ರೈಲ್ವೆ ಡಿ ಗ್ರೂಪ್‌ ಹುದ್ದೆಗಳು ಯಾವುದೆಲ್ಲ? ಈ ಹುದ್ದೆಗಳಿಗೆ ಸೆಲೆಕ್ಟ್‌ ಆದರೆ ಸಿಗುವ ವೇತನವೆಷ್ಟು? ಇಲ್ಲಿದೆ ಉತ್ತರ

Railway group D post :ಭಾರತೀಯ ರೈಲ್ವೆ(Indian railway)ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗುತ್ತದೆ. ಆದರೆ ಕೆಲವರಿಗೆ ಈ ಹುದ್ದೆ(job) ಯ ಬಗ್ಗೆ ತಿಳಿದಿರುವುದಿಲ್ಲ. ಭಾರತೀಯ ರೈಲ್ವೆಯಲ್ಲಿ ಗ್ರೂಪ್‌ ಡಿ ಹುದ್ದೆಗಳು(railway group D post) ಇದ್ದು, ಈ ಹುದ್ದೆಯ ವೇತನ ಎಷ್ಟು? ವಿದ್ಯಾರ್ಹತೆ ಏನು? ಹುದ್ದೆಯ ಬಗೆಗಿನ ಮಾಹಿತಿ ಇಲ್ಲಿದೆ.

ರೈಲ್ವೆ ಗ್ರೂಪ್‌ ಡಿ ಹುದ್ದೆಗೆ ಹತ್ತನೇ ತರಗತಿ ಪಾಸ್ ಆದವರೂ ಅರ್ಜಿ(application) ಸಲ್ಲಿಸಬಹುದು. ಈ ಗ್ರೂಪ್ ಡಿ ಹುದ್ದೆಗಳಿಗೆ 7ನೇ ವೇತನ ಆಯೋಗದ ನಂತರ 3 ರಿಂದ 5 ಲಕ್ಷದವರೆಗೆ ವಾರ್ಷಿಕ ಸಂಬಳ ಸಿಗುತ್ತಿದೆ. ಅಲ್ಲದೆ, ಡಿಪ್ಲೊಮ ಇನ್‌ ಇಂಜಿನಿಯರಿಂಗ್ ಅಥವಾ ಬಿಇ ಪಾಸ್‌ ಮಾಡಿದ್ದರೆ, ಆರ್‌ಆರ್‌ಬಿ ಗ್ರೂಪ್‌ ಡಿ ಹುದ್ದೆಗೆ ಸೂಪರ್‌ವೈಸರ್‌ ಲೆವೆಲ್‌ ನಿಂದ ಗ್ರೂಪ್‌ ಬಿ ಹುದ್ದೆಗಳವರೆಗೂ ಪ್ರಮೋಷನ್ ಸಿಗುತ್ತದೆ. ಇನ್ನು ರೈಲ್ವೆಯಲ್ಲಿನ ಗ್ರೂಪ್‌ ಡಿ ಹುದ್ದೆಗಳ (ವಿಭಾಗವಾರು) ಲಿಸ್ಟ್‌ ಇಲ್ಲಿದೆ.

ಹುದ್ದೆಯ ವಿವರ:
ಮೆಕ್ಯಾನಿಕಲ್(mechanical) ವಿಭಾಗ: ಅಸಿಸ್ಟಂಟ್‌ (ವರ್ಕ್‌ಶಾಪ್‌) ,ಅಸಿಸ್ಟಂಟ್ ಲೋಕೋ ಶೆಡ್ (ಡೀಸೆಲ್), ಅಸಿಸ್ಟಂಟ್ ಸಿ ಅಂಡ್ ಡಬ್ಲ್ಯೂ
ಇಲೆಕ್ಟ್ರಿಕಲ್(electrical) ವಿಭಾಗ: ಅಸಿಸ್ಟಂಟ್ ಲೋಕೋ ಶೆಡ್ , ಅಸಿಸ್ಟಂಟ್ ಆಪರೇಷನ್ಸ್‌
ಇಂಜಿನಿಯರಿಂಗ್ ವಿಭಾಗ:‌ ಅಸಿಸ್ಟಂಟ್‌ ಟ್ರ್ಯಾಕ್ ಮಷಿನ್
ಅಸಿಸ್ಟಂಟ್ ಬ್ರಿಡ್ಜ್ , ಟ್ರ್ಯಾಕ್ ಮೇಂಟೆನರ್ ಗ್ರೇಡ್‌ 4
ಟ್ರಾಫಿಕ್ ವಿಭಾಗ: ಅಸಿಸ್ಟಂಟ್ ಪಾಯಿಂಟ್ಸ್‌ಮನ್
ಅಸಿಸ್ಟಂಟ್ ಸಿಗ್ನಲ್ ಮತ್ತು ಟೆಲಿಕಾಂ ವಿಭಾಗ
ಸ್ಟೋರ್ಸ್‌ : ಅಸಿಸ್ಟಂಟ್ ಡಿಪಾಟ್
ಮೆಡಿಕಲ್ ವಿಭಾಗ: ಹಾಸ್ಪಿಟಲ್ ಅಸಿಸ್ಟಂಟ್

ವಿದ್ಯಾರ್ಹತೆ: 10ನೇ ತರಗತಿ, ಡಿಪ್ಲೊಮ(diploma), ಡಿಗ್ರಿ(degree)
ವಾರ್ಷಿಕ ವೇತನ: 5 ಲಕ್ಷ

ವೇತನ ಶ್ರೇಣಿ :
• 7ನೇ ವೇತನ ಆಯೋಗದ ಪ್ರಕಾರ, ರೈಲ್ವೆ ಗ್ರೂಪ್‌ ಡಿ ಪೇ-ಲೆವೆಲ್ 1 ಹುದ್ದೆಗೆ ರೂ.5,200 ರಿಂದ 20,200 ವರೆಗೆ ವೇತನ ಶ್ರೇಣಿ ಇರಲಿದೆ.
• ಬೇಸಿಕ್ ಪೇ ರೂ.18,000, ಗ್ರೇಡ್‌ ಪೇ ರೂ.1800, ತುಟ್ಟಿ ಭತ್ಯೆ ರೂ.3,060, ಮನೆ ಬಾಡಿಗೆ ಭತ್ಯೆ ಶೇಕಡ .8-24, ಪ್ರಯಾಣ ಭತ್ಯೆಯೂ ಇವೆಲ್ಲಾ ಸೇರಿದಂತೆ ಒಟ್ಟು ಮಾಸಿಕ ವೇತನ ರೂ.22,500 ದಿಂದ 25,380 ವರೆಗೆ ಇರುತ್ತದೆ.

Leave A Reply

Your email address will not be published.