Electric Gear Bike : ಭಾರತದ ಮೊದಲ ಎಲೆಕ್ಟ್ರಿಕ್‌ ಗೇರ್‌ ಬೈಕ್‌ ಅನಾವರಣ, ಎರಡು ಬಣ್ಣದಲ್ಲಿ ಲಭ್ಯ, ಇದರ ವೈಶಿಷ್ಟ್ಯತೆಗೆ ಮಾರು ಹೋದವರಿಲ್ಲ!

Electric Gear Bike :ಭಾರತದ ಮಾರುಕಟ್ಟೆಯಲ್ಲಿ ನೂತನ ವಾಹನಗಳು ಲಗ್ಗೆ ಇಡುತ್ತಿವೆ. ಕಾರು, ಸ್ಕೂಟರ್ ಗಳು ವಿಭಿನ್ನ ವಿನ್ಯಾಸದೊಂದಿಗೆ ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ. ಇದೀಗ ಈ ವಾಹನಗಳಿಗೆ ಸೆಡ್ಡು ಹೊಡೆಯಲು ಭಾರತದಲ್ಲಿ ಮೊದಲ ಎಲೆಕ್ಟ್ರಿಕ್‌ ಗೇರ್‌ ಬೈಕ್‌  ಅನಾವರಣಲಾಗಿದೆ. ಹೌದು, Matter Motorcycles ಇತ್ತೀಚೆಗೆ ಭಾರತದಲ್ಲಿ ತಮ್ಮ ಮೊದಲ ಎಲೆಕ್ಟ್ರಿಕ್ ಗೇರ್‌ ಮೋಟರ್ ಬೈಕ್ ಏರಾ 5000(electric gear bike area) ಅನ್ನು ಬಿಡುಗಡೆ ಮಾಡಿದೆ. ಅಬ್ಬಾ!! ಇದರ ಬಣ್ಣ, ವೈಶಿಷ್ಟ್ಯತೆಗೆ ನೀವು ಮಾರುಹೋಗೋದು ಖಂಡಿತ!!.

ಏರಾ(aera) 5000 ಇದರ ಆರಂಭಿಕ ಎಕ್ಸ್ ಶೋರೂಂ ಬೆಲೆ 1.44 ಲಕ್ಷ ರೂ. ಆಗಿದ್ದು, ಈ ಮೋಟಾರ್ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಾಗಲಿದೆ. ಕಂಪನಿಯು ಐದು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಆದರೆ, ಸದ್ಯ Aera 5000 ಮತ್ತು Aera 5000+ ಎಂಬ ಎರಡು ಬಣ್ಣಗಳ ಆಯ್ಕೆಯಲ್ಲಿ ಮಾತ್ರವೇ ಗ್ರಾಹಕರಿಗೆ ಲಭ್ಯವಾಗಲಿದ್ದು, ವೈಟ್ ಹೈಲೆಟ್‌ಗಳೊಂದಿಗೆ ರೆಡ್ ಕಲರ್ ಆಯ್ಕೆಯಲ್ಲಿ ಮತ್ತು ನಿಯಾನ್ ಯೆಲ್ಲೋ ಹೈಲೆಟ್‌ಗಳೊಂದಿಗೆ ಗ್ರೇ , ಆಯ್ಕೆಗಳಲ್ಲಿ ಖರೀದಿ ಮಾಡಬಹುದಾಗಿದೆ.

ಮ್ಯಾಟರ್ ಏರಾ 5 kWh ಬ್ಯಾಟರಿ ಪ್ಯಾಕ್‌ನೊಂದಿಗೆ 10 kW ಮೋಟಾರ್‌ ಸೌಲಭ್ಯ ಹೊಂದಿದೆ. ಹಾಗೆಯೇ ಇದು 4 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಪ್ರಮಾಣಿತವಾಗಿ ಪಡೆದಿದೆ. ಏರಾ ಸುಮಾರು 120 ರಿಂದ 150 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ತಿಳಿಸಿದೆ.

ಅಲ್ಲದೆ, ಇದು ಆಂಡ್ರಾಯ್ಡ್ ಆಧಾರಿತ ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ರಿಮೋಟ್ ಲಾಕ್/ ಅನ್‌ಲಾಕ್, ಜಿಯೋಫೆನ್ಸಿಂಗ್ ಮತ್ತು ಲೈವ್ ಲೊಕೇಶನ್ ಟ್ರ್ಯಾಕಿಂಗ್ ಅನ್ನು ಹೊಂದಿದೆ. ಮ್ಯಾಟರ್ ಏರಾ ಎಲೆಕ್ಟ್ರಿಕ್ ಬೈಕ್ ಕೀ ಫೋಬ್ ಮತ್ತು ಕೀಲೆಸ್ ಎಂಟ್ರಿ ಸಿಸ್ಟಂ ಹೊಂದಿದ್ದು, TFT ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಅನ್ನು ಪಡೆದಿದೆ.

ICE ಬೈಕ್‌ಗಳ ಎಂಜಿನ್ ಗಾರ್ಡ್ ಅನ್ನು ಹೋಲುವ ಮೋಟಾರ್ ಗಾರ್ಡ್, ಸ್ಪ್ಲಿಟ್ ಸೀಟ್‌ಗಳು, ಎಲ್‌ಇಡಿ ಟೈಲ್‌ಲೈಟ್ ಮತ್ತು ಪಿಲಿಯನ್ ರೈಡರ್‌ಗಾಗಿ ಸ್ಪ್ಲಿಟ್ ಗ್ರಾಬ್ ರೈಲ್ ಈ ಹೊಸ ಬೈಕ್ ನಲ್ಲಿ ಇದ್ದು, ಹಾರ್ಡ್‌ವೇರ್‌ಗೆ ಸಂಬಂಧಿಸಿದಂತೆ, ಏರಾ 17 ಇಂಚಿನ ಅಲಾಯ್ ವೀಲ್‌ ಹೊಂದಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ ಮತ್ತು ಹಿಂಭಾಗದಲ್ಲಿ ಗ್ಯಾಸ್ ಚಾರ್ಜ್ಡ್ ಶಾಕ್‌ ಸಸ್ಪೆನ್ಷನ್‌ಗಳನ್ನು ಪಡೆದಿದ್ದು, ಡ್ಯುಯಲ್ ಚಾನೆಲ್ ಎಬಿಎಸ್‌ನೊಂದಿಗೆ ಎರಡೂ ತುದಿಗಳಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‌ಗಳಿಂದ ಬ್ರೇಕಿಂಗ್ ಸಿಸ್ಟಮ್ ಅನ್ನು ನೀಡಲಾಗಿದೆ. ಸದ್ಯ ಈ ಬೈಕ್ ಗ್ರಾಹಕರನ್ನು ಆಕರ್ಷಣೆಗೊಳಿಸೋದು ಪಕ್ಕಾ!!.

Leave A Reply

Your email address will not be published.