Home ಬೆಂಗಳೂರು Bengaluru News: ಪ್ರಿಯತಮನ ನೋಡಲು ದುಬೈನಿಂದ ಬಂದ ಗಗನಸಖಿ ಬೆಂಗಳೂರಲ್ಲಿ ಹೆಣವಾದಳು!

Bengaluru News: ಪ್ರಿಯತಮನ ನೋಡಲು ದುಬೈನಿಂದ ಬಂದ ಗಗನಸಖಿ ಬೆಂಗಳೂರಲ್ಲಿ ಹೆಣವಾದಳು!

Hindu neighbor gifts plot of land

Hindu neighbour gifts land to Muslim journalist

Air hostess sucide :ತನ್ನ ಪ್ರಿಯಕರನನ್ನು ನೋಡುವ ಆಸೆಗಾಗಿ ದೂರದ ದುಬೈ(Dubai) ನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿ(air hostess sucide) ಯೊಬ್ಬಳು ಅಪಾರ್ಟ್‌ಮೆಂಟ್‌ನಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರು ದುರ್ಘಟನೆಯೊಂದು ಬೆಂಗಳೂರಿ(Bangalore)ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದಾಕೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಧೀಮನ್‌ ಎಂದು ಗುರುತಿಸಲಾಗಿದೆ.

ಹೌದು, ಅರ್ಚನಾ ಧೀಮನ್‌(Archana Dhiman) ಹಿಮಾಚಲ ಮೂಲದವರಾಗಿದ್ದು ಕೇರಳ(Kerala) ಮೂಲದ ಟೆಕ್ಕಿ ಆದೇಶ್‌(Adesh) ಎನ್ನುವವರನ್ನು ಪ್ರೀತಿ ಮಾಡುತ್ತಿದ್ದರು. ಆದೇಶ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಟೆಕ್ಕಿಯಾಗಿ ಕೆಲಸ ಮಾಡಿಕೊಂಡಿದ್ದ. ಡೇಟಿಂಗ್ ಆ್ಯಪ್ ಮೂಲಕ ಗಗನಸಖಿ ಅರ್ಚನಾ ಹಾಗೂ ಆದೇಶ್ ಪರಿಚಯವಾಗಿ ಇಬ್ಬರಿಗೂ ಲವ್ ಆಗಿದೆ. ಪ್ರಿಯಕರ ಆದೇಶ್ ನೋಡಲು ಅರ್ಚನಾ ಬೆಂಗಳೂರಿನ ಕೋರಮಂಗಲಕ್ಕೆ ಬಂದಿದ್ದಳು‌.

ಕಳೆದ ನಾಲ್ಕು ದಿನಗಳ ಹಿಂದಷ್ಟೇ ಈಕೆ ಬೆಂಗಳೂರಿಗೆ ಬಂದಿದ್ದಳು. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅರ್ಚನ ಗೆಳೆಯನ ಭೇಟಿ ಮಾಡಿ ಕೆಲ ದಿನಗಳನ್ನು ಕಳೆಯುವ ಸಲುವಾಗಿ ನಗರಕ್ಕೆ ಬಂದಿದ್ದರು. ನಿನ್ನೆ ರಾತ್ರಿ ಇಬ್ಬರು ಪೋರಂ ಮಾಲ್’ಗೆ ಹೋಗಿ ಸಿನಿಮಾ ನೋಡಿಕೊಂಡು ಬಂದಿದ್ದಾರೆ. ತಡರಾತ್ರಿಯವರೆಗೂ ಇಬ್ಬರು ಪಾರ್ಟಿ ಮಾಡಿದ್ದಾರೆ. ಪಾರ್ಟಿ ಬಳಿಕ ಇಬ್ಬರ ನಡುವೆ ಲವ್ ವಿಚಾರವಾಗಿ ಗಲಾಟೆಯಾಗಿ ಅರ್ಚನಾ, ಆದೇಶ್ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಗಲಾಟೆ ಬಳಿಕ ಯುವತಿ ನಾಲ್ಕನೇ ಮಹಡಿಯಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಹೇಳಲಾಗಿದೆ.

ಆದರೆ ಭೇಟಿಗೆ ಬಂದವಳು ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿರುವುದು ಸದ್ಯ ಅನುಮಾನಕ್ಕೆ ಎಡೆಮಾಡಿದೆ. ಈ ಹಿನ್ನೆಲೆ ಆಕೆಯ ಗೆಳೆಯ ಆದೇಶ್ ಮೇಲೂ ಅನುಮಾನ ವ್ಯಕ್ತವಾಗಿದೆ. ಜಗಳ ನಡೆದು ಆತನೇ ಬಾಲ್ಕನಿಯಿಂದ ತಳ್ಳಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗಿದೆ. ಸದ್ಯ ಬಾಯ್ ಪ್ರೇಂಡ್‍ನ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದು, ಈ ಬಗ್ಗೆ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಬಗ್ಗೆ ಅರ್ಚನಾ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ಬಂದು ದೂರು ಯಾವ ರೀತಿ ದಾಖಲು‌ ಮಾಡುತ್ತಾರೆ ಎಂಬ ಆಧಾರದ ಮೇಲೆ ಎಫ್ಐಆರ್ ದಾಖಲಿಸಲು ನಿರ್ಧರಿಸಿದ್ದಾರೆ.