ವಿದ್ಯಾರ್ಥಿಗಳಿಗೆ ಸಿಗಲಿದೆ ಉಚಿತ ಲ್ಯಾಪ್‌ಟಾಪ್! ಇಲ್ಲಿದೆ ವಿವರ
Free laptop :ಬೆಂಗಳೂರಿನಲ್ಲಿ (bengaluru) ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಒಟ್ಟು 47 ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ (education ) , ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಕ್ಕಾಗಿ ಬೆಂಗಳೂರು ಮಹಾನಗರ ಪಾಲಿಕೆ (BBMP) 2023ನೇ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೃಹತ್ ಕೊಡುಗೆಯನ್ನು ನೀಡಿರುವ ಮೂಲಕ ಸಿಹಿ ಸುದ್ದಿ ನೀಡಿದೆ.
ಈಗಾಗಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) 2023ನೇ ಬಜೆಟ್ ಮಂಡನೆಯಾಗಿದ್ದು, ಈ ಬಹುನಿರೀಕ್ಷಿತ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಬೃಹತ್ ಕೊಡುಗೆಯನ್ನು ನೀಡಿದ್ದು, ಮುಖ್ಯವಾಗಿ ಬಿಬಿಎಂಪಿ ಅಧೀನದಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೈಕಿ ಒಟ್ಟು 10,000 ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಲ್ಯಾಪ್ ಟಾಪ್ (free laptop) ನೀಡಲಾಗುವುದು ಎಂದು ಮಾಹಿತಿ ತಿಳಿಸಲಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಒಟ್ಟು 47 ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಕಾರಣಕ್ಕಾಗಿ 152.61 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದ್ದು,
ಈ ಪೈಕಿ ಅದರಲ್ಲಿ ಸುಮಾರು 25 ಕೋಟಿ ರೂಪಾಯಿ ಅನುದಾನವನ್ನು ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟ್ಯಾಪ್ ನೀಡಲು ಒದಗಿಸುವುದಾಗಿ ಬಿಬಿಎಂಪಿ ಘೋಷಿಸಿದೆ.
ಜೊತೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಗೆಂದು ಹಂಚಿಕೆ ಮಾಡಿರುವ ಒಟ್ಟು 152 ಕೋಟಿ ವೆಚ್ಚದಲ್ಲಿ, ಶಾಲೆಗಳ ನವೀಕರಣ, ಸ್ಮಾರ್ಟ್ ಕ್ಲಾಸ್‌ಗಳ ಸ್ಥಾಪನೆ, ಪಠ್ಯಪುಸ್ತಕ (textbook ) ಖರೀದಿ, ಸಮವಸ್ತ್ರ (uniform ) ಖರೀದಿ ಮತ್ತು ವಿತರಣೆ, ಶೂ ಹಾಗೂ ಸಾಕ್ಸ್, ಎಸ್‌ಎಸ್‌ಎಲ್‌ಸಿ (SSLC )ಮತ್ತು ಪಿಯುಸಿ (PUC )ವಿದ್ಯಾರ್ಥಿಗಳಿಗೆ (student) ವಿದ್ಯಾರ್ಥಿವೇತನ (scholarship ) , ಅಬ್ದುಲ್ ಕಲಾಂ ಹೆಸರಿನಲ್ಲಿ ಕನಸಿನ ಶಾಲೆ,
ಓದುವ ಬೆಳಕು ಎಂಬ ಹೊಸ ಯೋಜನೆಗಳಿಗೆ ಬಳಕೆ ಮಾಡಲು ನಿರ್ಧರಿಸಿದೆ.
ಸದ್ಯ ಬಿಬಿಎಂಪಿ ಅಧೀನದಲ್ಲಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೈಕಿ ಒಟ್ಟು 10,000 ಆರ್ಥಿಕವಾಗಿ ಹಿಂದುಳಿದ ಬಡ ಮಕ್ಕಳಿಗೆ ಲ್ಯಾಪ್‌ಟಾಪ್ ನೀಡಲಾಗುವುದು. ಇದರಿಂದ ಬಡ ಮಕ್ಕಳು ಲ್ಯಾಪ್‌ಟಾಪ್ ಪಡೆದುಕೊಂಡು ಇಂದಿನ ಡಿಜಿಟಲ್ ಶಿಕ್ಷಣವನ್ನು ಪಡೆಯಬಹುದು ಎಂಬ ಉದ್ದೇಶ ಹೊಂದಿದ್ದು, ಈ ಮೇಲಿನ ಕುರಿತು ಮುಂದಿನ ದಿನಗಳಲ್ಲಿ ಬಿಬಿಎಂಪಿ ಮತ್ತೇ ಆದೇಶ ಹೊರಡಿಸಲಿದೆ. ಅದರಲ್ಲಿ ಲ್ಯಾಪ್‌ಟಾಪ್ ಖರೀದಿ, ಟೆಂಡರ್ ಆಹ್ವಾನ, ಲ್ಯಾಪ್‌ಟಾಪ್(laptop ) ಒಮ್ಮೆಲೆ ಉದ್ದೇಶಿತ ಎಲ್ಲ ಮಕ್ಕಳಿಗೆ ವಿತರಿಸಬೇಕೋ ಅಥವಾ ಹಂತ ಹಂತವಾಗಿ ವಿತರಣೆ ಮಾಡಬೇಕೋ ಎಂಬ ಇತ್ಯಾದಿ ಮಾಹಿತಿಯನ್ನು ನೀಡಲಿದೆ ಎಂದು ತಿಳಿಸಲಾಗಿದೆ.