚಾಗಿದ್ದು, ಸೆಕೆ ಬೇಗೆಗೆ ಜನರು ಬೇಸತ್ತು ಹೋಗಿದ್ದಾರೆ. ಅದರಲ್ಲೂ ಮಂಗಳೂರಿನಲ್ಲಿ(Mangalore) ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ತಂಪು ಪಾನೀಯಗಳು (soft drinks) ಮತ್ತು ಐಸ್ ಕ್ರೀಮ್ಗಳಿಗೆ ಬೇಡಿಕೆ ಹೆಚ್ಚಾಗಿದೆ.
ಹೀಟ್ವೇವ್(Heatwave) ಪರಿಸ್ಥಿತಿಯಿಂದಾಗಿ ಕರಾವಳಿ(Karavali) ಪ್ರದೇಶಗಳಲ್ಲಿ ತಾಪಮಾನವು ಹೆಚ್ಚಾದ ಕಾರಣ, ಜನರು ತಮ್ಮ ಬಾಯಾರಿಕೆಯನ್ನು(Thursty) ನೀಗಿಸಲು ತಂಪು ಪಾನೀಯಗಳ(Cool Drinks) ಮೊರೆ ಹೋಗುತ್ತಿದ್ದಾರೆ. ಸಾಮಾನ್ಯವಾಗಿ ಏಪ್ರಿಲ್(April) ನಂತರ ತಂಪು ಪಾನೀಯಗಳ ಮಾರಾಟ(Sale) ಹೆಚ್ಚುತ್ತದೆ. ಸುಡುಬಿಸಿಲ ತಾಪ ಹೆಚ್ಚಾಗಿದ್ದು ತಂಪು ಪಾನೀಯಗಳ ಮಾರಾಟ ಜೋರಾಗಿದೆ.
ಕೋವಿಡ್ ಇದೇ ಮೊದಲ ಬಾರಿಗೆ ಬೇಸಿಗೆಯಲ್ಲಿ ಒಳ್ಳೆಯ ವ್ಯಾಪಾರ ನಡೆಯುತ್ತಿದೆ. ಪ್ರತಿ ದಿನವೂ ನಮಗೆ ಉತ್ತಮ ಲಾಭ ಸಿಗುತ್ತಿದೆ. ಇವರು ಬಾದಾಮ್ ಹಾಲು, ಲೆಮೆನ್ ಜ್ಯೂಸ್, ಮಾವಿನ ಹಣ್ಣಿನ ರಸ, ಸೌತೆಕಾಯಿ, ಲಸ್ಸಿ ಮತ್ತು ಮಜ್ಜಿಗೆ ಸೇರಿದಂತೆ ವಿವಿಧ ಜ್ಯೂಸ್ಗಳನ್ನು ಮಾರಾಟ ಮಾಡುತ್ತಿದ್ದಾರೆ.
ಇನ್ನು ಇತ್ತೀಚಿನವರೆಗೂ ಜ್ಯೂಸ್ ಮತ್ತು ಇತರ ಹಾಲು ಆಧಾರಿತ ಪಾನೀಯಗಳನ್ನು ಕೆಲವರು ಮಾತ್ರ ಖರೀದಿಸುತ್ತಿದ್ದರು. ಆದ್ರೆ ಇದೀಗ ಇದಕ್ಕಿದ್ದಂತೆ ಇದರ ಮಾರಾಟ ಹೆಚ್ಚಾಗಿದೆ. ಈ ಬೇಸಿಗೆಯಲ್ಲಿ ನಮ್ಮ ಮಾರಾಟ ಹೆಚ್ಚಾಗಿದೆ. ಏಪ್ರಿಲ್ನಿಂದ ಮಾರಾಟ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.ಮಜ್ಜಿಗೆ ಅತ್ಯಂತ ಜನಪ್ರಿಯ ಬೇಸಿಗೆ ಪಾನೀಯವಾಗಿದೆ, ನಂತರ ಲಸ್ಸಿಯನ್ನು ಜನ ಚೆನ್ನಾಗಿ ಖರೀದಿಸುತ್ತಾರೆ ಎಂದು ವ್ಯಾಪಾರಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇತ್ತ, ಕೂಲ್ ಡ್ರಿಂಕ್ಸ್ ಜೊತೆಗೆ ಎಳನೀರು, ಕಲ್ಲಂಗಡಿ, ಕಿತ್ತಳೆ ಹಣ್ಣಿನ ಜ್ಯೂಸ್ ಸೇರಿದಂತೆ ವಿವಿಧ ಹಣ್ಣುಗಳಿಗೆ ಬೇಡಿಕೆ ಹೆಚ್ಚಿದೆ. ಮಂಗಳೂರಿನಲ್ಲಿ ಈ ಬಾರಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣುಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಇದರಿಂದ ವಾಪಾರಸ್ಥರಿಗೆ ಈ ಬಾರಿ ಮುಖದಲ್ಲಿ ಮಂದಹಾಸ ಮೂಡಿದೆ.