Home Education Viral Video: ತರಗತಿಗೆ ಅರೆನಗ್ನವಾಗಿ ಬಂದ ಟೀಚರ್; ಮುಂದೆ ನಡೆದಿದ್ದೇ ಬೇರೆ?

Viral Video: ತರಗತಿಗೆ ಅರೆನಗ್ನವಾಗಿ ಬಂದ ಟೀಚರ್; ಮುಂದೆ ನಡೆದಿದ್ದೇ ಬೇರೆ?

Hindu neighbor gifts plot of land

Hindu neighbour gifts land to Muslim journalist

Teacher Viral Video: ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಚಾರಗಳು ಹರಿದಾಡುತ್ತಲೇ ಇರುತ್ತದೆ. ಇದೀಗ ವೈರಲ್ ಆಗಿರುವ
ವಿಡಿಯೋದಲ್ಲಿ ಶಿಕ್ಷಕನ ಅನುಚಿತ ವರ್ತನೆ ಸೆರೆಯಾಗಿದೆ. ಈ ವಿಡಿಯೋ ನೋಡಿದ್ರೆ ನೀವು ಯಪ್ಪಾ, ಇಂತಾ ಶಿಕ್ಷಕರೂ(teacher viral video ) ಇರುತ್ತಾರಾ?? ಎಂದು ಹೇಳುತ್ತಿರಾ.

ಶಿಕ್ಷಕರು ಮಕ್ಕಳಿಗೆ ವಿದ್ಯೆ(education) ನೀಡಿ ಸರಿಯಾದ ದಾರಿಯಲ್ಲಿ ನಡೆಸುವ ಮಾರ್ಗದರ್ಶಕರು. ಶಿಕ್ಷಕರು ಮಕ್ಕಳಿಗೆ(students) ಒಳ್ಳೆಯ ನಡವಳಿಕೆ, ವಿದ್ಯೆ-ಬುದ್ಧಿ ನೀಡುತ್ತಾರೆ. ಮಕ್ಕಳ ತಪ್ಪನ್ನು ತಿದ್ದಿ ತೀಡುತ್ತಾರೆ, ಸಮಾಜದಲ್ಲಿ ಗಣ್ಯ ವ್ಯಕ್ತಿಯನ್ನಾಗಿ ರೂಪಿಸುತ್ತಾರೆ ಎಂಬ ಭರವಸೆಯಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ ಇದೀಗ ವೈರಲ್(viral video) ಆಗಿರೋ ವಿಡಿಯೋದಲ್ಲಿ ಶಿಕ್ಷಕ ಏನು ಮಾಡಿದ್ದಾನೆ ಗೊತ್ತಾ? ತರಗತಿಗೆ ಅರೆನಗ್ನವಾಗಿ ಬಂದಿದ್ದಾನೆ ಅಷ್ಟೇ ಅಲ್ಲ, ನಿರಾಳವಾಗಿ ಕುರ್ಚಿಯಲ್ಲಿ ಕುಳಿತಿದ್ದಾನೆ.

ಕ್ಲೇಟನ್ ಕೌಂಟಿಯ ತರಗತಿಗೆ ಶಿಕ್ಷಕ ಅರೆನಗ್ನವಾಗಿ(naked) ಬಂದಿದ್ದು,
ಟಾಮ್ ಜೋನ್ಸ್ ಎಂಬವರು ಈ ದೃಶ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ಸ್ ಶಿಕ್ಷಕನ ವರ್ತನೆಗೆ ಕಿಡಿಕಾರಿದ್ದಾರೆ.

ವೀಡಿಯೋದಲ್ಲಿ ಶಿಕ್ಷಕನು ಅಂಗಿಯಿಲ್ಲದೆ ಕುರ್ಚಿ ಮೇಲೆ ಕುಳಿತುಕೊಂಡಿದ್ದು, ತನ್ನ ಪಾಡಿಗೆ ಕೈಯನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಮಾಡುತ್ತಾ, ಏನೋ ಬರೆಯುತ್ತಿರುವಂತೆ ಗೋಚರವಾಗುತ್ತದೆ. ಈತನ ಅನುಚಿತ ವರ್ತನೆಗೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರು ಇಂತಹ ಶಿಕ್ಷಕ ಶಾಲೆಯಲ್ಲಿ ಇರಲೇಬಾರದು. ಮಕ್ಕಳಿಗೆ ಪಾಠ ಮಾಡುವ ಬದಲು ಈತನಿಗೇ ಮಾಡಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈ ಬಗ್ಗೆ ಒಬ್ಬರು ಪೋಷಕರು ಮಾತನಾಡಿದ್ದು, “ಈ ಶಿಕ್ಷಕನನ್ನು ಇನ್ನೂ ಏಕೆ ಕೆಲಸದಿಂದ ವಜಾ ಮಾಡಿಲ್ಲ ಎಂದು ನಿರ್ವಾಹಕರನ್ನು ಕೇಳಿದರೆ, ಅವರು ಆ ವ್ಯಕ್ತಿಗೆ ಸರಿಯಾದ ಪ್ರಕ್ರಿಯೆ ಅಗತ್ಯ ಇದೆ ಎಂದು ಹೇಳುತ್ತಾರೆ” ಎಂದು ಹೇಳುತ್ತಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

https://www.wsbtv.com/news/local/clayton-county/parents-upset-partly-nude-teacher-spotted-classroom-still-job-interacting-with-students/2SY7EKUYD5DEDOLYVSBOD2OPTU/

ಶಿಕ್ಷಕನನ್ನು, ಶಿಕ್ಷಣತಜ್ಞರ ನ್ಯಾಯಮಂಡಳಿ ಅಥವಾ ಶಿಕ್ಷಣ ಮಂಡಳಿಯ ಮುಂದೆ ನ್ಯಾಯಯುತ ವಿಚಾರಣೆಗೆ ಒಪ್ಪಿಸಲಾಗುತ್ತದೆ. ವಿಚಾರಣೆ ನಡೆಯುವವರೆಗೆ ಶಿಕ್ಷಕರನ್ನು ಆಡಳಿತಾತ್ಮಕ ರಜೆಯಲ್ಲಿ ಇರಿಸಲು ಶಿಫಾರಸು ಮಾಡುವುದಾಗಿ ಒಯಿನೊನೆನ್ ಹೇಳಿದ್ದಾರೆ