ಜೆಡಿಎಸ್ ಭದ್ರಕೋಟೆಯಲ್ಲಿ ಪ್ರಧಾನಿ ಮೋದಿ ಶಕ್ತಿ ಪ್ರರ್ದಶನ; ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ಚಾಲನೆ
Bangalore- Mysore expressway : ಮಂಡ್ಯ: ವಿಧಾನಸಭೆ ಚುನಾವಣೆ ಹತ್ರ ಬರುತ್ತಿದೆ. ರಾಜಕೀಯ ನಾಯಕರ ಚುನಾವಣಾ ರಣಕಹಳೆ ಜೋರಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಆಗಮಿಸಿದ್ದಾರೆ. ಜೆಡಿಎಸ್ ಭದ್ರಕೋಟೆ ಮಂಡ್ಯದಲ್ಲಿ ಮೋದಿ ಅಬ್ಬರ ಜೋರಾಗಿದೆ. ಗೆಜ್ಜಲಗೆರೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇಗೆ ಚಾಲನೆ ನೀಡಿದ್ದಾರೆ. ಸುಮಾರು 8,479 ಕೋಟಿ ರೂ. ವೆಚ್ಚದಲ್ಲಿ ಎಕ್ಸ್ಪ್ರೆಸ್ ಹೈವೇ (Bangalore- Mysore expressway) ನಿರ್ಮಾಣವಾಗಿದೆ.
ದಶಪಥ ಹೆದ್ದಾರಿ ಉದ್ಘಾಟನೆಗೂ ಮುನ್ನ ಮಂಡ್ಯದ ಪ್ರವಾಸಿಮಂದಿರ ಸರ್ಕಲ್ನಿಂದ ಮೋದಿ ರೋಡ್ಶೋ ಆರಂಭಿಸಿದ್ದಾರೆ. ಪ್ರವಾಸಿಮಂದಿರ ವೃತ್ತದಿಂದ ನಂದಾ ಸರ್ಕಲ್ವರೆಗೆ ರೋಡ್ಶೋ ನಡೆದಿದ್ದು,
ರೋಡ್ ಶೋ ವೇಳೆ ಪ್ರಧಾನಿ ಮೋದಿ ಮೇಲೆ ಹೂವಿನ ಸುರಿಮಳೆಯಾಗಿದೆ. ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಜನರತ್ತ ಕೈಬೀಸಿದ್ದಾರೆ. 1.8 ಕಿ.ಮೀ. ದೂರ ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ಶೋ ನಡೆಯಲಿದೆ.
ರಾಷ್ಟ್ರೀಯ ಹೆದ್ದಾರಿ ಉದ್ಘಾಟನಾ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ ಮಾಡಿದ್ದು, ಪ್ರಧಾನಿ ಮೋದಿ ಬಗ್ಗೆ ಹಾಡಿಗೊಗಳಿದ್ದಾರೆ. ದೇಶದಲ್ಲೇ ಮೊದಲು ಸಕ್ಕರೆ ಕರ್ಖಾನೆ ಆರಂಭವಾಗಿದೆ. ಮಂಡ್ಯದ ಅಭಿವೃದ್ಧಿಗೆ ಪ್ರಧಾನಿ ಮೋದಿ ಸಾಕಷ್ಟು ಶ್ರಮಿಸಿದ್ದಾರೆ. ಎಕ್ಸ್ ಪ್ರೆಸ್ ವೇ ಉದ್ಘಾಟನೆಯ ಮೂಲಕ ಕ್ರಾಂತಿಯಾಗಲಿದೆ. ಪ್ರಧಾನಿ ಮೋದಿ ವಿಶ್ವನಾಯಕ ಎಂದು ಹೇಳಿದ್ದಾರೆ. ವಿರೋಧಿ ದೇಶಗಳು ಪ್ರಧಾನಿ ಮೋದಿಯನ್ನು ಹೊಗಳುತ್ತಿದ್ದಾರೆ. ಪಾಕಿಸ್ತಾನ , ಚೀನಾ ನಾಗರಿಕರಿಗೂ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ರೀತಿ ನಾಯಕ ಬೇಕು ಅಂತಿದ್ದಾರೆ ಪಾಕಿಸ್ತಾನ ಜನರು. ಮೋದಿ ವಿಶ್ವ ನಾಯಕ ಅಂತಾ ಹೊಗಳುತ್ತಾರೆ ಚೀನಾದವರು. ಅಮೆರಿಕಾ ಪ್ರಜೆಗಳಿಂದಲೂ ನರೇಂದ್ರ ಮೋದಿಗೆ ಬಹುಪರಾಕ್ ಎಂದಿದ್ದಾರೆ.
2014 ರಲ್ಲಿ ಪ್ರಧಾನಿ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇಗೆ ಚಾಲನೆ ನೀಡಿದ್ದರು. ಬಳಿಕ 2019 ರಲ್ಲಿ ನ್ಯಾಷನಲ್ ಹೈವೆ ಅಥಾರಿಟಿಗೆ ವರ್ಗಾವಣೆ ಮಾಡಲಾಯಿತು. ನಂತರ ಎಕ್ಸ್ ಪ್ರೆಸ್ ವೇಗೆ ಪೂರ್ಣ ಪ್ರಮಾಣದಲ್ಲಿ ಹಣ ಬಿಡುಗಡೆ ಮಾಡಿದರು. 2019 ರಲ್ಲಿ ಕೆಲಸ ಪ್ರಾರಂಭ ಮಾಡಿದ್ದು, 2023 ರಲ್ಲಿ ಆ ಕನಸು ನನಸು ಆಗಿದೆ. ಆದರೆ ಈ ಹೆದ್ದಾರಿಯನ್ನು ನಾವು ಮಾಡಿದ್ದೇವೆ. ನಾವು ಮಾಡಿದ್ದೇವೆ ಎಂದು ಪತ್ರಿಕೆಗಳಲ್ಲಿ ಹೇಳುತ್ತಿದ್ದಾರೆ ಎಂದರು. ಆದರೆ ಯಾರು ಮಾಡಿದ್ದರು, ಎಷ್ಟು ಕೆಲಸ ಮಾಡಿದ್ದಾರೆ ಎಂದು ಜನರಿಗೆ ಗೊತ್ತಿದೆ ಎಂದು ವಿಪಕ್ಷಗಳ ವಿರುದ್ಧ ಸಿಎಂ ಗುಡುಗಿದ್ದಾರೆ.
ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಡ್ಯದ ಮೈಶುಗರ್ ಕಾರ್ಖಾನೆ ಪುನಾರಂಭ ಮಾಡಿದ್ದು ಬಿಜೆಪಿ. ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರಿಗೆ ಅನುಕೂಲವಾಗಿದೆ. ಮಂಡ್ಯದ 2 ಲಕ್ಷಕ್ಕೂ ಹೆಚ್ಚು ಜನ ಯೋಜನೆ ಲಾಭ ಪಡೆದಿದ್ದಾರೆ. ಬಿಜೆಪಿಯಿಂದ ಮಾತ್ರ ಭಾರತದ ಅಭಿವೃದ್ಧಿ ಸಾಧ್ಯ. ಎಲ್ಲ ಪಕ್ಷಗಳ ಅಭಿವೃದ್ಧಿ ರಿಪೋರ್ಟ್ ನೋಡಿ ನೀವು ಬೆಂಬಲ ನೀಡಿ. ಮುಂದಿನ ದಿನಗಳಲ್ಲಿ ಬಿಜೆಪಿ ಬೆಂಬಲಿಸುವ ಮೂಲಕ ಆಶೀರ್ವದಿಸಿ ಎಂದರು.
ಇನ್ನು ಸಮಾವೇಶದಲ್ಲಿ ಪ್ರಧಾನಿ ಮೋದಿ ಮಾತನಾಡಿದ್ದು, ಕನ್ನಡದಲ್ಲೇ ಭಾಷಣ ಆರಂಭಿಸಿದ್ದಾರೆ. ತಾಯಿ ಭುವನೇಶ್ವರಿಗೆ ನಮಸ್ಕಾರಗಳು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಿಮ್ಮ ಪ್ರೀತಿಯ ಋಣವನ್ನು ಬಡ್ಡಿ ಸಮೇತ ನಮ್ಮ ಸರ್ಕಾರ ತೀರರರಿಸಲಿದೆ. ಕೆಲವು ದಿನಗಳಿಂದ ಎಕ್ಸ್ ಪ್ರೆಸ್ ಹೈವೇ ಬಗ್ಗೆ ಸಾಕಷ್ಟ ಚರ್ಚೆ ನಡೆಯುತ್ತಿತ್ತು. ಸಾಮಾಜಿಕ ಜಾಲತಾಣದಲ್ಲಿ ದಶಪಥ ಹೆದ್ದಾರಿ ಬಗ್ಗೆ ಚರ್ಚೆ ನಡೆಯುತ್ತಿದ್ದವು. ಮೈಸೂರು- ಬೆಂಗಳೂರು ಎಕ್ಸ್ ಪ್ರೆಸ್ ಹೈವೇ ಫೋಟೋಗಳು ವೈರಲ್ ಆಗಿದೆ. ಮೈಸೂರು-ಕುಶಾಲನಗರ ೪ ಪಥದ ರಸ್ತೆಗೆ ಶಿಲಾನ್ಯಾಸ ನೆರೆವೇರಿಸಿದ್ದೇವೆ ಎಂದರು
ಇನ್ನು ದಶಪಥ ಹೆದ್ದಾರಿಯಿಂದ ಈ ಭಾಗದಲ್ಲಿ ಸಾಕಷ್ಟು ಅನುಕೂಲವಾಗಲಿದೆ. ಈ ಪುಣ್ಯ ಭೂಮಿಯಲ್ಲಿ ಒಡೆಯರ್ , ವಿಶ್ವೇಶ್ವರಯ್ಯರನ್ನು ದೇಶಕ್ಕೆ ನೀಡಿದೆ. ಭಾರತ ಇಂದು ಸಾಕಷ್ಟು ಬದಲಾವಣೆ ಆಗುತ್ತಿದೆ. ಭಾರತ ಮಾಲಾ, ಸಾಗರ ಮಾಲಾ ಯೋಜನೆಯಿಂದ ದೇಶ ಅಭಿವೃದ್ಧಿಯತ್ತ ಸಾಗಿದೆ. ಮೂಲಸೌಕರ್ಯ ಕ್ಷೇತ್ರದಲ್ಲಿ ಡಬಲ್ ಇಂಜಿನ್ ಸರ್ಕಾರದಿಂದ ಬದಲಾವಣೆಯಾಗಿದೆ. ಕಳೆದ ಕೆಲವು ವರ್ಷದಲ್ಲಿ ಇಂದು ಲಕ್ಷ ಕೋಟಿಗೂ ಹೆಚ್ಚು ಹಣ ಬಿಡುಗಡೆ ಮಾಡಲಾಗಿದೆ. ಇನ್ನು ಉದ್ಯೋಗ ಸೃಷ್ಟಿ, ಮೂಲಸೌಕರ್ಯ ಅಭಿವೃದ್ಧಿಗೆ ನಾಂದಿಯಾಗಿದೆ ಎಂದರು.
ದಶಪಥ ಹೆದ್ದಾರಿಯಿಂದ ಪ್ರವಾಸೋದ್ಯಮ ಕ್ಷೇತ್ರ ಮತ್ತಷ್ಟು ಬೆಳೆಯಲಿದೆ. 2014ಕ್ಕಿಂತ ಮೊದಲು ದೇಶದ ಬಡವರ ಬಗ್ಗೆ ಕಾಳಜಿ ತೋರಿಸಲಿಲ್ಲ. ಬಡವರ ಹೆಸರಿನ ಯೋಜನೆಯಲ್ಲಿ ಕೋಟ್ಯಂತರ ಹಣ ಲೂಟಿ ಮಾಡಿದರು ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಮಂತ್ರಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. 2014ರಲ್ಲಿ ದೇಶದ ಜನರು ನನಗೆ ಆಶೀರ್ವಾದ ನೀಡಿದರು. ದೇಶದ ಅಭಿವೃದ್ಧಿಗಾಗಿ 2014ರಲ್ಲಿ ಬಡವರ ಪರ ಸರ್ಕಾರ ಅಧಿಕಾರಕ್ಕೆ ಬಂತು. ಬಡವರ ಕಷ್ಟಗಳನ್ನು ಅರಿತುಕೊಂಡು ನಿವಾರಿಸಲು ಪ್ರಯತ್ನಿಸುತ್ತಿದ್ದೇವೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಯೋಜನೆಯಿಂದ ಬಡವರ ಬದುಕು ಹಸನಾಗಿದೆ ಎಂದರು.