Home Latest Sports News Karnataka WPL 2023: ಮಹಿಳಾ ಪ್ರೀಮಿಯರ್ ಲೀಗ್ 2023 ರ ನಾಯಕಿಯರ ಲಿಸ್ಟ್‌ ಇಲ್ಲಿದೆ!

WPL 2023: ಮಹಿಳಾ ಪ್ರೀಮಿಯರ್ ಲೀಗ್ 2023 ರ ನಾಯಕಿಯರ ಲಿಸ್ಟ್‌ ಇಲ್ಲಿದೆ!

Hindu neighbor gifts plot of land

Hindu neighbour gifts land to Muslim journalist

WPL 2023 : ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (WPL 2023) ಆರಂಭವಾಗಲು ಇನ್ನೂ ಕೇವಲ ಒಂದೇ ದಿನ ಬಾಕಿ ಇರೋದು. ಮಾರ್ಚ್ 4 ರಂದು (ನಾಳೆ) WPL 2023ಯ
ಉದ್ಘಾಟನಾ ಆವೃತಿಯು ಆರಂಭವಾಗಲಿದೆ.

ಮಾರ್ಚ್ 4 ರಂದು ಈ ಮಹತ್ವದ ಟೂರ್ನಿಗೆ ಚಾಲನೆ ಸಿಗಲಿದ್ದು, ಮಾರ್ಚ್ 26 ರವರೆಗೆ ಏರ್ಪಡಿಸಲಾಗಿದೆ. ನಾಳೆ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಗುಜರಾತ್ ಜೈಂಟ್ಸ್ (Gujarat Giants) ಮತ್ತು ಮುಂಬೈ ಇಂಡಿಯನ್ಸ್ (Mumbai Indians) ತಂಡಗಳು ಮುಖಾಮುಖಿಯಾಗಲಿವೆ.

ಐದು ತಂಡಗಳು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಸ್ಪರ್ಧಿಸುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB), ಮುಂಬೈ ಇಂಡಿಯನ್ಸ್, ದೆಹಲಿ ಕ್ಯಾಪಿಟಲ್ಸ್ (Delhi Capitals) ತಂಡಗಳ ಜೊತೆಗೆ ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್(UP warriorz) ಸೇರ್ಪಡೆಯಾಗಿವೆ. ಸದ್ಯ ಮಹಿಳಾ ಪ್ರೀಮಿಯರ್ ಲೀಗ್ 2023 ರ (WPL 2023) ನಾಯಕಿಯರ ಲಿಸ್ಟ್ ಇಲ್ಲಿದೆ.

ಸ್ಮೃತಿ ಮಂಧಾನ (Smriti Mandhana):
ಸ್ಮೃತಿ ಮಂಧಾನ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮಹಿಳಾ ತಂಡದ ನಾಯಕಿಯಾಗಿದ್ದು, WPL ನಲ್ಲಿ ತಮ್ಮ ತಂಡವನ್ನು ಮುನ್ನಡೆಸಲಿದ್ದಾರೆ. ಹಾಗೆಯೇ WPL ನಲ್ಲಿ ಹರ್ಮಪ್ರೀತ್ ಕೌರ್ ಮತ್ತು ಸ್ಮೃತಿ ಮಂಧಾನ ಇಬ್ಬರೂ ಮುಖಾಮುಖಿಯಾಗಿ ಆಡಲಿದ್ದಾರೆ.

ಹರ್ಮನ್‌ಪ್ರೀತ್ (harmanpreet Kaur) : ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಹರ್ಮನ್‌ಪ್ರೀತ್‌ ಕೌರ್ ಮುನ್ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಹರ್ಮನ್‌ಪ್ರೀತ್‌, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 150 ಪಂದ್ಯಗಳನ್ನು ಆಡಿ, ದಾಖಲೆ ಬರೆದಿದ್ದಾರೆ.

ಬೆತ್ ಮೂನಿ (Beth Mooney): ಆಸ್ಟ್ರೇಲಿಯನ್ ಬ್ಯಾಟರ್ ಬೆತ್ ಮೂನಿ WPL 2023 ರಲ್ಲಿ ತನ್ನ ಫ್ರಾಂಚೈಸಿ ತಂಡದ ನಾಯಕಿಯಾಗಲಿದ್ದಾರೆ. ಇವರು ಮಹಿಳಾ ಟ್ವೆಂಟಿ 20 ಇಂಟರ್ನ್ಯಾಷನಲ್ (WT20I) ಕ್ರಿಕೆಟ್‌ನಲ್ಲಿ ವಿಶ್ವದ ನಂಬರ್ ಒನ್ ಬ್ಯಾಟರ್ ಆಗಿದ್ದಾರೆ.

ಅಲಿಸ್ಸಾ ಹೀಲಿ (Alyssa Healy): ಆಸ್ಟ್ರೆಲಿಯಾದ ಸ್ಟಾರ್ ಆಟಗಾರ್ತಿ ಅಲಿಸ್ಸಾ ಹೀಲಿ, WPL 2023 ರಲ್ಲಿ UP ವಾರಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಸ್ತುತ, ODIನಲ್ಲಿ ನಂ.1 ಬ್ಯಾಟರ್ ಆಗಿದ್ದು, ಅಕ್ಟೋಬರ್ 2019 ರಂದು ಶ್ರೀಲಂಕಾ ವಿರುದ್ಧ ಉತ್ತರ ಸಿಡ್ನಿ ಓವಲ್‌ನಲ್ಲಿ 148* (61) ರನ್‌ಗಳೊಂದಿಗೆ ಮಹಿಳಾ T20 ಇಂಟರ್‌ನ್ಯಾಶನಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆಯನ್ನು ಬರೆದಿದ್ದಾರೆ.

ಮೆಗ್ ಲ್ಯಾನಿಂಗ್ (Meg Lanning) : ಆಸ್ಟ್ರೇಲಿಯಾದ ಸ್ಟಾರ್ ಆಟಗಾರ್ತಿ ಮೆಗ್ ಲ್ಯಾನಿಂಗ್ WPL ನಲ್ಲಿ ತನ್ನ ತಂಡ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಮುನ್ನಡೆಸಲಿದ್ದಾರೆ. ಎಲ್ಲಾ ಮಹಿಳಾ ಆಟಗಾರ್ತಿಯರು ತಮ್ಮ ತಂಡವನ್ನು ಉತ್ತುಂಗಕ್ಕೆ ಕೊಂಡೊಯ್ಯಲು ಸಜ್ಜಾಗಿದ್ದಾರೆ.