Home News Spider: ಅಬ್ಬಬ್ಬಾ! ವ್ಯಕ್ತಿಯ ಕಿವಿಯಿಂದ ಹೊರಬಂತು ಜೇಡ, ವಿಡಿಯೋ ನೋಡಿ ಗಾಬರಿ ಬಿದ್ದ ಜನ!

Spider: ಅಬ್ಬಬ್ಬಾ! ವ್ಯಕ್ತಿಯ ಕಿವಿಯಿಂದ ಹೊರಬಂತು ಜೇಡ, ವಿಡಿಯೋ ನೋಡಿ ಗಾಬರಿ ಬಿದ್ದ ಜನ!

Hindu neighbor gifts plot of land

Hindu neighbour gifts land to Muslim journalist

Spider :ಜಿರಳೆಗೆ (cockroach) ಹೆದರೋದು ಬರೀ ಹುಡುಗಿಯರು ಅನ್ನೋ ಸತ್ಯ ಎಲ್ಲರಿಗೂ ಗೊತ್ತು. ಆದ್ರೆ ಜೇಡದ ಹುಳು( spider mite)ವಿಗೆ ಮಾತ್ರ ಎಲ್ಲರೂ ಹೆದರುವವರೆ. ಅದು ಎದರುಗೇನಾದರೂ ಕಂಡಿತೆಂದರೆ ಅಂಜಿಕೆಯಿಂದ ದೂರ ಸರಿದು ನಿಲ್ಲುತ್ತಾರೆ. ಹತ್ತಿರ ಬಂತೆಂದರೆ ಸಾಕು ಹೌಹಾರುತ್ತಾರೆ. ಆದ್ರೆ ಅದೇ ಜೇಡ ನಿಮ್ಮ ಮೈಮೇಲೇನಾದರೂ ಹತ್ತಿದರೆ ಅಥವಾ ನಿಮ್ಮ ಕಿವಿಯ ಒಳಗೆ ಹೊಕ್ಕಿದಾಗ ಏನಾಗಬಹುದು ಎಂದಾದರೂ ಯೋಚಿಸಿದ್ದೀರಾ? ಇಂತಹ ಯೋಚನೆಯೇ ಕೆಲವರಿಗೆ ಅಸಹ್ಯ ಭಾವನೆಯನ್ನು ಹಾಗೂ ನಡುಕ ಉಂಟುಮಾಡಬಹುದು. ದುರಾದೃಷ್ಟವಶಾತ್‌ ಇಂತಹ ಯೋಚನೆಯೊಂದು ನಿಜವಾಗಿಬಿಟ್ಟಿದೆ.

ಹೌದು, ವ್ಯಕ್ತಿಯೊಬ್ಬನ ಕಿವಿಯಿಂದ ಜೀವಂತ ಜೇಡವೊಂದು ಹೊರಬರುತ್ತಿರುವ ವಿಡಿಯೋವೀಗ ಸೋಷಿಯಲ್ ಮೀಡಿಯಾಗಳಲ್ಲಿ ಆಗಿದೆ. ಆಡ್ಲಿ ಟೆರಿಫಯಿಂಗ್‌ ಎನ್ನುವ ಟ್ವಿಟರ್‌ ಖಾತೆಯಲ್ಲಿ, ಈ ವಿಡಿಯೋ ಅಪ್ಲೋಡ್ ಆಗಿದ್ದು ನೆಟ್ಟಿಗರೆಲ್ಲರೂ ಹುಬ್ಬೇರುವಂತೆ ಮಾಡಿದೆ. ಈ ವೈರಲ್‌ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಲಗಿಕೊಂಡಿದ್ದಾನೆ. ಆಗ ಇನ್ನೊಬ್ಬ ವ್ಯಕ್ತಿ ಆತನ ಕಿವಿಯಲ್ಲಿ ಯಾವುದೋ ಔಷಧವನ್ನು ಹಾಕಿತ್ತಾರೆ. ಔಷಧ ಕಿವಿಯ ಒಳಗೆ ಹೋದ ಬೆನ್ನಲ್ಲಿಯೇ ಜೀವಂತ ಜೇಡ ಕಿವಿಯಿಂದ ಹೊರಬರುತ್ತದೆ. ಇದು ವಿಡಿಯೋದಲ್ಲಿರವವರಿಗೆ ಮಾತ್ರವಲ್ಲ, ನೋಡಿದ ವ್ಯಕ್ತಿಗಳಿಗೂ ಅಚ್ಚರಿ ಹುಟ್ಟಿಸಿದೆ.

ಈ ವಿಡಿಯೋ ನೋಡಿ, ಅಚ್ಚರಿಗೊಂಡ ನೆಟ್ಟಿಗರೆಲ್ಲರೂ ಬಗೆ ಬಗೆಯಾಗಿ ಕಮೆಂಟಿಸುತ್ತಿದ್ದಾರೆ. ಒಬ್ಬರು ರಾತ್ರಿಯ ವೇಳೆ ನನ್ನ ಕಿವಿ ತುರಿಸಲು ಆರಂಭಿಸಿದೆ, ಬಹುಶಃ ನನ್ನ ಕಿವಿಯ ಒಳಗೂ ಯಾಕೋ ಜೇಡ ಸೇರಿಸಿಕೊಂಡಿರಬಹುದು ಎಂದು ನನಗನಿಸುತ್ತದೆ’ ಎಂಬುದಾಗಿ ಬರೆದಿದ್ದಾಳೆ. ಇನ್ನೊಬ್ಬರು ಕೆಲವು ವರ್ಷಗಳ ಹಿಂದೆ, ನನ್ನ ಕಿವಿಯಲ್ಲಿ ಕೂಡ ಹೀಗೆ ಹುಳ ಹೊಕ್ಕಿತ್ತು. ಆಗ ನಾನು ಬಿಸಿಲಲ್ಲಿ ನಿಂತುಕೊಂಡು ಅದನ್ನು ಹೊರಹಾಕಿದ್ದೆ’ ಎಂದು ಬರೆದುಕೊಂಡಿದ್ದಾರೆ. ವೈದ್ಯರೊಬ್ಬರು ಕಮೆಂಟ್ ಮಾಡಿ ಸರಿಯಾಗಿ ‘ಇಂಥದ್ದೇ ಘಟನೆ ಇಂದು ನನಗೆ ಎದುರಾಯ್ತು. ರೋಗಿಯೊಬ್ಬಳು ನನ್ನ ಕಿವಿಯಲ್ಲಿ ಏನೋ ಇದೆ ಎಂದು ನನ್ನ ಬಳಿ ಬಂದಿದ್ದ. ನಾನು ಒಟೋಸ್ಕೋಪ್‌ಅನ್ನು ಆಕೆಯ ಕಿವಿಯ ಒಳಗೆ ಹಾಕಿದ್ದೇ, ಅದಲ್ಲಿನ ಹುಳ ನೋಡಿ ಆಕೆ ಓಡಿಹೋದಳು ಎಂದು ಬರೆದಿದ್ದಾರೆ.

ಈ ವಿಡಿಯೋ ಎಲ್ಲಿಯದ್ದು, ಯಾವಾಗ ಆಗಿದ್ದು, ಯಾರು ಮಾಡಿದ್ದು, ಜೇಡ ಹೊಕ್ಕಿದ ವ್ಯಕ್ತಿ ಯಾರು ಎಂಬುದಾಗಿ ಯಾವುದೇ ಮಾಹಿತಿ ಇಲ್ಲ. ಟ್ವಿಟರ್ ನಲ್ಲೂ ಇದರ ಬಗ್ಗೆ ಏನೂ ಮಾಹಿತಿ ಹಂಚಿಕೊಂಡಿಲ್ಲ. ಆಡ್ಲಿ ಟೆರಿಫಯಿಂಗ್‌ ಖಾತೆ (Oddly Terrifying) ಈ ವಿಡಿಯೋವನ್ನು ಹಂಚಿಕೊಂಡ ಬಳಿಕ, 57 ಲಕ್ಷಕ್ಕೂ ಹೆಚ್ಚು ಮಂದಿ ಇದನ್ನು ವೀಕ್ಷಣೆ ಮಾಡಿದ್ದಾರೆ. ಸಾಕಷ್ಟು ಲೈಕ್‌ ಹಾಗೂ ಕಾಮೆಂಟ್‌ಗಳೂ ಬಂದಿವೆ.

https://twitter.com/OTerrifying/status/1631178892718510080?t=SuautArhFMOteU-5EBvl4w&s=08