ಮಾರ್ಚ್ 8ರ ಮಹಿಳಾ ದಿನಾಚರಣೆಗೆ ಗಿ‍ಫ್ಟ್ ನೀಡಲು ಅತ್ಯುತ್ತಮ ಸ್ಮಾರ್ಟ್‍ಫೋನ್‍ಗಳು!!!

Smartphone :ಇನ್ನು ಕೆಲವೇ ದಿನಗಳಲ್ಲಿ ಮಾರ್ಚ್ 8ರಂದು ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಹಿಳಾ(women’s day )ದಿನಾಚರಣೆಯ ಪ್ರಯುಕ್ತ ನಿಮ್ಮ ಜೀವನದಲ್ಲಿ ಅಮ್ಮ, ಅಕ್ಕ, ತಂಗಿ, ಶಿಕ್ಷಕಿ ಮುಂತಾದವರಿಗೆ ಪ್ರೀತಿ ಪೂರ್ವಕವಾಗಿ ಸ್ಮಾರ್ಟ್ ಫೋನ್ (smartphone ) ಉಡುಗೊರೆ (gift )ನೀಡಲು ಬಯಸಿದಲ್ಲಿ ನಿಮಗಾಗಿ ಉತ್ತಮ ಸ್ಮಾರ್ಟ್ ಫೋನ್ ಗಳನ್ನು ಇಲ್ಲಿ ಪರಿಚಯಿಸಿ ಕೊಡಲಾಗಿದೆ.

ಹೌದು ಹೆಣ್ಣು ಇಲ್ಲದೆ ಜೀವನ ಸಂಪೂರ್ಣ ಆಗಲು ಸಾಧ್ಯವಿಲ್ಲ ಆದ್ದರಿಂದ ಸಮಸ್ತ ಮಹಿಳೆಯರಿಗೆ ಪ್ರತ್ಯೇಕ ಗೌರವವನ್ನು ಪ್ರತೀ ವರ್ಷ ಮಾರ್ಚ್ 8(March 8)ರಂದು ಸೂಚಿಸುವುದರ ಜೊತೆಗೆ ಅವರನ್ನು ಸಂತೋಷ ಗೊಳಿಸಲು ಈ ಕೆಳಗಿನ ಸ್ಮಾರ್ಟ್ ಫೋನ್ (Smartphone) ಗಳನ್ನು ನೀವು ನೀಡಬಹುದು. ಅವುಗಳು ಯಾವುದೆಂದು ಈ ಕೆಳಗೆ ತಿಳಿಯಿರಿ.

Samsung Galaxy S23 Ultra:
ಸ್ಯಾಮ್ಸಂಗ್‌ ಗ್ಯಾಲಕ್ಸಿ S23 ಭಾರತದಲ್ಲಿ ಬಿಡುಗಡೆಯಾದ ಪ್ರಸಿದ್ಧ ಫೋನ್‌ ಆಗಿದೆ. ಸ್ಯಾಮ್ಸಂಗ್‌ ಗ್ಯಾಲಕ್ಸಿ S23 Android v13 ಅಪರೇಟಿಂಗ್ ಸಿಸ್ಟಮ್‌ ಹೊಂದಿದೆ. ಹೊಸ Samsung Galaxy S23 Ultra ಬೆಸ್ಟ್ ಸ್ಮಾರ್ಟ್‌ಫೋನ್ ಆಗಿದ್ದು ಇದು 200MPಯ ಉತ್ತಮ ಕ್ಯಾಮೆರಾ ಹೊಂದಿದ್ದು, 6.8-ಇಂಚಿನ ಕ್ವಾಡ್ HD+ ಡೈನಾಮಿಕ್ AMOLED 2X ಡಿಸ್ಪ್ಲೇ ಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಅತ್ಯಧಿಕ ರೆಕಾರ್ಡಿಂಗ್ (record )ರೆಸಲ್ಯೂಶನ್ ಒಳಗೊಂಡಿದೆ. ಇದರಲ್ಲಿ Accelerometer, Barometer, Gyro Sensor, Geomagnetic Sensor, Hall Sensor, Light Sensor, Proximity Sensor ಸೆನ್ಸರ್‌ ಸಹ ಲಭ್ಯವಿದೆ. ಜೊತೆಗೆ ಬ್ಲೂಟೂತ್‌ (Bluetooth )ಹಾಗೂ ಜಿಪಿಎಸ್‌(GPS), ವೈಫೈ Volte ಇತ್ಯಾದಿ ಫೀಚರ್ಸ್‌ ಹೊಂದಿದೆ.

Apple iPhone 14 Pro Max:
iPhone 14 Pro Max ಹೊಸ 48MP ಪ್ರಾಥಮಿಕ ಸೆನ್ಸಾರ್‍ನೊಂದಿಗೆ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.ಇದು ಐಫೋನ್ 14 ಪ್ರೊ ಮ್ಯಾಕ್ಸ್ 6.7-ಇಂಚಿನ ಸೂಪರ್ ರೆಟಿನಾ ಎಕ್ಸ್‌ಡಿಆರ್ ಡಿಸ್ಪ್ಲೇಯಲ್ಲಿ ಹೊಸ ‘ಡೈನಾಮಿಕ್ ಐಲ್ಯಾಂಡ್’ ನಾಚ್ ಹೊಂದಿದೆ. ಇದು 1TB ವರೆಗಿನ ಸ್ಟೋರೇಜ್‍ನೊಂದಿಗೆ ಹೊಸ A16 ಬಯೋನಿಕ್‌ ಚಿಪ್‍ನಿಂದ ಕಾರ್ಯನಿರ್ವಹಿಸುತ್ತದೆ. ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್‌ ಆರು-ಕೋರ್ CPU ಹೊಂದಿದ್ದು. ಅಧಿಕ ಕಾರ್ಯಕ್ಷಮತೆಯ ಕೋರ್‌ ಒಳಗೊಂಡಿದೆ. ಇನ್ನು ಹೊಸ A16 ಚಿಪ್‌ಗಳು ಡೈನಾಮಿಕ್ ಐಲ್ಯಾಂಡ್ ಫೀಚರ್‌ ನಲ್ಲಿ ಕಂಡುಬರುವ ಮೃದುವಾದ ಅನಿಮೇಷನ್‌ಗಳಿಗೆ ಶಕ್ತಿ ತುಂಬಲು ಸಹಾಯ ಮಾಡುತ್ತದೆ.

Google Pixel 7 Pro:
ಗೂಗಲ್ ಪಿಕ್ಸೆಲ್ 7 ಪ್ರೊ ಈ ಬಾರಿ ಉತ್ತಮ ವಿನ್ಯಾಸದೊಂದಿಗೆ ಬಂದಿದೆ. ಫೋನ್ ಟೆನ್ಸರ್ ಜಿ2 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ, 48MP ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾವೈಡ್ ಕ್ಯಾಮೆರಾದೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಕ್ಯಾಮರಾ ವ್ಯವಸ್ಥೆಯು Googleನ AI ಪ್ರಕ್ರಿಯೆ ವ್ಯವಸ್ಥೆಯಿಂದ ಚಾಲಿತವಾಗಿದೆ.
ಡ್ಯುಯಲ್-ಸಿಮ್ (ನ್ಯಾನೋ + eSIM) ಸಾಮರ್ಥ್ಯದ ಈ ಗೂಗಲ್ ಪಿಕ್ಸೆಲ್ 7 ಪ್ರೊ ಫೋನ್ ಫೋನ್ ಆಂಡ್ರಾಯ್ಡ್ 13 ಔಟ್-ಆಫ್-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Xiaomi 12 Pro:
ಇದು ಡ್ಯುಯಲ್-ಸಿಮ್ (ನ್ಯಾನೊ) ಸಾಮರ್ಥ್ಯದ Xiaomi 12 Pro ಸ್ಮಾರ್ಟ್‌ಫೋನ್ MIUI 13 ಜೊತೆಗೆ ಆಂಡ್ರಾಯ್ಡ್ 12 ನಲ್ಲಿ ಕೆಲಸ ಮಾಡಲಿದೆ ಡೈನಾಮಿಕ್ ರಿಫ್ರೆಶ್ ರೇಟ್ ನೀಡಲು ಎರಡನೇ ತಲೆಮಾರಿನ LTPO ತಂತ್ರಜ್ಞಾನವನ್ನು ಆಧರಿಸಿದ 6.72-ಇಂಚಿನ WQHD+ (1,440×3,200 ಪಿಕ್ಸೆಲ್‌ಗಳು) E5 AMOLED ಡಿಸ್‌ಪ್ಲೇಯನ್ನು ಹೊಂದಿರುವ ಈ Xiaomi 12 Pro ಸ್ಮಾರ್ಟ್‌ಫೋನ್, 120Hz ರಿಪ್ರೆಶ್ ರೇಟ್, 1,500 nits ವರೆಗಿನ ಗರಿಷ್ಠ ಹೊಳಪು ಮತ್ತು Dolby Vision ಮತ್ತು HDR10+ ಗೆ ಬೆಂಬಲ ಒಳಗೊಂಡಿದೆ ಮತ್ತು ಈ ಸ್ಮಾರ್ಟ್‌ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ ಸುರಕ್ಷತೆಹೊಂದಿದೆ. Xiaomi 12 Pro 5G ಸ್ನಾಪ್‌ಡ್ರಾಗನ್ 8 Gen 1 ಚಿಪ್‌ಸೆಟ್ ಹೊಂದಿದೆ. 50W ವೈರ್‌ಲೆಸ್ ಟರ್ಬೊ ಚಾರ್ಜಿಂಗ್ ಬೆಂಬಲ ಇದೆ.

Samsung Galaxy Z ಫೋಲ್ಡ್ 4:
ಇದು ಡ್ಯುಯಲ್-ಸಿಮ್ (ನ್ಯಾನೊ) Samsung Galaxy Z Fold 4 ಸ್ಮಾರ್ಟ್‌ಫೋನ್ Android 12L ಆಧಾರಿತ One UI 4.1.1 ನಲ್ಲಿ ಕಾರ್ಯನಿರ್ವಹಿಸುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ. Samsung Galaxy Z Fold 4 ಫೋಲ್ಡಬಲ್ ಸ್ಮಾರ್ಟ್‌ಫೋನ್ ಆಗಿದ್ದು, ಇದು 8K ರೆಕಾರ್ಡ್ ಮಾಡುವ ಸಾಮರ್ಥ್ಯ ಹೊಂದಿರುವ ಉತ್ತಮ ಕ್ಯಾಮೆರಾಹೊಂದಿದೆ. ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಅತ್ಯಧಿಕ ರೆಕಾರ್ಡಿಂಗ್ ರೆಸಲ್ಯೂಶನ್ ಒಳಗೊಂಡಿದ್ದು Galaxy Z Fold 4 ಸಹ 45W ವೇಗದ ಚಾರ್ಜಿಂಗ್ ಸಾಮರ್ಥ್ಯದೊಂದಿಗೆ ಇಡೀ ದಿನದ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಈ ಮೇಲಿನ ಸ್ಮಾರ್ಟ್ ಫೋನ್ ಗಳು ಉತ್ತಮ ಫೀಚರ್ಸ್ ಒಳಗೊಂಡಿದ್ದು ಉಡುಗೊರೆಯಾಗಿ ನೀಡಲು ಬೆಸ್ಟ್ ಫೋನ್ ಗಳಾಗಿವೆ. ಇನ್ನೇಕೆ ತಡ ಈಗಲೇ ನಿಮ್ಮವರಿಗಾಗಿ ಕೊಂಡುಕೊಳ್ಳಿ.

Leave A Reply

Your email address will not be published.