Google Translate : ಗೂಗಲ್‌ ಟ್ರಾನ್ಸ್‌ಲೇಟರ್ ಯೂಸ್‌ ಮಾಡ್ತೀರಾ? ಇಲ್ಲಿದೆ ನಿಮಗೊಂದು ಬೆಸ್ಟ್‌ ಮಾಹಿತಿ!

Google Translate: ಏನೇ ಆಗಲಿ ಕೂತಲ್ಲಿಯೇ ನಮಗೆ ಪ್ರತಿಯೊಂದು ಸಲಹೆ ನೀಡುವುದು ಅಂದರೆ ಅದು ಗೂಗಲ್ ಆಗಿದೆ. ಗೂಗಲ್ ನಮಗೆ ಯಾವ ರೀತಿಯ ಸಹಾಯ ಬೇಕಾದರು ಮಾಡುತ್ತದೆ. ಪ್ರಸ್ತುತ ಏನೇ ಮಾಹಿತಿ ಬೇಕಿದ್ದರೂ ಮೊದಲು ನೆನಪಿಗೆ ಬರುವುದೇ ಗೂಗಲ್. ಗೂಗಲ್(Google) ನಲ್ಲಿ ಜಿಮೇಲ್, ಮ್ಯಾಪ್​, ಕ್ರೋಮ್ (Chrome), ಡಾಕ್ಸ್, ಗೂಗಲ್ ಡ್ರೈವ್‌ನಂತಹ ಹಲವಾರು ಅಪ್ಲಿಕೇಶನ್‌ಗಳ ಜೊತೆಗೆ ಗೂಗಲ್ ಅನುವಾದವು ಪ್ರಪಂಚದಾದ್ಯಂತ ಬಹಳಷ್ಟು ಜನಪ್ರಿಯವಾಗಿದೆ. ಇದಕ್ಕೆ ಕಾರಣವೆಂದರೆ ಇದು ಹೊಂದಿರುವಂದತ ಅತ್ಯುತ್ತಮ ಅನುವಾದ ವೈಶಿಷ್ಟ್ಯಗಳು.

ಸದ್ಯ ಜನಪ್ರಿಯ ಟೆಕ್ ಕಂಪೆನಿಯಾಗಿರುವ ಗೂಗಲ್ ಹಲವಾರು ಫೀಚರ್ಸ್​ಗಳನ್ನು ಈಗಾಗಲೇ ನೀಡಿದ್ದು, ಇದೀಗ ಕಂಪೆನಿ ಗೂಗಲ್​ ಟ್ರಾನ್ಸಲೇಟ್​ನಲ್ಲಿ (Google Translate)ಹೊಸ ಫೀಚರ್ ತಂದಿದ್ದು, ಇನ್ಮುಂದೆ ಫೋಟೋದಲ್ಲಿರುವಂತಹ ಟೆಕ್ಟ್​ (Image Text) ಅನ್ನು ಸಹ ಅನುವಾದ ಮಾಡಿಕೊಳ್ಳಬಹುದು ಎಂದು ತಿಳಿಸಿದೆ.

ಈ ಹಿಂದೆ, ಡೆಸ್ಕ್‌ಟಾಪ್ ವಾಯ್ಸ್​ ಅನ್ನು ಪಠ್ಯಕ್ಕೆ ಭಾಷಾಂತರಿಸಲು ಮತ್ತು ಟೈಪ್​ ಮಾಡಿದ ಕಂಟೆಂಟ್​ ಅನ್ನು ಭಾಷಾಂತರಿಸಲು ಮಾತ್ರ ಸೀಮಿತವಾಗಿತ್ತು. ಇದಕ್ಕಾಗಿ ಗೂಗಲ್​ ಟ್ರಾನ್ಸಲೇಟ್​ ಬಹಳಷ್ಟು ಉಪಯುಕ್ತವಾಗಿದೆ. ಆದರೆ ಈಗ ಹೊಸ ವೈಶಿಷ್ಟ್ಯದೊಂದಿಗೆ ಚಿತ್ರದಲ್ಲಿರುವ ಪಠ್ಯವನ್ನು ಆಯ್ಕೆಯ ಭಾಷೆಯಲ್ಲಿ ಅನುವಾದಿಸಬಹುದು. ಈ ವೈಶಿಷ್ಟ್ಯವನ್ನು ಬಳಸಲು, ಬಳಕೆದಾರರು ಗೂಗಲ್​ ಅನುವಾದ ವೆಬ್‌ಸೈಟ್‌ಗೆ ಹೋಗಿ ಮತ್ತು ಅನುವಾದಿಸಬೇಕಾದ ಪಠ್ಯವನ್ನು ಹೊಂದಿರುವ ಚಿತ್ರವನ್ನು ಅಪ್‌ಲೋಡ್ ಮಾಡಬೇಕು.

ಗೂಗಲ್​ ನೀಡುವ ಈ ಹೊಸ ಅಪ್ಡೇಟ್​​ನೊಂದಿಗೆ, ಡೆಸ್ಕ್‌ಟಾಪ್ ಗೂಗಲ್ ಟ್ರಾನ್ಸ್​ಲೇಟ್​ನಲ್ಲಿ ಚಿತ್ರಗಳಿಂದ ಪಠ್ಯವನ್ನು 130 ವಿವಿಧ ಭಾಷೆಗಳಿಗೆ ಅನುವಾದಿಸಬಹುದು. ನೀವು ಈ ವೈಶಿಷ್ಟ್ಯವನ್ನು ಬಳಸಿದಾಗ, ಚಿತ್ರಗಳ ಪಠ್ಯವನ್ನು ಡೀಫಾಲ್ಟ್ ಆಗಿ ಹೊಂದಿಸಲಾದ ಭಾಷೆಗೆ ಅನುವಾದಿಸಲಾಗುತ್ತದೆ. ನೀವು ಅನುವಾದಿಸಿದ ಚಿತ್ರವನ್ನು ಡೌನ್‌ಲೋಡ್ ಮಾಡಬಹುದು ಅಥವಾ ಪ್ರಯಾಣದಲ್ಲಿರುವಾಗ ಇತರರಿಗೆ ತೋರಿಸಲು ಅನುವಾದಿತ ಪಠ್ಯವನ್ನು ಕಾಪಿ ಮಾಡಬಹುದು. ಇನ್ನು ಈ ಹೊಸ ಫೀಚರ್​ ಗೂಗಲ್ ವೆಬ್​ ಬ್ರೌಸರ್ ಅನ್ನು ಹೊಂದಿರುವವರಿಗೆ ಮಾತ್ರ ಲಭ್ಯವಿದೆ.

ಸದ್ಯ ಬಳಕೆದಾರರು ವೆಬ್​ ಬ್ರೌಸರ್​ಗಳಲ್ಲಿ ಗೂಗಲ್​​ ಟ್ರಾನ್ಸ್​​ಲೇಟ್​ ನಲ್ಲಿ ಫೋಟೋವನ್ನು ಅಪ್ಲೋಡ್​ ಮಾಡುವ ಮೂಲಕ ತಾವು ಟ್ರಾನ್ಸ್​​​ಲೇಟ್​ ಮಾಡಲು ಬಯಸುವ ಫೋಟೋವನ್ನು ಅನುವಾದ ಮಾಡಬಹುದು. ಇನ್ನು ನೀವು ಟ್ರಾನ್ಸ್​ಲೇಟ್​ ಮಾಡಲು ಬಯಸುವ ಫೋಟೋವನ್ನು ಅಪ್​ಲೋಡ್​ ಮಾಡಿದ ತಕ್ಷಣ ಅಲ್ಲಿ ನಿಮಗೆ ಫ್ರಂ ಲ್ಯಾಂಗ್ವೇಜ್​ ಮತ್ತು ಡಿಟೆಕ್ಟ್ ಲ್ಯಾಂಗ್ವೇಜ್​ ಎಂಬ ಆಯ್ಕೆ ಸಿಗುತ್ತದೆ. ನಂತರ ಈ ಮೂಲಕ ಹಲವಾರು ಭಾಷೆಯಲ್ಲಿ ನೀವು ಟ್ರಾನ್ಸ್​​ಲೇಟ್​ ಮಾಡಿಕೊಳ್ಳಬಹುದು.

ಫೋಟೋ ಟೆಕ್ಸ್ಟ್​ ಅನ್ನು ಟ್ರಾನ್ಸ್​ಲೇಟ್​ ಮಾಡುವ ವಿಧಾನ ಇಂತಿವೆ :
ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಮೊದಲಿಗೆ ಗೂಗಲ್ ಟ್ರಾನ್ಸ್​​ಲೇಟ್​ ವೆಬ್‌ಸೈಟ್ ಓಪನ್ ಮಾಡಿ. ನಂತರ ಮೇಲಿನ ಬಲ ಮೂಲೆಯಲ್ಲಿ ಕಂಡುಬರುವ “ಚಿತ್ರಗಳು” ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ನೀವು ಅನುವಾದಿಸಲು ಬಯಸುವ ಚಿತ್ರಕ್ಕಾಗಿ ನಿಮ್ಮ ಕಂಪ್ಯೂಟರ್ ಅನ್ನು ಬ್ರೌಸ್ ಮಾಡಿ. ನಂತರ ಅನುವಾದಕ್ಕಾಗಿ ನೀವು jpg, jpeg ಅಥವಾ png ಮಾದರಿ ಫೋಟೋವನ್ನು ಅಪ್‌ಲೋಡ್ ಮಾಡಬಹುದು. ಈ ಸ್ವರೂಪದಲ್ಲಿಲ್ಲದ ಚಿತ್ರದಲ್ಲಿರುವ ಪಠ್ಯವನ್ನು ಅನುವಾದಿಸಲಾಗುವುದಿಲ್ಲ.

ಈ ಮೇಲಿನನಂತೆ ಫೋಟೋ ಅಪ್‌ಲೋಡ್ ಮಾಡಿದ ನಂತರ ನೀವು ಅನುವಾದಿಸಲು ಬಯಸುವ ವಿಷಯವನ್ನು ಅಲ್ಲಿ ಕಾಣಬಹುದು.

ಇದನ್ನೂ ಓದಿ : ಪುರುಷರಲ್ಲಿ ಲೈಂಗಿಕಾಸಕ್ತಿ ಕಡಿಮೆ ಆಗಲು ಕಾರಣವೇನು?

Leave A Reply

Your email address will not be published.