WhatsApp Features: ವಾಟ್ಸಪ್ ಬಳಕೆದಾರರಿಗೆ ಗುಡ್ ನ್ಯೂಸ್ ; ಇನ್ಮುಂದೆ ಅಪರಿಚಿತ ಕರೆಗಳಿಗೆ ನೋ ಟೆನ್ಶನ್!

WhatsApp features : ವಿಶ್ವಾದ್ಯಂತ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್‌ಫಾರ್ಮ್ (Messaging Platform) ವಾಟ್ಸಪ್ ಪ್ರತಿ ಬಾರಿ ನೂತನ ಫೀಚರ್ (whatsapp features) ಗಳನ್ನು ಪರಿಚಯಿಸುತ್ತಲೇ ಇದೆ. ಬಳಕೆದಾರರನ್ನು ಅಚ್ಚರಿ ಮೂಡಿಸುವಂತಹ ಅದ್ಭುತ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ.

ಕಂಪನಿಯು ಎರಡು ದಿನಗಳ ಹಿಂದೆ ಟ್ಯಾಬ್ಲೆಟ್​ನಲ್ಲಿ ಸ್ಪ್ಲಿಟ್ ವ್ಯೂ ಫೀಚರ್ಸ್‌ (split view features) ನೀಡುವುದಾಗಿ ಘೋಷಣೆ ಮಾಡಿದ್ದು, ಇದೀಗ ಮತ್ತೊಂದು ಜನರಿಗೆ ಅಗತ್ಯವಾಗಿ ಬೇಕಾದ ಫೀಚರ್(features) ಅನ್ನು ನೀಡಲಿದೆ. ಯಾವ ಫೀಚರ್ ಅಂತೀರಾ? ಇನ್ಮುಂದೆ ಅಪರಿಚಿತರಿಂದ ಕರೆ ಬರುತ್ತಿದ್ದರೆ ನೀವು ಟೆನ್ಶನ್ ಪಡುವ ಅಗತ್ಯವೇ ಇಲ್ಲ. ಯಾಕೆ ಗೊತ್ತಾ? ಈ ನೂತನ ಫೀಚರ್ ಮೂಲಕ ಬಳಕೆದಾರರು ಅಪರಿಚಿತ ಕರೆಗಳಿಂದ ಮುಕ್ತಿ ಪಡೆಯಬಹುದು.

ಹೌದು, ಬಳಕೆದಾರರಿಗೆ ಅನುಕೂಲವಾಗಲು ವಾಟ್ಸಪ್ ಅಪರಿಚಿತ ಕರೆಗಳನ್ನು ಮ್ಯೂಟ್ (mute) ಮಾಡುವಂತಹ ಆಯ್ಕೆಯನ್ನು ನೀಡಲಿದೆ. ಆರಂಭದಲ್ಲಿ ಆಂಡ್ರಾಯ್ಡ್‌(Android) ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಈ ಫೀಚರ್ ಹೇಗೆ ಸೆಟ್ ಮಾಡೋದು? ನೋಡೋಣ.

ಆಂಡ್ರಾಯ್ಡ್ ಸ್ಮಾರ್ಟ್​ಫೋನ್​(smartphone) ನ ವಾಟ್ಸ್​ಆ್ಯಪ್ ಸೆಟ್ಟಿಂಗ್‌ ವಿಭಾಗದಲ್ಲಿ ‘ಅನಾಮಿಕ ಕರೆ ಮಾಡುವವರನ್ನು ಮ್ಯೂಟ್‌ ಮಾಡು’ ಎಂಬ ಫೀಚರ್ಸ್‌ ಇರುತ್ತದೆ. ಅದರಲ್ಲಿ ಆನ್‌ ಹಾಗೂ ಆಫ್‌ ಎಂಬ ಎರಡು ಆಯ್ಕೆಗಳಿರುತ್ತದೆ. ನೀವು ಇದನ್ನು ಆಫ್‌ ಮಾಡಿದಾಗ ಅಪರಿಚಿತ ನಂಬರ್​ನಿಂದ ವಾಟ್ಸ್​ಆ್ಯಪ್ ಕರೆ ಬರುವುದಿಲ್ಲ. ನೋಟಿಫಿಕೇಶನ್‌ ಬಾರ್‌ನಲ್ಲಿ ಅಪರಿಚಿತ ಕರೆಗಳ ಬಗ್ಗೆ ಮಾಹಿತಿ ಇರುತ್ತದೆ. ಈ ಫೀಚರ್ ಅಭಿವೃದ್ಧಿಯಲ್ಲಿದ್ದು, ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ.

ಈ ಮೊದಲೇ ಘೋಷಣೆ ಮಾಡಿದ್ದ ಸ್ಪ್ಲಿಟ್ ವ್ಯೂ ಫೀಚರ್ಸ್‌ ಅನ್ನು ವಾಟ್ಸ್​ಆ್ಯಪ್ ತನ್ನ ಟ್ಯಾಬ್ಲೆಟ್(tablet) ಯೂಸರ್ಸ್​ಗೆ ನೀಡಲಿದೆ. ಈ ಫೀಚರ್ ಮೂಲಕ ಒಂದೇ ಮೊಬೈಲ್‌ನಲ್ಲಿ ಎರಡೆರಡು ಆ್ಯಪ್‌(app) ಗಳನ್ನು ಏಕಕಾಲದಲ್ಲಿ ಬಳಸಬಹುದು. ಸದ್ಯ ಈ ಫೀಚರ್ ಪರೀಕ್ಷೆಯ ಹಂತದಲ್ಲಿದೆ. ಇದು ಕೂಡ ಶೀಘ್ರದಲ್ಲೇ ಗ್ರಾಹಕರಿಗೆ ಬಳಕೆಗೆ ಸಿಗಲಿದೆ.

Leave A Reply

Your email address will not be published.