Umesh Yadav :ಗಾಳಿಯಲ್ಲೇ ಹಾರಿತು ಸ್ಟಂಪ್‌! ವಿಶೇಷ ಸಾಧನೆ ಮಾಡಿದ ಉಮೇಶ್‌ ಯಾದವ್‌!

Umesh Yadav : ಕ್ರಿಕೆಟ್ ಇತಿಹಾಸದಲ್ಲಿ ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಹೊಸ ದಾಖಲೆ ಬರೆದಿದ್ದಾರೆ.ಭಾರತದ ಟೆಸ್ಟ್ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ (INDvsAUS) ಮೂರನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೊಹಮ್ಮದ್ ಶಮಿ ಬದಲಿಗೆ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಆಡಲು ದೊರೆತ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಉಮೇಶ್ ಯಾದವ್ ಬ್ಯಾಟಿಂಗ್ ಮೂಲಕ ಕ್ರೀಡಾಂಗಣದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಅಭಿಮಾನಿಗಳಿಗೆ ಫುಲ್ ಖುಷ್ ಆಗುವಂತೆ ಮಾಡಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಜಿದ್ದಾ ಜಿದ್ದಿಯ ತೃತೀಯ ಟೆಸ್ಟ್ ಪಂದ್ಯ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 1 ರಿಂದ ಮಾರ್ಚ್ 5 ರವರೆಗೆ ನಡೆಯುತ್ತಿರುವುದು ಗೊತ್ತಿರುವ ವಿಚಾರವೇ. ಬಾರ್ಡರ್-ಗವಾಸ್ಕರ್ ಟ್ರೋಫಿ( Border Gavaskar Trophy)ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೇವಲ 5 ಓವರ್ ಗಳಲ್ಲಿ ಬೌಲ್ ಮಾಡಿದ ಉಮೇಶ್ ಯಾದವ್ ಕೇವಲ 12 ರನ್ ನೀಡಿ ಮೂರು ವಿಕೆಟ್ ಗಳಿಸಿದ್ದಾರೆ. ತವರು ನೆಲದಲ್ಲಿ 100 ವಿಕೆಟ್ (Umesh Yadav) ಪಡೆದ ಐದನೇ ಆಟಗಾರರಾಗಿ ಹೊರ ಹೊಮ್ಮಿದ್ದಾರೆ.

ಟೆಸ್ಟ್ ಕ್ರಿಕೆಟ್ ಎಂಬ ಮಾಂತ್ರಿಕ ಲೋಕಕ್ಕೆ 2011ರಲ್ಲಿ ಗ್ರಾಂಡ್ ಎಂಟ್ರಿ ಕೊಟ್ಟ ಉಮೇಶ್ ಯಾದವ್ ಈವರೆಗೆ 55 ಟೆಸ್ಟ್ ಪಂದ್ಯಗಳನ್ನು ಆಡಿ ಒಟ್ಟು 168 ಟೆಸ್ಟ್ ವಿಕೆಟ್ಗಳನ್ನು ಗಳಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಪ್ರಸಕ್ತ ಟೆಸ್ಟ್ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಉಮೇಶ್ ಯಾದವ್ ಅವರಿಗೆ ಅವಕಾಶ ಲಭ್ಯವಾಗಿರಲಿಲ್ಲ. ಆದರೆ, ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅವರಿಗೆ ಬ್ರೇಕ್ ನೀಡಿ ಉಮೇಶ್ ಯಾದವ್ ಅವರಿಗೆ ಚಾನ್ಸ್ ನೀಡಿದ್ದು, ಸಿಕ್ಕ ಅವಕಾಶವನ್ನು ತನ್ನ ದಾಖಲೆಯ ಲಿಸ್ಟ್ ಗೆ ಸೇರ್ಪಡೆ ಮಾಡಿಕೊಳ್ಳುವಲ್ಲಿ ಉಮೇಶ್ ಯಶಸ್ವಿಯಾಗಿದ್ದಾರೆ.

ಗುರುವಾರ ಪ್ರಥಮ ಇನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ ಅವರನ್ನು ಉಮೇಶ್ ಯಾದವ್ ಕ್ಲೀನ್ ಬೌಲ್ಡ್ ಮಾಡಿದ ಶೈಲಿಯಂತು ಬಣ್ಣಿಸಲು ಅಸಾದ್ಯ. ಉಮೇಶ್ ಯಾದವ್ ಎಸೆತದಲ್ಲಿ ಚೆಂಡು ಆಫ್ ಸ್ಟಂಪ್ಗೆ ಅಪ್ಪಳಿಸಿದ್ದು ಅಲ್ಲದೇ, ಈ ಸಂದರ್ಭದಲ್ಲಿ ಆಫ್ ಸ್ಟಂಪ್ ಮಿಂಚಿನ ವೇಗದಲ್ಲಿ ಗಾಳಿಯಲ್ಲಿ ಹಾರಿದ್ದು, ಮಿಚೆಲ್ ಸ್ಟಾರ್ಕ್ ಚೆಂಡನ್ನು ತಡೆಯಲು ಶತಾಯಗತಾಯ ಹರಸಾಹಸ ಪಟ್ಟರೂ ಏನು ಪ್ರಯೋಜನವಾಗಿಲ್ಲ. ಅಂದಹಾಗೆ ಕಣ್ಣು ರೆಪ್ಪೆ ಮಿಟುಕಿಸುವಷ್ಟರಲ್ಲಿ ಚೆಂಡು ಅವರ ಬ್ಯಾಟ್ನ ಬದಿಗೆ ಸರಿದು ಗಾಳಿಯಲ್ಲಿ ಹಾರಿಹೋಗಿದ್ದು, ನೋಡುವವರ ಕಣ್ಣಿಗೆ ವೈಭೋಗದ ಉಂಟುಮಾಡುವ ಹಾಗೆ ಈ ದೃಶ್ಯವಿತ್ತು ಎಂದರೂ ತಪ್ಪಾಗಲಾರದು. ಗಂಟೆಗೆ 130.3 ಕಿ.ಮೀ ವೇಗದಲ್ಲಿ ಚೆಂಡು ಸ್ಟಂಪ್ಗೆ ಬಡಿದು ನಂತರ, ಚೆಂಡಿನ ವೇಗಕ್ಕೆ ಗಾಳಿಯಲ್ಲಿ ಸ್ಟಂಪ್ ತಿರುಗಿದ್ದು ವಿಶೇಷವಾಗಿತ್ತು. ಈ ವಿಕೆಟ್ ಉಮೇಶ್ ಯಾದವ್ (Umesh Yadav completes 100 wickets at home) ಅವರ 100ನೇ ಭಾರತದಲ್ಲಿನ 100ನೇ ಟೆಸ್ಟ್ ವಿಕೆಟ್ ಆಗಿ ದಾಖಲೆ ಬರೆದಿದೆ.

ಪಂದ್ಯದ ಎರಡನೇ ದಿನವಾದ ಗುರುವಾರ ಆಸ್ಟ್ರೇಲಿಯಾ ತಂಡ ಮೊದಲ ಸೆಷನ್ ನಲ್ಲಿ 4 ವಿಕೆಟ್ ಕಳೆದುಕೊಂಡು 156 ರನ್ಗಳಿಂದ ಪ್ರಥಮ ಇನಿಂಗ್ಸ್ ಪಡೆದು ಪಂದ್ಯದ ಅಂತ್ಯಕ್ಕೆ 197 ರನ್ಗಳಿಗೆ ಆಲ್ ಔಟ್ ಆಗಿದೆ. ಭಾರತದ ಬೌಲರ್ಗಳ ಪೈಕಿ ರವೀಂದ್ರ ಜಡೇಜಾ ಬುಧವಾರ 4 ವಿಕೆಟ್ ಪಡೆದರೆ, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (44ಕ್ಕೆ 3) ಹಾಗೂ ಉಮೇಶ್ ಯಾದವ್ ಜೊತೆಗೂಡಿ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳ ಬೆವರಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎರಡನೇ ದಿನವಾದ ಗುರುವಾರ ಮೂರು ವಿಕೆಟ್ಗಳನ್ನು ಪಡೆಯುವ ಮೂಲಕ ಎದುರಾಳಿ ತಂಡ ಆಸ್ಟ್ರೇಲಿಯಾಗೆ ನಡುಕ ಹುಟ್ಟಿಸುವ ಮೂಲಕ ಭಾರತದಲ್ಲಿ ಉಮೇಶ್ ಯಾದವ್ 100 ಟೆಸ್ಟ್ ವಿಕೆಟ್ಗಳನ್ನು ಪೂರ್ಣಗೊಳಿಸಿ, ವಿಶೇಷವಾಗಿ ಭಾರತದ ನೆಲದಲ್ಲಿ ಉಮೇಶ್ ಯಾದವ್ 100 ಟೆಸ್ಟ್ ವಿಕೆಟ್ ಪಡೆದಿರುವುದು ಗಮನಾರ್ಹ ವಿಷಯವಾಗಿದೆ. ಬುಧವಾರ ಬ್ಯಾಟಿಂಗ್ನಲ್ಲಿ ಉಮೇಶ್ ಯಾದವ್ 13 ಎಸೆತಗಳಲ್ಲಿ ಒಂದು ಬೌಂಡರಿ ಹಾಗೂ ಎರಡು ಸಿಕ್ಸರ್ಗಳ ಮೂಲಕ 17 ರನ್ ಪಡೆದುಕೊಂಡಿದ್ದಾರೆ. ಈ ಪಂದ್ಯದ ಎರಡನೇ ದಿನ 74 ಓವರ್ನಲ್ಲಿ ಆಸ್ಟ್ರೇಲಿಯಾದ ಬ್ಯಾಟರ್ ಮಿಚೆಲ್ ಸ್ಟಾರ್ಕ್ ವಿಕೆಟ್ ಪಡೆಯುವ ಮೂಲಕ ತವರು ನೆಲದಲ್ಲಿ ಅತಿ ವೇಗದಲ್ಲಿ 100 ವಿಕೆಟ್ ಸಾಧನೆ ಮಾಡಿದ ಐದನೇ ವೇಗದ ಬೌಲರ್ ಎಂದೆನಿಸಿಕೊಂಡಿದ್ದಾರೆ. ಈ ನಡುವೆ ಆಸ್ಟ್ರೇಲಿಯಾ ಕೊನೆಯ 6 ವಿಕೆಟ್ಗಳನ್ನು ಕೇವಲ 11 ರನ್ ಅಂತರದಲ್ಲಿ ಕಳೆದುಕೊಂಡಿದೆ.

Leave A Reply

Your email address will not be published.