Portable Folding Fan : ಈ ಫ್ಯಾನ್‌ಗೆ ಕರೆಂಟ್‌ ಬೇಕಿಲ್ಲ! ವಿದ್ಯುತ್‌ ಇಲ್ಲದಿದ್ದರೂ ನಿಮ್ಮನ್ನು ಕೂಲ್‌ ಕೂಲ್‌ ಮಾಡೋ ಫ್ಯಾನ್‌ ಮಾರುಕಟ್ಟೆಯಲ್ಲಿ ಲಭ್ಯ, ಬೆಲೆ ತೀರಾ ಕಡಿಮೆ!

Portable Folding Fan: ಈಗಾಗಲೇ ಬೇಸಿಗೆ ಆರಂಭವಾಗಿದ್ದು ಜನರು ಬಿಸಿಲಿನ ತಾಪ ತಡೆಯಲಾಗದೆ ತಂತ್ರಜ್ಞಾನ( Technology) ಮೊರೆ ಹೋಗುತ್ತಿದ್ದಾರೆ. ದಿನದ 24ಗಂಟೆಯಲ್ಲಿ ಎಸಿ, ಕೂಲರ್ (cooler) ಇಲ್ಲದೆ ಸಾಧ್ಯವಿಲ್ಲಾ ಎಂಬ ಮಟ್ಟಿಗೆ ಬಿಸಿಲಿನ ಬೇಗೆ ಸುಡುತಿದೆ. ಸಾಮಾನ್ಯವಾಗಿ ಬೇಸಿಗೆ ಸಮೀಪಿಸುತ್ತಿದ್ದಂತೆಯೇ ಎಸಿ ಬೆಲೆ ಗಣನೀಯವಾಗಿ ಹೆಚ್ಚಾಗುತ್ತದೆ. ಈ ಕಾರಣಕ್ಕಾಗಿ ಬಹಳಷ್ಟು ಮಂದಿ ಎಸಿ ಬದಲಿಗೆ ಕೂಲರ್ ಆಯ್ಕೆ ಮಾಡುತ್ತಾರೆ. ಆದರೆ, ಇದೀಗ ಕಡಿಮೆ ಬೆಲೆಯ ಫ್ಯಾನ್ ಮಾರುಕಟ್ಟೆಗೆ ಕಾಲಿಟ್ಟಿದೆ.

ಇನ್ನೂ ಹವಾ ನಿಯಂತ್ರಣ (AC), ಕೂಲರ್ (Cooler) ಬಳಕೆ ಮಾಡೋದಕ್ಕೆ ಪವರ್ ಬೇಕೆ ಬೇಕು. ದಿನದ ಹೆಚ್ಚಿನ ಸಮಯ ಪವರ್ ಕಟ್ ಸಮಸ್ಯೆಯಿಂದ ಹೆಚ್ಚಿನ ಮಂದಿ ಬೇಸಿಗೆಯ ಬೇಗೆಯಿಂದ ಪಾರಾಗಲು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಇತ್ತೀಚೆಗೆ ರಣ ಬಿಸಿಲಿನ ಝಳ ಹೇಗಿದೆ ಅಂದರೆ ಹೊರಗೆ ಕಾಲಿಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಆಗಾಗ ಕೈ ಕೊಡುವ ಕರೆಂಟ್ . ಇನ್ನೂ ಹೇಗಪ್ಪಾ ಸೆಕೆಯ ಬೇಗೆಯಿಂದ ಪಾರಾಗೋದು ಎಂದು ತಲೆ ಕೆಡಿಸಿಕೊಂಡಿದ್ದೀರಾ?? ಹಾಗಿದ್ರೆ ನಿಮ್ಮ ಟೆನ್ಶನ್ ರಿಲೀಫ್ (Tension Relief)ಮಾಡಲು ಬಂದಿದೆ ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್(Portable Folding Fan). ಇದರ ವಿಶೇಷತೆ ಏನು ಗೊತ್ತಾ? ನೀವು ವಿದ್ಯುತ್ ಅಗತ್ಯವಿಲ್ಲದೆ ಈ ಸಾಧನವನ್ನು ಬಳಕೆ ಮಾಡಬಹುದು.

ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಹೆಸರೇ ಹೇಳುವಂತೆ ಮಡಚಬಹುದಾದ ಫ್ಯಾನ್ ಆಗಿದ್ದು, ಇದನ್ನು ಸುಲಭವಾಗಿ ಒಯ್ಯಬಹುದು. ಇಂದು ನಾನಾ ಬಗೆಯ ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಗಳು( Portable Folding Fan)ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವುಗಳನ್ನು ಚಲಾಯಿಸಲು ವಿದ್ಯುತ್ ಅವಶ್ಯಕತೆ ತಲೆದೋರದು. ಏಕೆಂದರೆ ವಿದ್ಯುತ್ (current)ಬದಲಿಗೆ ಯುಎಸ್ಬಿ ಚಾರ್ಜರ್(USB charger) ಮೂಲಕ ಚಾರ್ಜ್ ಮಾಡುವ ವಿಶೇಷತೆಯನ್ನು ಈ ಸಾಧನ ಒಳಗೊಂಡಿದೆ. ಇದಲ್ಲದೆ, ಅವುಗಳಿಗೆ ಬ್ಯಾಟರಿಯನ್ನು ಅಳವಡಿಸಿ ತಂಪಾದ ಗಾಳಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಸಂಪೂರ್ಣವಾಗಿ ಪ್ಲಾಸ್ಟಿಕ್‌ನಿಂದ( Plastic) ಮಾಡಲ್ಪಟ್ಟಿರುವ ಈ ಫ್ಯಾನ್ ನಲ್ಲಿ ಹವಾ ನಿಯಂತ್ರಣಕ್ಕಾಗಿ ಗುಂಡಿಗಳನ್ನು ಕೂಡ ಒಳಗೊಂಡಿದೆ.ಇನ್ನೂ ಈ ಸಾಧನದ ಬೆಲೆ ಎಷ್ಟು ಎಂದು ನೋಡಿದರೆ, ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ಬೆಲೆ ಸುಮಾರು 1500 ರೂ.ನಿಂದ 3000 ರೂ. ವರೆಗೆ ಇರಲಿದೆ.

ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ವಿಶೇಷತೆ ಗಮನಿಸಿದರೆ, ಎಲ್ಇಡಿ ಲೈಟ್ (LED LIGHT)ಕೂಡ ದೊರೆಯಲಿದ್ದು, ರಾತ್ರಿ ಹೊತ್ತು ಪವರ್ ಕಟ್ ಆದಾಗ ಈ ಎಲ್ಇಡಿ ಲೈಟ್ ಅನ್ನು ಎಮರ್ಜೆನ್ಸಿ ಲೈಟ್( Emergency Light)ಆಗಿ ಕೂಡ ಬಳಕೆ ಮಾಡಬಹುದು. ಈ ಫ್ಯಾನ್ 180 ಡಿಗ್ರಿಗಳವರೆಗೆ ತಿರುಗಬಹುದಾದ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದನ್ನು ಗೋಡೆಯ( wall)ಮೂಲೆಯಲ್ಲಿ ಅಳವಡಿಸಿದ್ದಲ್ಲಿ ಇಡೀ ಕೋಣೆಗೆ ಗಾಳಿಯನ್ನು (Air) ಪೂರೈಕೆ ಮಾಡುತ್ತದೆ.

Leave A Reply

Your email address will not be published.