Home News Cheapest Recharge Plan : ಅಗ್ಗದ ಬೆಲೆಗೆ ದೊರೆಯಲಿದೆ BSNL ನ ಈ ರೀಚಾರ್ಜ್ ಪ್ಲ್ಯಾನ್,...

Cheapest Recharge Plan : ಅಗ್ಗದ ಬೆಲೆಗೆ ದೊರೆಯಲಿದೆ BSNL ನ ಈ ರೀಚಾರ್ಜ್ ಪ್ಲ್ಯಾನ್, ದಿನಕ್ಕೆ 5GB ಡಾಟಾ ನಿಮಗಾಗಿ!

Hindu neighbor gifts plot of land

Hindu neighbour gifts land to Muslim journalist

Cheapest Recharge Plan: ಟೆಲಿಕಾಮ್ ಕಂಪನಿಗಳಲ್ಲಿ (Telicom Company)ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ (Reliance Jio) ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯುತ್ತಿರುವುದು ಗೊತ್ತಿರುವ ವಿಚಾರವೇ! ಈ ನಡುವೆ ಏರ್ಟೆಲ್( Airtel)ಕೂಡ ಜಿಯೋ ಗೆ ಟಕ್ಕರ್ ನೀಡಲು ಮುಂದಾಗಿ ರೀಚಾರ್ಜ್ ಪ್ಲಾನ್ಗಳಲ್ಲಿ ಬದಲಾವಣೆ ಮಾಡಿದ್ದು, ಈ ನಡುವೆ ಬಿಎಸ್ಎನ್ಎಲ್ ಕೂಡ ಹೊಸ ಪ್ಲಾನ್ ಪರಿಚಯಿಸಿ ಪೈಪೋಟಿ ನೀಡಲು ಅಣಿಯಾಗಿದೆ.

ಇತ್ತೀಚಿನ ದಿನಗಳಲ್ಲಿ ದಿನಕ್ಕೆ ಕಮ್ಮಿಎಂದರೂ 2GB ಡೇಟಾ ಬೇಕೆ ಬೇಕು. ಆದರೆ, 2GB ಎಲ್ಲಿಗೆ ಸಾಲುತ್ತೆ ಹೇಳಿ!! ಹೀಗಾಗಿ, ಹೆಚ್ಚುವರಿ ಡೇಟಾ ಬೇಕಾದರೆ ಹೆಚ್ಚಿನ ರೀಚಾರ್ಜ್ ಮಾಡಬೇಕಾಗುತ್ತದೆ. ಆದರೆ, ನೀವು ಹೆಚ್ಚುವರಿ ಪಾವತಿ ಮಾಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಿದ್ರೆ ಇಲ್ಲಿದೆ ನೋಡಿ ನಿಮಗೆ ಸಿಹಿ ಸುದ್ದಿ.

ಹೌದು!! ಸರ್ಕಾರಿ ಟೆಲಿಕಾಂ ಕಂಪನಿ BSNL ನ ಕೈಗೆಟುಕುವ ಬೆಲೆಯಲ್ಲಿ ಹೆಚ್ಚಿನ ಡೇಟಾ ಅಗತ್ಯವಿರುವ ಗ್ರಾಹಕರಿಗೆ ಸೂಪರ್ ಡೂಪರ್ ಆಫರ್ ನೀಡಿದೆ. ದಿನಕ್ಕೆ 5 GB ಡೇಟಾ ಕೈಗೆಟಕುವ ದರದಲ್ಲಿ (Cheapest Recharge Plan) ಲಭ್ಯವಾಗಲಿದೆ. ಇದಲ್ಲದೆ, 84 ದಿನಗಳ ದೀರ್ಘ ವ್ಯಾಲಿಡಿಟಿ ಯೋಜನೆ ಲಭ್ಯವಾಗಲಿದೆ. ಹಾಗಿದ್ರೆ, ಯಾವುದೀ ಪ್ಲಾನ್ ಎಂದು ನೋಡುವುದಾದರೆ,BSNL ನ ಈ ಬಜೆಟ್ ಯೋಜನೆಯ ಬೆಲೆ 599 ರೂ. ಪ್ಲಾನ್. ಈ ಪ್ಲಾನ್ ಮೂಲಕ 84 ದಿನಗಳ ವ್ಯಾಲಿಡಿಟಿ ಪಡೆಯಬಹುದು. ಅಂದರೆ, ಗ್ರಾಹಕರು ಸುಮಾರು 3 ತಿಂಗಳವರೆಗೆ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.

ಇದಲ್ಲದೇ ದೀರ್ಘಾವಧಿಯ ವ್ಯಾಲಿಡಿಟಿ ಇರುವ ಪ್ಲಾನ್ ಗಳನ್ನು ಬಯಸುವ ಮಂದಿಗೆ ಕಡಿಮೆ ಬೆಲೆಯಲ್ಲಿ 3 ತಿಂಗಳ ವ್ಯಾಲಿಡಿಟಿ ಪ್ರಯೋಜನ ಪಡೆಯಲು ಒಳ್ಳೆಯ ಯೋಜನೆ. ಇದರ ಜೊತೆಗೆ ಉಚಿತ ಕರೆ ಹಾಗೂ ಪ್ರತಿದಿನ 100 ಎಸ್ಎಂಎಸ್ (Sms) ಗ್ರಾಹಕರಿಗೆ ಪ್ರತಿದಿನ 5GB ಡೇಟಾವನ್ನು ನೀಡಲಾಗುತ್ತದೆ. ಈ ಯೋಜನೆ 3 ತಿಂಗಳವರೆಗೆ ಸಕ್ರಿಯವಾಗಿರಲಿದ್ದು, ಮಾಸಿಕ ಖರ್ಚು ಸುಮಾರು 200 ರೂಪಾಯಿ ವೆಚ್ಚವಾಗುತ್ತದೆ. ಹೀಗಾಗಿ, ಈ ಯೋಜನೆಯನ್ನು ಅಗ್ಗದ ಬೆಲೆಯಲ್ಲಿ (Cheapest Recharge Plan) ಹೆಚ್ಚಿನ ಪ್ರಯೋಜನ ನೀಡುವ ಅತ್ಯುತ್ತಮ ರೀಚಾರ್ಜ್ ಪ್ಲಾನ್ ಎನ್ನಬಹುದು.