sleep problem: ದಿನದ 22 ಗಂಟೆಯೂ ನಿದ್ರಿಸುವ ಈಕೆ, ಒಮ್ಮೊಮ್ಮೆ 4 ದಿನ ಆದ್ರೂ ಎಚ್ಚರ ಆಗಲ್ವಂತೆ! ಯಾರೀ ‘ಸ್ಲೀಪಿಂಗ್ ಬ್ಯೂಟಿ’?
Sleeping Beauty :ಮನುಷ್ಯನ ದೇಹಕ್ಕೆ ಎದುರಾಗುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಿದ್ರಾಹೀನತೆಯೇ ಪ್ರಮುಖ ಕಾರಣವೆಂದೂ ಹೇಳಲಾಗುತ್ತದೆ. ಹೀಗಾಗಿ ನಿದ್ರೆ(Sleep) ಎಂಬುದು ಮನುಷ್ಯನ ಆರೋಗ್ಯ(Health)ಕ್ಕೆ ಇರುವ ಪ್ರಮುಖ ಕೀಲಿ ಕೈ ಎಂದೇ ಹೇಳಲಾಗುತ್ತದೆ. ಆದ್ದರಿಂದ ನಾವು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ. ಮನುಷ್ಯನಿಗೆ ಸರಾಸರಿ ಎಂದರೂ 7-8 ಗಂಟೆಗಳ ನಿದ್ರೆ ಬೇಕೇಬೇಕು. ಹೆಚ್ಚಿನವು ಇದನ್ನು ಪಾಲಿಸುತ್ತಾರೆ. ಆದರೆ ದಿನವಿಡೀ ಮಲಗುವುದೆಂದರೆ ಸಾಧ್ಯವಾ ಹೇಳಿ? ಆದ್ರೆ ಇಲ್ಲೊಬ್ಬಳು ಪುಣ್ಯಾತ್ಗಿತ್ತಿ ದಿನದ 22 ಗಂಟೆ ಮಲಗಿರ್ತಾಳಂತೆ! ಒಮ್ಮೊಮ್ಮೆ 4 ದಿನವಾದರೂ ಎಚ್ಚರಗೊಳ್ಳೋದಿಲ್ವಂತೆ! ಯಾರೀಕೆ ಆಧುನಿಕ ಕುಂಬಕರ್ಣೆ?
ಹೌದು, ಇಂಗ್ಲೆಂಡ್‌ನಲ್ಲಿ (England) 38 ವಯಸ್ಸಿನ ಜೊವಾನ್ನಾ ಕಾಕ್ಸ್(Jovanna Cockes) ಎಂಬ ಮಹಿಳೆಯೊಬ್ಫರು ‘ಸ್ಲೀಪಿಂಗ್ ಬ್ಯೂಟಿʼ (Sleeping Beauty) ಎಂದೇ ಹೆಸರಾಗಿದ್ದಾಳೆ. ಯಾಕಂದ್ರೆ ಈಕೆ ದಿನ 24 ಗಂಟೆಯಲ್ಲಿ 22 ಗಂಟೆಗಳ ಕಾಲ ನಿದ್ರೆ ಮಾಡುತ್ತಾಳಂತೆ! ಕೆಲವೊಮ್ಮೆ 4 ದಿನವಾದ್ರೂ ಈಕೆಗೆ ಎಚ್ಚರ ಆಗಲ್ವಂತೆ! ಇಷ್ಟೊಂದು ಧೀರ್ಘ ಸಮಯ ನಿದ್ರೆ ಮಾಡುವ ಸಾಮರ್ಥ್ಯ ಹೊಂದಿರುವ ಈ ಮಹಿಳೆಗೆ ಒಂದು ವಿಶೇಷ ಕಾಯಿಲೆಯಿದ್ದು, ಅದುವೆ ಇವಳು ನಿತ್ಯ ಹೀಗೆ 22 ಗಂಟೆಗಳ ಕಾಲ ನಿದ್ರೆ ಮಾಡುವುದಕ್ಕೆ ಮುಖ್ಯ ಕಾರಣವಂತೆ. ಆ ಕಾಯಿಲೆ (sleep problem) ಯಾವುದು ಗೊತ್ತಾ?
ಈ ಜೊವಾನ್ನಾ ಕಾಕ್ಸ್, ಇಂಗ್ಲೆಂಡ್‌ನ ವೆಸ್ಟ್ ಕ್ಯಾಸಲ್‌ಫೋರ್ಡ್( West Casel Pord)ನಲ್ಲಿ ವಾಸವಾಗಿದ್ದಾರೆ. ಈಕೆಗಿರುವ ಕಾಯಿಲೆ ಹೆಸರು ʼಇಡಿಯೋಪಥಿಕ್ ಹೈಪರ್ಸೋಮ್ನಿಯಾʼ(Idiyopathik Hyparsomniya) ಅಂತಾ. ಇದರಿಂದ ಜನರಿಗೆ ಹಗಲಿನಲ್ಲೂ ನಿದ್ರೆಯ ತೀವ್ರತೆ ಹೆಚ್ಚಾಗಿರುತ್ತದೆ. ಆಗಾಗ್ಗೆ ಎಚ್ಚರಗೊಳ್ಳಲು ಹೆಣಗಾಡುತ್ತಾರೆ. ಬಲವಾದ ನಿದ್ರೆಯು ಕಾಡುತ್ತದೆ. 2021 ರಲ್ಲಿ ಜೊವಾನ್ನಾಗೆ ಈ ಕಾಯಿಲೆ ಇರುವುದು ಗೊತ್ತಾಗಿದೆ. ಅಂದಿನಿಂದಲೂ ಈ ನಿದ್ರಾ ದೇವಿಯ ಕೃಪಾ ಕಟಾಕ್ಷ ಈಕೆಗೆ ತುಂಬಾ ಒಲಿದಿದೆ.
ಈ ಕುರಿತು ಮಾತನಾಡಿದ ಕಾಕ್ಸ್ ‘ ನಾನು ಒಮ್ಮೆ ಮಲಗಿದ ಮೇಲೆ ಯಾರಿಂದಲೂ ನನ್ನನ್ನು ಎಬ್ಬಿಸಲು ಸಾಧ್ಯವಿಲ್ಲ. ನಾನು ಎಚ್ಚರಗೊಂಡಾಗ ಎಷ್ಟು ಸಮಯ ನಿದ್ರೆ ಮಾಡಿದೆ ಎಂಬುದೇ ತಿಳಿಯುವುದಿಲ್ಲ. ಒಮ್ಮೊಮ್ಮೆ ನಾನು ಎಚ್ಚರಗೊಳ್ಳದೇ ಸತತ ನಾಲ್ಕು ದಿನವಾದ ಬಳಿಕ. ಆ 4 ದಿನ ಏನಾಗುತ್ತೆ ಅನ್ನೋ ಪರಿವೆ ನನಗಿರದು. ಪ್ರೊಟೀನ್(Protein) ಶೇಕ್‌ಗಳು ಮತ್ತು ಪೋಷಕಾಂಶಯುಕ್ತ ಊಟದಿಂದ ನಾನು ಬದುಕುಳಿದಿದ್ದಾರೆ. ಏಕೆಂದರೆ ಹೆಚ್ಚಿನ ಸಮಯ ನಿದ್ರೆಯಲ್ಲೇ ಇದ್ದಾಗ ದೇಹಕ್ಕೆ ಅಗತ್ಯ ಪೋಷಕಾಂಶದ ಕೊರತೆ ಹೆಚ್ಚು ಬಾಧಿಸುತ್ತದೆ. ಒಟ್ಟಿನಲ್ಲಿ ಇದು ನನ್ನ ಜೀವನವನ್ನೇ ಹಾಳು ಮಾಡುತ್ತಿದೆ’ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.