Kitchen Tips: ಈ ಟ್ರಿಕ್ಸ್ ಟ್ರೈ ಮಾಡಿ, ಗ್ಯಾಸ್ ಉಳಿತಾಯ ಮಾಡಿ!

Kitchen tips :ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ದಿನಬಳಕೆ ವಸ್ತುಗಳ ಬೆಲೆಯು ಹೆಚ್ಚಾಗುತ್ತಲೇ ಇದೆ. ಕಳೆದ ಬಾರಿಯಷ್ಟೇ ಗ್ಯಾಸ್ ಸಿಲಿಂಡರ್ ಬೆಲೆ(Gas cylinder price) ಏರಿಕೆಯಾಗಿದೆ. ಇದರಿಂದ ಜನ ಸಾಮಾನ್ಯರು ರೋಸಿ ಹೋಗಿದ್ದಾರೆ. ಆದರೆ ಇದಕ್ಕೆ ಚಿಂತಿಸುವ ಅಗತ್ಯವಿಲ್ಲ, ನೀವು ಈ ಟ್ರಿಕ್ಸ್ ಫಾಲೋ ಮಾಡಿ(kitchen tips), ಆಮೆಲೆ ನೋಡಿ ಗ್ಯಾಸ್ ಬೇಗ ಖಾಲಿಯಾಗೋದೇ ಇಲ್ಲ. ಹಾಗಾದ್ರೆ ಗ್ಯಾಸ್(gas) ಉಳಿತಾಯ ಮಾಡೋದು ಹೇಗೆ? ಇಲ್ಲಿದೆ ನೋಡಿ ಸಲಹೆ(tips).

ಲೀಕೇಜ್ ಚೆಕ್ ಮಾಡಿ : ಕೆಲವೊಮ್ಮೆ ನಿಮಗೆ ತಿಳಿದಿರುವುದಿಲ್ಲ ಗ್ಯಾಸ್ ಪೈಪ್, ಬರ್ನರ್, ರೆಗ್ಯುಲೇಟರ್ ಇವುಗಳಲ್ಲಿ ಸಣ್ಣ ಪ್ರಮಾಣದಲ್ಲಿ ಲೀಕೇಜ್ ಆಗುತ್ತಿರುತ್ತದೆ. ಇದನ್ನು ನೀವು ಚೆಕ್ ಮಾಡಬೇಕು. ಗ್ಯಾಸ್ ರಿಪೇರಿ ಮಾಡುವವರ ಬಳಿಯಲ್ಲೇ ತೋರಿಸಿ, ಪೈಪ್‌ನ್ನು ಬದಲಿಸಿಕೊಳ್ಳಿ. ಇಲ್ಲವಾದರೆ ಗ್ಯಾಸ್ ವೇಸ್ಟ್ ಆಗುತ್ತದೆ, ಅಲ್ಲದೆ ಲೀಕೇಜ್ ಆದರೆ ಅಪಾಯ ಹೆಚ್ಚು. ಹಾಗಾಗಿ ಆಗಾಗ ಗ್ಯಾಸ್ ಕಡೆ ಗಮನವಿರಲಿ. ಹಾಗೆಯೇ ಸ್ಟೌವ್ ಬರ್ನರ್ ಅನ್ನು(Burner) ಯಾವಾಗಲೂ ಸ್ವಚ್ಛವಾಗಿರಿಸಿ.

ಕಡಿಮೆ ಜ್ವಾಲೆ : ಅಡುಗೆ ಮಾಡುವಾಗ ನೆನಪಿನಲ್ಲಿರಬೇಕಾದ ಮುಖ್ಯ ಅಂಶ ಎಂದರೆ ಕಡಿಮೆ ಉರಿಯಲ್ಲಿ ಅಡುಗೆ ಮಾಡುವುದು. ಯಾವುದೇ ಅಡುಗೆಯನ್ನು ಹೆಚ್ಚು ಉರಿಯಲ್ಲಿ ಬೇಯಿಸುವುದರಿಂದ ಆಹಾರ ಪದಾರ್ಥ ಚೆನ್ನಾಗಿ ಬೇಯುವುದಿಲ್ಲ. ಅಲ್ಲದೆ, ಗ್ಯಾಸ್​ ವೇಸ್ಟ್​ ಆಗುತ್ತದೆ. ದ್ರವವು ಕುದಿಯಲು ಪ್ರಾರಂಭಿಸಿದಾಗ, ನಿಮ್ಮ ಸ್ಟೌವ್(stove) ಅನ್ನು ಕಡಿಮೆ ಜ್ವಾಲೆಗೆ ಬದಲಾಯಿಸಿ, ಈ ರೀತಿಯಾಗಿ ಅನಿಲದ ವ್ಯರ್ಥವು ಕಡಿಮೆಯಾಗುತ್ತದೆ. ಹಾಗೂ ಕಡಿಮೆ ಉರಿಯಲ್ಲಿ ಅಡುಗೆ ಮಾಡೋದರಿಂದ ಆಹಾರದ ಪೌಷ್ಠಿಕಾಂಶವನ್ನು ಉಳಿಸಿಕೊಳ್ಳಬಹುದು.

ಕುಕ್ಕರ್ ಬಳಸಿ : ನೀವು ಅನ್ನ ಮಾಡಲು, ತರಕಾರಿ(vegetable) ಬೇಯಿಸಲು, ಚಿಕನ್(chicken) ಬೇಯಿಸಲು ಕುಕ್ಕರ್ (pressure cooker) ಬಳಕೆ ಮಾಡಿ. ಇದರಿಂದ ಸಾಕಷ್ಟು ಸಮಯ ಹಾಗೂ ಗ್ಯಾಸ್ ಉಳಿತಾಯವಾಗುತ್ತದೆ. ಅಡುಗೆ ಕೂಡ ಅತ್ಯಂತ ಪರಿಣಾಮಕಾರಿಯಾಗಿ ಬಹಳ ಬೇಗನೆ ಬೇಯುತ್ತದೆ. ಹೀಗೆ ಮಾಡಿದರೆ ಗ್ಯಾಸ್ ಉಳಿತಾಯ ಮಾಡಬಹುದು, ಹಣವೂ ಉಳಿಸಬಹುದು.

ಪಾತ್ರೆಯನ್ನು ಮುಚ್ಚಿ ಬೇಯಿಸಿ : ಕೆಲವರಿಗೆ ನೆನಪಿರದೆಯೋ, ಅವಸರಕ್ಕೋ ಗ್ಯಾಸ್ ಮೇಲೆ ಅಡುಗೆ ಬೇಯಲು ಇಟ್ಟು, ಅದಕ್ಕೆ ಮುಚ್ಚಳ ಮುಚ್ಚದೇ ತಮ್ಮ ಕೆಲಸದಲ್ಲಿ ತೊಡಗುತ್ತಾರೆ. ಆದರೆ ಹೀಗೆ ಮಾಡಬೇಡಿ. ಸಾಧ್ಯವಾದಾಗಲೆಲ್ಲಾ ಪಾತ್ರೆಗಳನ್ನು ಮುಚ್ಚಿ ಬೇಯಿಸಿ. ತೆರೆದ ಕುಕ್ ವೇರ್ ನಿಂದ(Cookware) ಶಾಖ ಹೆಚ್ಚು ವೇಗವಾಗಿ ಹೊರ ಹೋಗುತ್ತದೆ. ಹಾಗಾಗಿ ಆದಷ್ಟು ಅಡುಗೆ ಮಾಡುವಾಗಲೆಲ್ಲಾ ಪಾತ್ರೆ ಮುಚ್ಚಿ ಬೇಯಿಸಿ, ಇದರಿಂದ ಗ್ಯಾಸ್ ಹೆಚ್ಚು ಉಳಿತಾಯ ಮಾಡಬಹುದು.

ಅಡುಗೆಯಾಗುವ ಮುನ್ನವೇ ಗ್ಯಾಸ್ ಆಫ್ ಮಾಡಿ : ನೀವು ಗ್ಯಾಸ್ ಉಳಿಸಬೇಕೆಂದರೆ ಹೀಗೂ ಮಾಡಬಹುದು. ಹೇಗೆಂದರೆ, ಅಡುಗೆ ಇನ್ನೇನು ಬೇಯುತ್ತಿದೆ ಎನ್ನುವಷ್ಟರಲ್ಲಿ ಗ್ಯಾಸ್ ಆಫ್ ಮಾಡಿ. ಯಾಕೆ ಗೊತ್ತಾ? ನಿಮ್ಮ ಅಡುಗೆ ಪಾತ್ರೆಯಲ್ಲಿ ತರಕಾರಿಗಳು ಬೇಯುತ್ತಿರುವ ಸಂದರ್ಭದಲ್ಲಿ ಪಾತ್ರೆ ತುಂಬಾ ಬಿಸಿ ಇರುತ್ತದೆ. ಮುಟ್ಟಿದರೆ ಕೈ ಸುಡುವಷ್ಟು, ಹಾಗೆಯೇ ಪಾತ್ರೆ ಒಳಗಿನ ಬಿಸಿಯೂ ಅಷ್ಟೇ ಇರುತ್ತದೆ.
ಹಾಗಾಗಿ ನೀವು ಸಂಪೂರ್ಣ ಅಡುಗೆ ಆಗುವವರೆಗೆ ಕಾಯುವ ಅಗತ್ಯವಿಲ್ಲ. ಮೊದಲೇ ಗ್ಯಾಸ್ ಆಫ್ ಮಾಡಬಹುದು. ಇದರಿಂದ ಸಾಕಷ್ಟು ಗ್ಯಾಸ್ ಉಳಿತಾಯವಾಗುತ್ತದೆ.

Leave A Reply

Your email address will not be published.