Home Education KPSC : ಗ್ರೂಪ್‌ ಸಿ ತಾಂತ್ರಿಕೇತರ ಹುದ್ದೆಗೆ ದಾಖಲೆ ಪರಿಶೀಲನೆ, ಅರ್ಹತಾ ಪಟ್ಟಿ ಪ್ರಕಟ!!

KPSC : ಗ್ರೂಪ್‌ ಸಿ ತಾಂತ್ರಿಕೇತರ ಹುದ್ದೆಗೆ ದಾಖಲೆ ಪರಿಶೀಲನೆ, ಅರ್ಹತಾ ಪಟ್ಟಿ ಪ್ರಕಟ!!

Hindu neighbor gifts plot of land

Hindu neighbour gifts land to Muslim journalist

KPSC group C: ಕರ್ನಾಟಕ ಲೋಕಸೇವಾ ಆಯೋಗವು (KPSC)ವಿವಿಧ ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಮೂಲ ದಾಖಲೆಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ನಾನ್ ಟೆಕ್ನಿಕಲ್ ವಿವಿಧ ಗ್ರೂಪ್ ಸಿ ಪೋಸ್ಟ್ಗಳ(KPSC Group C Non Technical DV List) ನೇಮಕಾತಿಗೆ ಸಂಬಂಧಿಸಿದಂತೆ ದಾಖಲೆಗಳ ಪರಿಶೀಲನೆಗೆ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಸದರಿ ಪಟ್ಟಿಯಲ್ಲಿ ಒಟ್ಟು 55 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿದೆ. ಕೆಪಿಎಸ್ಸಿ( KPSC)ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳಿಗೆ(KPSC Group C Non Technical DV List) ಶಿಫಾರಸ್ಸು ಮಾಡಲಾದ ಸದ್ಯ ಪ್ರಕಟಿಸಲಾದ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಸೂಚನಾ / ಪ್ರವೇಶ ಪತ್ರಗಳನ್ನು ನೀಡಲಾಗಿದೆ.

ಅಭ್ಯರ್ಥಿಗಳು ಮೂಲ ದಾಖಲೆಗಳ ಚೆಕ್ ಲಿಸ್ಟ್ ಹೀಗಿದೆ:
ವಯೋಮಿತಿ ಅರ್ಹತೆ ಪ್ರಮಾಣ ಪತ್ರ ಇಲ್ಲವೇ ಎಸೆಸೆಲ್ಸಿ ಅಂಕಪಟ್ಟಿ (SSLC Marks Card)) ಕೂಡ ಆಗಲಿದೆ. ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರ, ಸೇವಾ ನಿರತ ಅಭ್ಯರ್ಥಿಗಳ ಪ್ರಮಾಣ ಪತ್ರ, 2 ಪಾಸ್ ಪೋರ್ಟ್ ಅಳತೆಯ ಭಾವಚಿತ್ರ,( Passport Size Photo)ಜಾತಿ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು ಬೇಕಾಗುತ್ತವೆ. ಅರ್ಜಿ ಹಾರ್ಡ್ ಕಾಪಿ, ಪರೀಕ್ಷೆ ಬರೆದ ಹಾಲ್ ಟಿಕೆಟ್ (Hall Ticket)ಅನ್ನು ಕೂಡ ಅಭ್ಯರ್ಥಿಗಳು(Candidates )ಕೂಡ ಹಾಜರುಪಡಿಸಬೇಕು. ಅಭ್ಯರ್ಥಿಗಳು ಎಲ್ಲಾ ಮೂಲ ದಾಖಲೆಗಳ 2 ಸೆಟ್ ಜೆರಾಕ್ಸ್ ಪ್ರತಿಗಳನ್ನು( Xerox Copy) ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಿಸಿ ಸಲ್ಲಿಸಬೇಕಾಗುತ್ತದೆ.

ಇದರ ಜೊತೆಗೆ, ಗ್ರಾಮೀಣ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳು, ಕನ್ನಡ ಮಾಧ್ಯಮ ಮೀಸಲಾತಿಗೆ ಸಂಬಂಧಿಸಿದ ಪ್ರಮಾಣ, ಪತ್ರಗಳು, ಮಾಜಿ ಸೈನಿಕರ ಮೀಸಲಾತಿ ಪ್ರಮಾಣ ಪತ್ರಗಳು, ಅಂಗವಿಕಲ ಅಭ್ಯರ್ಥಿ ಮೀಸಲಾತಿ ಪ್ರಮಾಣ ಪತ್ರ, ಯೋಜನೆಗಳಿಂದ ನಿರಾಶ್ರಿತ ಅಭ್ಯರ್ಥಿಗಳ ಮೀಸಲಾತಿ ಪ್ರಮಾಣ ಪತ್ರ, ಸಂಬಂಧಪಟ್ಟ ತಾಲ್ಲೂಕು ತಾಹಶೀಲ್ದಾರ್ ರವರಿಂದ ಪಡೆದ ವಾಸಸ್ಥಳ ದೃಢೀಕರಣ ಪತ್ರ ಈ ಮೂಲ ದಾಖಲೆಗಳನ್ನು ಅಭ್ಯರ್ಥಿಗಳು ಒಯ್ಯಬೇಕಾಗುತ್ತದೆ. ಈ ಪ್ರಮಾಣ ಪತ್ರಗಳಲ್ಲಿ ಮೀಸಲಾತಿಗೆ ಯಾವ ದಾಖಲೆಗಳು ಅನ್ವಯವಾಗುತ್ತದೆಯೋ ಆ ಎಲ್ಲ ದಾಖಲೆಗಳ ಜೊತೆಗೆ ಹಾಜರಾಗಬೇಕು. ಮಾರ್ಚ್ 13 ರಂದು ಮೂಲ ದಾಖಲೆಗಳ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತದೆ. ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಲಾದ ಸಮಯಕ್ಕೆ ತಪ್ಪದೇ ಹಾಜರಾಗಲು ಸೂಚಿಸಲಾಗಿದೆ.

ಇದನ್ನೂ ಓದಿ :ITR ಫೈಲ್ ಮಾಡುವವರೇ ಇತ್ತ ಗಮನಿಸಿ! ಈ ಕೆಲಸ ಕೂಡಲೇ ಮಾಡಿ, ಇಲ್ಲದಿದ್ದರೆ ಆಗುವುದಿಲ್ಲ ಟ್ಯಾಕ್ಸ್ ರಿಟರ್ನ್