ಕಾರಿನ ಹಿಂಬದಿ ಸೀಟನ್ನು ಈ ರೀತಿಯಾಗಿ ಹಾಸಿಗೆಯನ್ನಾಗಿ ಬದಲಿಸಿ! ಅದು ಕೂಡಾ ಅತೀ ಕಡಿಮೆ ಬೆಲೆಯಲ್ಲಿ!!!

Car Rear Seat: ಪ್ರವಾಸ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ!! ರಾತ್ರಿ(Night) ಪ್ರಯಾಣ ಅದರಲ್ಲಿಯೂ ತುಂಬಾ ದೂರ ಪ್ರಯಾಣ ಮಾಡಬೇಕು ಆದರೆ ಆರಾಮದಾಯಕವಾಗಿ ನಿದ್ರೆ( Sleep) ಮಾಡೋದಕ್ಕೆ ಆಗಲ್ಲ ಎಂದು ನೀವು ಚಿಂತಿಸುತ್ತಿದ್ದರೆ, ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಹೌದು!!ನೀವು ದೂರ ಪ್ರಯಾಣ ಮಾಡಬೇಕು ಎಂದು ಯೋಜನೆ ಹಾಕಿ ಪ್ರವಾಸಕ್ಕೆ ಹೋಗಬೇಕು ಅಂದುಕೊಂಡರೆ ನೀವೇನು ಹೆಚ್ಚು ಖರ್ಚು ಮಾಡದೆ ಕಡಿಮೆ ಖರ್ಚಲ್ಲೇ ಕಾರನ್ನೆ ಹಾಸಿಗೆ ಮಾಡಬಹುದು.

ಕಾರು ಪ್ರಯಾಣ ಮಾಡುವಾಗ ಅದರಲ್ಲಿಯೂ ಲಾಂಗ್ ಡ್ರೈವ್ (Long Drive) ಎಂದಾದರೆ ಅಷ್ಟು ದೂರ ಕುಳಿತುಕೊಂಡೆ ಪ್ರಯಾಣ ಮಾಡೋದು ಸುಲಭದ ಮಾತಲ್ಲ. ಹೀಗೆ ಪ್ರಯಾಣ ಮಾಡುವಾಗ ಕಾರಿನೊಳಗೆ(car) ಹಾಸಿಗೆಯೊಂದಿದ್ದರೆ(Bed) ಎಷ್ಟು ಚೆನ್ನಾಗಿತ್ತು ಎಂಬ ಭಾವನೆ ಹೆಚ್ಚಿನವರಿಗೆ ಮೂಡದಿರದು. ಆದರೆ, ಇದೀಗ ನಾವು ಕಾರಿನ ಹಿಂದಿನ ಸೀಟನ್ನು ಹಾಸಿಗೆಯನ್ನಾಗಿ ಪರಿವರ್ತಿಸಲು ಸಹಕರಿಸುವ ಪರಿಕರದ ಕುರಿತ ಮಾಹಿತಿ ನಿಮಗಾಗಿ.

ದೂರದ ಊರಿನ ಪಯಣ(travel) ಎಂದಾಗ ಅದರಲ್ಲಿಯೂ ಫ್ಯಾಮಿಲಿ ಪೂರ್ತಿ ಹೋಗುವುದು ಎಂದಾದರೆ ಹೋಟೆಲ್ ಅಲ್ಲಿ ತಂಗಬೇಕಾಗುತ್ತದೆ. ಆಗ ಹೆಚ್ಚಿನ ಹಣ ಪಾವತಿ ಮಾಡಿದ ಬಳಿಕ ಬೇಕಾದ ವ್ಯವಸ್ಥೆ ಸಿಗದೇ ಇರುವ ಸಾಧ್ಯತೆ ಕೂಡ ಇದೆ. ಹೀಗಾದಾಗ ಮಾಡಿದ ಖರ್ಚೆಲ್ಲ ನೀರಲ್ಲಿ ಹೋಮ ಮಾಡಿದ ಹಾಗೇ ಆದರೂ ಅಚ್ಚರಿಯಿಲ್ಲ. ಅದಕ್ಕಾಗಿ ಕಾರ್ ಹಿಂಬದಿಯ ಸೀಟಿನಲ್ಲಿ ಮಲಗಲು (Sleep) ಅವಕಾಶ ಕಲ್ಪಿಸುವ ವಿಶೇಷತೆ ಈಗ ಲಭ್ಯವಿದೆ.

ಹೌದು!! ಇನ್ಫ್ಲೇ ಟೇಬಲ್ ಕಾರ್ ಮ್ಯಾಟ್ರೆಸ್ ( Car Rear Seat)ದೀರ್ಘ ಕಾರ್ ಟ್ರಿಪ್‌ಗಳಿಗೆ ಉತ್ತಮವಾಗಿದ್ದು, ಈ ಮ್ಯಾಟ್ರೆಸ್ ಅನ್ನು ಖರೀದಿಸುವ ಮೊದಲಿಗೆ ಅದರ ಗುಣಮಟ್ಟ, ಬಳಕೆಯಾದ ವಸ್ತು, ಮತ್ತು ಭಾರ ಹೊರುವ ಸಾಮರ್ಥ್ಯವೇನು ಎಂಬುದನ್ನು ಗಮನಿಸಬೇಕಾಗುತ್ತದೆ.

ನೀವು ಕಾರಿನೊಂದಿಗೆ ದೀರ್ಘ ಪ್ರವಾಸಕ್ಕೆ ಹೋದಾಗ ಕಾರಿನ ಹಿಂದಿನ ಸೀಟನ್ನು ಹಾಸಿಗೆಯಾಗಿ ಪರಿವರ್ತನೆ ಮಾಡಬಹುದು.ಎಸ್‌ಯುವಿ( SUV) ,ಸೆಡಾನ್, ಹ್ಯಾಚ್‌ಬ್ಯಾಕ್ ಮತ್ತು ಮಿನಿ ವ್ಯಾನ್‌ನಂತಹ ವಿವಿಧ ರೀತಿಯ ಕಾರುಗಳಿಗೆ Inflatable ಮ್ಯಾಟ್ರೆಸ್‌ ಲಭ್ಯವಿದೆ. ಆನ್‌ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ (Online Shipping Platform) ಅಮೆಜಾನ್‌ನಲ್ಲಿ ಅವುಗಳ ಬೆಲೆ 1700 ರೂಪಾಯಿಯಿಂದ ಪ್ರಾರಂಭವಾಗುತ್ತದೆ. ಇಲ್ಲಿ ನೀವು ಖರೀದಿಸಲು ಆಯ್ಕೆ ಮಾಡಿದ ಇನ್ಫ್ಲೇ ಟೇಬಲ್ ಕಾರ್ ಮ್ಯಾಟ್ರೆಸ್, ನಿಮ್ಮ ಕಾರು ಮತ್ತು ಮಾದರಿಗೆ ಸರಿ ಹೊಂದುತ್ತದಾ ಎಂದು ನೋಡಿಕೊಳ್ಳಬೇಕು. ಆನ್‌ಲೈನ್‌ನಲ್ಲಿ Car Inflatable Mattress ಎಂದು ಹುಡುಕಾಟ ನಡೆಸಿದರೆ ಹಲವು ಬ್ರಾಂಡ್‌ಗಳ ಉತ್ಪನ್ನಗಳನ್ನೂ ನೋಡಬಹುದು. ನಿಮ್ಮ ಬಜೆಟ್ ಮತ್ತು ವಿಮರ್ಶೆಗಳ ಅನುಸಾರ ಅವುಗಳಲ್ಲಿ ಯಾವುದನ್ನು ಬೇಕಾದರೂ ಆಯ್ಕೆ ಮಾಡುವ ಅವಕಾಶವಿದೆ.

Leave A Reply

Your email address will not be published.