Toyota : ಈ ಜನಪ್ರಿಯ ಟೊಯೊಟಾ ಕಾರಿನ ಬೆಲೆ ಏರಿಕೆ!

Share the Article

Toyota: ಜನಪ್ರಿಯ ವಾಹನ ತಯಾರಕ ಕಂಪನಿ ಟೊಯೊಟಾ (Toyota) ಇದೀಗ ತನ್ನ ಕಾರಿನ ಬೆಲೆ ಏರಿಕೆ ಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟೊಯೊಟಾ ವೆಲ್‌ಫೈರ್ ಭಾರೀ ಬೇಡಿಕೆಯಲ್ಲಿದೆ. ಇದೀಗ ಕಂಪನಿಯು ಈ ವೆಲ್‌ಫೈರ್‌ ಕಾರಿನ ಬೆಲೆಯನ್ನು ಹೆಚ್ಚಿಸಿದೆ (Toyota vellfire price hike).

ವೆಲ್‌ಫೈರ್‌ ಎಂಪಿವಿಯ ಬೆಲೆಯನ್ನು ಟೊಯೊಟಾ ಕಂಪನಿಯು ರೂ.2.10 ಲಕ್ಷಗಳಷ್ಟು ಏರಿಕೆ ಮಾಡಿದೆ. ಈ ಕಾರನ್ನು ‘ಹೈಬ್ರಿಡ್’
(hybrid) ರೂಪಾಂತರದಲ್ಲಿ ಲಭ್ಯವಿದ್ದು, ಬೆಲೆ ಏರಿಕೆಯ ಬಳಿಕ ಈ ಟೊಯೊಟಾ ವೆಲ್‌ಫೈರ್‌ ಕಾರಿನ ಎಕ್ಸ್ ಶೋರೂಂ ಬೆಲೆ ರೂ.96.55 ಲಕ್ಷವಾಗಿದೆ.

ಟೊಯೊಟಾ ವೆಲ್‌ಫೈರ್ (Toyota vellfire) ಮಾದರಿಯು ಒಂದೇ ರೂಪಾಂತರದಲ್ಲಿ ಲಭ್ಯವಿದ್ದು, ಅದು ಎಕ್ಸಿಕ್ಯುಟಿವ್ ಲೌಂಜ್ ಎಂಬ ರೂಪಾಂತರವಾಗಿದೆ. ಕಾರಿನಲ್ಲಿ 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ (petrol engine) ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ. ಎಂಜಿನ್ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ.

ವೆಲ್‌ಫೈರ್‌ ಕಾರಿನ (car) ಒಳಭಾಗದ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳು ಇವೆ. ಇದು ಗ್ರಾಹಕರನ್ನು ಆಕರ್ಷಿತಗೊಳಿಸಲಿದೆ.
ಈ ಎಂಪಿವಿಯಲ್ಲಿ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಇವೆ.

7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಸುರಕ್ಷತಾ ದೃಷ್ಟಿಯಿಂದ ಅಳವಡಿಸಲಾಗಿದೆ. ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್ ಸೇರಿದಂತೆ ಹಲವು ಸುರಕ್ಷತಾ ಫೀಚರ್ಸ್ ಗಳು ಇವೆ.

ಟೊಯೊಟಾ ಕಂಪನಿಯು ತನ್ನ ಇನ್ನೋವಾ ಹೈಕ್ರಾಸ್ ಎಂಪಿವಿಯ (Innova hycross MPV) ಬೆಲೆಯನ್ನು ಹೆಚ್ಚಿಸಿದ್ದು,7 seater G ಪೆಟ್ರೋಲ್ ಆವೃತ್ತಿಯ ಬೆಲೆ ರೂ.25,000 ಏರಿಕೆಯಾಗಿದ್ದು, ಎಕ್ಸ್ ಶೋರೂಂ ದರ ರೂ.18.55 ಲಕ್ಷ ಇದೆ. ಎಂಟು ಆಸನಗಳ G, ಏಳು ಆಸನಗಳ GX ಮತ್ತು ಎಂಟು ಆಸನಗಳ GX ಬೆಲೆ ಕ್ರಮವಾಗಿ ರೂ.18.60 ಲಕ್ಷ, ರೂ.19.40 ಲಕ್ಷ ಮತ್ತು ರೂ.19.45 ಲಕ್ಷ ಆಗಿದೆ. ಇನ್ನು ಏಳು ಆಸನಗಳ VX ಸ್ಟ್ರಾಂಗ್ ಹೈಬ್ರಿಡ್ ಪೆಟ್ರೋಲ್ ರೂಪಾಂತರದ ಬೆಲೆ ರೂ.75,000 ಏರಿಕೆಯಾಗಿದ್ದು, ಇದರ ಎಕ್ಸ್ ಶೋರೂಂ ಬೆಲೆ ರೂ.24.76 ಲಕ್ಷಕ್ಕೆ ತಲುಪಿದೆ. ಟಾಪ್ ಎಂಡ್ ಮಾದರಿ ZX ಬೆಲೆ ರೂ.75,000 ಗೆ ಏರಿದೆ. ಎಂಟು ಆಸನಗಳ VX ರೂಪಾಂತರದ ಬೆಲೆ ರೂ.5,000 ಗೆ ಏರಿಕೆಯಾಗಿದೆ.

ಇದನ್ನೂ ಓದಿ: ಮಹೀಂದ್ರಾ ಥಾರ್‌ ಬೇಸ್‌ ರೂಪಾಂತರಕ್ಕೆ ಭಾರೀ ಬೇಡಿಕೆ!

Leave A Reply