KGF Vs Venkatesh Maha: ಕೆಜಿಎಫ್ 2 ಚಲನಚಿತ್ರ ನಿಂದಿಸಿದ್ದ ನಿರ್ದೇಶಕ ವೆಂಕಟೇಶ್ ಮಹಾ ಮೇಲೆ ಕರೆ ಮಾಡಿ ಕೆಟ್ಟದಾಗಿ ಬೈದ್ರಾ KGF ಪ್ರೊಡ್ಯೂಸರ್ ವಿಜಯ್ ಕಿರಂಗಂದೂರ್ ?! ?!
KGF Vs Venkatesh Maha: ತೆಲುಗು ಚಿತ್ರ ರಂಗದಲ್ಲಿ ಎರಡು ಸಿನಿಮಾಗಳನ್ನು ಮಾಡಿ ನಿರ್ದೇಶಕರಾದಂತ ವೆಂಕಟೇಶ್ ಮಹಾ (venkatesh maha) ಇಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಬಾಯಿ ಮಾತಿನಲ್ಲು ಸುದ್ದಿ ಆಗಿದ್ದಾರೆ.ಎರಡು ಸಿನಿಮಾಗಳನ್ನು ಮಾಡಿದ ನಿರ್ದೇಶಕ ವೆಂಕಟೇಶ್ ಮಹಾ ಇವರು ತಾನು ಮಾಡಿದ ಸಿನಿಮಾಕ್ಕಿಂತ ಹೆಚ್ಚಿನ ಪಟ್ಟು ಸಕ್ಸಸ್ ಫುಲ್ ಆಗಿ ರನ್ ಆಗಿರುವಂತಹ ಕೆಜಿಎಫ್ 2 (KGF-2) ಚಲನಚಿತ್ರದ ಬಗ್ಗೆ ಬಹಳ ಕೆಟ್ಟದಾಗಿ ಮಾತುಗಳನ್ನು ಆಡಿದ್ದಾರೆ.
ತೆಲುಗು ಚಿತ್ರರಂಗದ ನಿರ್ದೇಶಕರಾದ ವೆಂಕಟೇಶ್ ಮಹಾ ಕೆಜಿಎಫ್ 2 ಚಿತ್ರದ ಬಗ್ಗೆ ಕೆಳ ಮಟ್ಟದ ಮಾತುಗಳನ್ನು ಆಡಿ ಟ್ರೊಲ್ ನವರ ಪಾತ್ರಕ್ಕೆ ಗುರಿ ಆಗಿದ್ದಾರೆ. ಕೆಜಿಎಫ್ ಚಲನಚಿತ್ರದ ಬಗ್ಗೆ ಈ ಚಿತ್ರ ಅಷ್ಟೇನೂ ಚೆನ್ನಾಗಿಲ್ಲ ನನಗೆ ಇಷ್ಟ ಆಗಿಲ್ಲ ಎನ್ನುವ ಮಾತನ್ನು ಹೇಳಿದ್ದಾರೆ. ಮಾಮೂಲಿಯಾಗಿ ಚಲನಚಿತ್ರ ಇಷ್ಟವಾಗಿಲ್ಲ ಎಂದು ಹೇಳಿದ್ದರೆ ನಿರ್ದೇಶಕ ಎಲ್ಲರ ಮಾತಿಗೆ ಸಿಲುಕುತ್ತಿರಲಿಲ್ಲ ಆದರೆ ಈ ಚಲನ ಚಿತ್ರ ಚೆನ್ನಾಗಿ ಇಲ್ಲ ಎನ್ನುವ ಭರದಲ್ಲಿ ಕೆಜಿಎಫ್ ಚಿತ್ರದಲ್ಲಿ ಬರುವ ತಾಯಿಯ ಪಾತ್ರ ನನಗೆ ಇಷ್ಟವಾಗಲಿಲ್ಲ ಎಂದು ಕೊಂಕು ಮಾತಿನಿಂದ ಕೆಟ್ಟ ಭಾಷೆಯಲ್ಲಿ ನುಡಿದಿದ್ದಾರೆ. ಇದು ಅಭಿಮಾನಿಗಳ ನೋಟಕ್ಕೆ ದೊಡ್ಡ ಕಾರಣವಾಗಿಸಿದೆ.
ಪ್ರಪಂಚದಲ್ಲಿ ಯಾವ ತಾಯಿಯಾದರು ತನ್ನ ಮಗನನ್ನು ಒಳ್ಳೆಯ ಕೆಲಸಕ್ಕೆ ಹೋಗುವ ರೀತಿ ಅಥವಾ ಒಳ್ಳೆಯ ಬುದ್ದಿ ಕಲಿಸುವ ರೀತಿಯಲ್ಲಿ ಮಗನನ್ನು ಪೋಷಿಸುತ್ತಾಳೆ. ಆದರೆ ಕೆಜಿಎಫ್ 2 ಚಲನಚಿತ್ರದಲ್ಲಿ ತಾಯಿ ಪ್ರೀತಿಗೆ ಅರ್ಥನೇ ಇಲ್ಲವೇನೋ ಅನ್ನುವ ರೀತಿ ಕೊಂಕು ನುಡಿದು ಬಿಟ್ಟಿದ್ದಾರೆ ನಿರ್ದೇಶಕ ವೆಂಕಟೇಶ್.
ಅದೇನಪ್ಪಾ ಅಂದ್ರೆ. ಎಲ್ಲ ತಾಯಿಯಂದಿರು ತನ್ನ ಮಗನು ಉನ್ನತ ಮಟ್ಟಕ್ಕೆ ಹೋಗಬೇಕು, ಇನ್ನೊಬ್ಬರಿಗೆ ದಾನ ಮಾಡಬೇಕು ಅನ್ನುವ ಮನಸ್ಥಿತಿಯನ್ನು ತಾಯಿ ಹೊಂದಿದ್ದರೆ ಕೆಜಿಎಫ್ 2 ಚಲನಚಿತ್ರದಲ್ಲಿ ತನ್ನ ಮಗನು ಚಿನ್ನವನ್ನು ಸಂಪಾದಿಸಬೇಕು ಹಣವನ್ನು ಇನ್ನಷ್ಟು ಗಳಿಸಬೇಕು ಎನ್ನುವ ಮನೋಭಾವ ಹೊಂದಿರುವ ತಾಯಿ ಇದೆಂತ ತಾಯಿ ಪ್ರೀತಿ ಎಂದು ಟೀಕಿಸಿದ್ದಾರೆ.
ಇನ್ನು ಮಾತನಾಡಿದ ವೆಂಕಟೇಶ್ ಕೆಜಿಎಫ್ ಚಲನಚಿತ್ರದ ಕಥೆಯ ಬಗ್ಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.ಹಣವನ್ನು ಕೆಟ್ಟ ದೃಷ್ಟಿ ಇಂದ ಸಂಪಾದಿಸುವವನು ಇವನೆಂತ ಕಂತ್ರಿ ನಾಯಿ. ಕಂತ್ರಿ ನಾಯಿಯ ಕಥೆಯನ್ನು ಮಾಡಿದ್ದಾರೆ ಎಂದು ಕೆಟ್ಟ ಬಾಷೆಯಲ್ಲಿ ನುಡಿದಿದ್ದಾರೆ. ಇಂತಹ ಚಲನಚಿತ್ರವನ್ನು ನೋಡುಗರು ನೋಡಿ ಪ್ರೋತ್ಸಾಹಿಸಿ ಬೇಕೆ ಎಂದು ಕೆಳಹೀನವಾಗಿ ಮಾತಾಡಿದ್ದಾರೆ. ಇದರಿಂದ ಕೋಪ ಗೊಂಡ ಅಭಿಮಾನಿಗಳು ತೆಲುಗು (Telugu) ಚಿತ್ರರಂಗದ ನಿರ್ದೇಶಕರಾದಂತಹ ವೆಂಕಟೇಶ್ ಮಹಾ ಮೇಲೆ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿ. ನಿರ್ದೇಶಕರು ಇಂತಹ ಪದಗಳನ್ನು ಬಳಸುವುದು ಎಷ್ಟರಮಟ್ಟಿಗೆ ಸರಿ ಎಂಬುದನ್ನು ಅಭಿಮಾನಿಗಳು ತಿಳಿಸಿದ್ದಾರೆ.ವೆಂಕಟೇಶ್ ಮಹಾ ಅನೇಕರ ಟ್ರೋಲ್ ಗೆ ಕಾರಣರಾಗಿದ್ದಾರೆ.
ವೆಂಕಟೇಶ್ ಮಹಾ ಮತ್ತೊಂದು ಸಂದರ್ಶನದಲ್ಲಿ ಭಾಗಿಯಾಗಿ ಏನೆಲ್ಲಾ ನಡೆಯಿತು ಎಂಬುದರ ಮಾತುಕತೆಯನ್ನು ತನ್ನ ಅಭಿಮಾನಿಗಳ ಜೊತೆ ಬಿಚ್ಚಿಟ್ಟಿದ್ದಾರೆ. ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ನಿರ್ದೇಶಕ ವೆಂಕಟೇಶ್ ಮಹಾ ಅವರಲ್ಲಿ ನಿಮಗೆ ಯಾರಾದರೂ ಕರೆ ಮಾಡಿ ಏನಾದರೂ ಜೀವ ಬೆದರಿಕೆ ಹಾಕಿದ್ರಾ? ಎನ್ನುವ ಪ್ರಶ್ನೆಯನ್ನು ಕೇಳಿದಾಗ. ಹೌದು, ಹಾಕಿದ್ದಾರೆ ಮತ್ತು ಕೆಲವರು ನಾನು ಹೇಳಿದ ಸಂದರ್ಶನಕ್ಕೆ ಓಗೊಟ್ಟು ನನ್ನ ಪರವಾಗಿ ನಿಂತು ಮಾತನಾಡಿದ್ದಾರೆ.
ಆದರೆ ಯಾರೋ ಒಬ್ಬರು ಕರೆ ಮಾಡಿ ನಾನು ಕೆಜಿಎಫ್ 2 ಚಲನಚಿತ್ರದ ನಿರ್ಮಾಪಕ ಮಾತನಾಡುತ್ತಿದ್ದೇನೆ. ಎರಡು ಚಿತ್ರಗಳನ್ನು ಮಾಡಿ ಕಲೆಕ್ಷನ್ ಆಗುವಷ್ಟು(collection) ನಿನ್ನ ಚಿತ್ರ ಬಜೆಟ್ ಇಲ್ಲದಿದ್ದರು. ಕೆಜಿಎಫ್ ಚಲನಚಿತ್ರದ ಬಗ್ಗೆ ಮಾತನಾಡುವ ಅರ್ಹತೆ ನಿನಗೆ ಎಲ್ಲಿದೆ ಎನ್ನುವ ಮೂಲಕ ಕೆಟ್ಟ ಭಾಷೆಯಲ್ಲಿ ಬೈದಿದ್ದಾರೆ ಎನ್ನುವ ಮಾತನ್ನು ನಿರ್ದೇಶಕ ವೆಂಕಟೇಶ್ ತಿಳಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ನಿರ್ದೇಶಕನ ಹೆಸರು ಏನು ಎಂದು ವೆಂಕಟೇಶ್ ಮಹಾ ತಿಳಿಸಲಿಲ್ಲ. ಹಾಗಾಗಿ ಕರೆ ಮಾಡಿರುವುದು ಕೆಜಿಎಫ್ ಚಲನಚಿತ್ರದ ನಿರ್ದೇಶಕರೇ ಅಥವಾ ಯಾರಾದರೂ ಕಿಡಿಗೇಡಿಗಳೇ ಎನ್ನುವ ಸಂಶಯ ಇನ್ನೂ ಹಾಗೆಯೇ ಉಳಿದುಬಿಟ್ಟಿದೆ.