Holi Festival: ಭಾರತದ ಈ ಸ್ಥಳಗಳಲ್ಲಿ ‘ಹೋಳಿ’ ಯನ್ನು ಆಚರಿಸಲ್ವಂತೆ! ಹಾಗಿದ್ರೆ ಆ ತಾಣಗಳಾವು? ಕಾರಣವೇನು ಗೊತ್ತಾ?

Holi Festival :ಈ ಬಣ್ಣಗಳ ಹಬ್ಬ ಹೋಳಿ (Holi) ಅಂದ್ರೆ ಯಾರಿಗೆ ಇಷ್ಟವಿರಲ್ಲ ಹೇಳಿ? ಎಲ್ಲರೂ ಇಷ್ಟ ಪಡುವವರೇ, ಸಂಭ್ರಮಿಸುವವರೇ ಇರೋದು. ಇಂದು ಈ ಹಬ್ಬ ಭಾರತದಲ್ಲಿ ಮಾತ್ರವಲ್ಲ ವಿದೇಶಿಗರೂ ಆಚರಿಸುತ್ತಾರೆ. ಒಟ್ಟಿನಲ್ಲಿ ಇದೊಂದು ವರ್ಣರಂಜಿತವಾದ ಹಬ್ಬವಾಗಿದ್ದು, ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿದ್ದು, ತಮ್ಮ ಸ್ನೇಹಿತರು ಅಥವಾ ಪ್ರೀತಿಪಾತ್ರರ ಜೊತೆ ಬಣ್ಣದ ಓಕುಳಿಯಲ್ಲಿ ಮಿಂದೇಳಬಹುದು. ವಾಸ್ತವವಾಗಿ, ಹೋಳಿ ಹಬ್ಬವನ್ನು ಉತ್ತರ ಭಾರತ(North India)ಕ್ಕೆ ಹೋಲಿಸಿದರೆ ದಕ್ಷಿಣ ಭಾರತ(South India) ದಲ್ಲಿ ಕಡಿಮೆ ಆಚರಿಸೋದು ಎಂದು ಹೇಳಬಹುದು. ಆದ್ರೆ ನಿಮಗೆ ಗೊತ್ತಾ? ಭಾರತದ ಕೆಲವು ತಾಣಗಳು ಹೋಳಿ ಹಬ್ಬವನ್ನು (Holi Festival) ಸಂಭ್ರಮಿಸೋದೆ ಇಲ್ಲ. ಈ ಹಬ್ಬ ಅಂದ್ರೆ ಇಲ್ಲಿನವರಿಗೆ ಆಗೋದೆ ಇಲ್ಲವಂತೆ. ಹಾಗಿದ್ರೆ ಆ ತಾಣಗಳಾವು?

ಉತ್ತರಾಖಾಂಡಾದ ರುದ್ರಪ್ರಯಾಗ(Uttarakand, Rudraprayagl: ಉತ್ತರಾಖಂಡದಲ್ಲಿರುವ ಅಲಕನಂದಾ(Alakananda) ಮತ್ತು ಮಂದಾಕಿನಿ(Mandakini) ನದಿಗಳು ಸಂಗಮಿಸುವ ರುದ್ರಪ್ರಯಾಗದಲ್ಲಿ ಈ ಹೋಳಿ ಹಬ್ಬವನ್ನು ಆಚರಿಸೋದಿಲ್ಲ. ಇಲ್ಲಿ 2 ಹಳ್ಳಿಗಳು ಇವೆ. ಅವು ಸುಮಾರು 150 ವರ್ಷಗಳಿಂದ ಹೋಳಿ ಆಚರಿಸುತ್ತಿಲ್ಲ. ಗ್ರಾಮದ ಸ್ಥಳೀಯ ದೇವತೆಯಾದ ತ್ರಿಪುರ ಸುಂದರಿ(Tripura Sundari) ಆ ಶಬ್ದವನ್ನು ಇಷ್ಟಪಡುವುದಿಲ್ಲ ಎಂದು ಇಲ್ಲಿನ ಜನ ನಂಬುತ್ತಾರೆ. ಈ ಕಾರಣದಿಂದಲೇ ಗ್ರಾಮಸ್ಥರು ಗದ್ದಲದ ಹಬ್ಬಗಳನ್ನು ಆಚರಿಸುವುದನ್ನು ನಿಷೇಧಿಸಿದ್ದಾರೆ.

ಗುಜರಾತ್ ರಾಮ್ಸನ್(Gujarath Ramsan): ಗುಜರಾತ್‌ ವರ್ಣರಂಜಿತವಾದ ರಾಜ್ಯ. ಈ ಸೊಗಸಾದ ರಾಜ್ಯದಲ್ಲಿ ಒಂದು ರಾಮ್ಸಾನ್‌ ಎಂಬ ಹೆಸರಿನ ಗ್ರಾಮವಿದೆ. ಗುಜರಾತ್‌ನ ಬನಸ್ಕಾಂತ ಜಿಲ್ಲೆಯಲ್ಲಿರುವ ಈ ಗ್ರಾಮದಲ್ಲಿ ಕಳೆದ 200 ವರ್ಷಗಳಿಂದ ಹೋಳಿ ಆಚರಿಸುತ್ತಿಲ್ಲ! ಸ್ಥಳೀಯರು ಹೋಳಿ ಹಬ್ಬ ಆಚರಿಸದೇ ಇರುವುದಕ್ಕೆ ಶಾಪದ ದಂತಕಥೆ ಇದ್ಯಂತೆ.

ಜಾರ್ಖಂಡ್ ದುರ್ಗಾಪುರ(Jharkand Duegapura): ಗುಜರಾತ್‌ ರಾಜ್ಯದ ರಾಮ್ಸಾನ್‌ ಎಂಬ ಗ್ರಾಮದಂತೆ ಜಾರ್ಖಂಡ್‌ ರಾಜ್ಯದ ಒಂದು ಗ್ರಾಮವು ಕೂಡ ಬಣ್ಣದ ಹಬ್ಬವನ್ನು ಆಚರಿಸುವುದಿಲ್ಲ. ಆ ವಿಲಕ್ಷಣವಾದ ಗ್ರಾಮವು ಜಾರ್ಖಂಡ್‌ ರಾಜ್ಯದ ಬೊಕಾರೊದ ದುರ್ಗಾಪುರ ಗ್ರಾಮವಾಗಿದೆ. ಇಲ್ಲಿ ಕಳೆದ 100 ವರ್ಷಗಳಿಂದ ಜನರು ಹೋಳಿ ಆಚರಿಸಿಲ್ಲ. ಈ ಗ್ರಾಮದ ಪ್ರದೇಶವನ್ನು ಆಳ್ವಿಕೆ ನಡೆಸುತ್ತಿದ್ದ ರಾಜನ ಮಗ ಹೋಳಿ ಹಬ್ಬದ ದಿನದಂದು ಮೃತನಾದ ಕಾರಣ, ರಾಜನ ಆದೇಶದ ಮೇರೆ ಹೋಳಿ ಹಬ್ಬವನ್ನು ಕೈಬಿಡಲಾಯಿತು. ಒಂದು ವೇಳೆ ಹೋಳಿ ಆಚರಿಸಬೇಕು ಎಂದಾದರೆ ಪಕ್ಕದ ಬೇರೊಂದು ಗ್ರಾಮಕ್ಕೆ ಹೋಗಿ ಆನಂದಿಸಬಹುದು.

ತಮಿಳುನಾಡು(Tamilunadu): ಹುಣ್ಣಿಮೆಯಂದು ಹೋಳಿ ಬಂದರೆ ಇಲ್ಲಿನ ಜನರು ಮಾಸಿ ಮಾಘಂ ಎಂದು ಆಹ್ವಾನ ಮಾಡುತ್ತಾರೆ. ತಮಿಳು ಧರ್ಮದ ಪ್ರಕಾರ ಇದು ಪವಿತ್ರವಾದ ದಿನವಾಗಿದೆ. ಈ ದಿನವನ್ನು ತಮ್ಮದೇ ಆದ ಶೈಲಿಯಲ್ಲಿ ಸಂಭ್ರಮಿಸುತ್ತಾರೆ.

Leave A Reply

Your email address will not be published.