Mahindra scorpio classic :ಮಹೀಂದ್ರದ ಹೊಸ ಸ್ಕಾರ್ಪಿಯೋ ತನ್ನ ಒಂಬತ್ತು ಆಸನಗಳ ಆಯ್ಕೆಯೊಂದಿಗೆ ಮಾರುಕಟ್ಟೆಗೆ ಬರಲು ರೆಡಿ!

Mahindra scorpio : ದೇಶದ ಮಾರುಕಟ್ಟೆಯಲ್ಲಿ ನೂತನ ವಾಹನಗಳು ಲಗ್ಗೆ ಇಡುತ್ತಿವೆ. ಕಂಪನಿಗಳು ವಿಭಿನ್ನ ವಿನ್ಯಾಸದ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಸದ್ಯ
ಮಹೀಂದ್ರ (Mahindra) ಕಂಪನಿಯು ಇದೀಗ ಹೊಸ ರೂಪಾಂತರದ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಒಂಬತ್ತು ಆಸನಗಳ ಆಯ್ಕೆಯೊಂದಿಗೆ ಮಹೀಂದ್ರಾ ಸ್ಕಾರ್ಪಿಯೋ (Mahindra Scorpio) ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ.

ಸದ್ಯ ಮಹೀಂದ್ರಾ SUV ಕೇವಲ S ಮತ್ತು S11 ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದೀಗ ಮಹೀಂದ್ರ SS ಎಂಬ ಹೊಸ ರೂಪಾಂತರದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಮಹೀಂದ್ರಾ ಸ್ಕಾರ್ಪಿಯೊ, ಬೇಸ್-ಸ್ಪೆಕ್ S ರೂಪಾಂತರವು ಕೇವಲ 9-ಸೀಟ್ ಆಯ್ಕೆಯನ್ನು ಪಡೆದರೆ, S5 ಮತ್ತು S11 ರೂಪಾಂತರಗಳು 7-ಆಸನ ಮತ್ತು 9-ಆಸನಗಳ ಆಯ್ಕೆಗಳನ್ನು ಪಡೆಯುತ್ತವೆ ಎಂದು ತಿಳಿದುಬಂದಿದೆ.

ಸ್ಕಾರ್ಪಿಯೋ ಕ್ಲಾಸಿಕ್‌ನ ಒಟ್ಟು ಏಳು ರೂಪಾಂತರಗಳು ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲು ರೆಡಿಯಾಗಿದೆ. ಸ್ಕಾರ್ಪಿಯೊ ಕ್ಲಾಸಿಕ್‌ನ ಟಾಪ್-ಸ್ಪೆಕ್ S11 ರೂಪಾಂತರವು ಎರಡನೇ ಸಾಲಿನ ಕ್ಯಾಪ್ಟನ್ ಸೀಟ್‌ನ ಆಯ್ಕೆಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.

ಮಹೀಂದ್ರಾ ಸ್ಕಾರ್ಪಿಯೊ ಕ್ಲಾಸಿಕ್ ಹಲವು ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದೆ. ಈ ಕಾರು(car) ಉಕ್ಕಿನ ಚಕ್ರಗಳು, ಸೆಂಟ್ರಲ್ ಲಾಕಿಂಗ್, ಆಡಿಯೊ ಸಿಸ್ಟಮ್ ಮತ್ತು ಎಲೆಕ್ಟ್ರಿಕಲಿ ಅಡ್ಜಸ್ಟ್ ಮಾಡಬಹುದಾದ ORVM ಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಸ್ಕಾರ್ಪಿಯೊ ಕ್ಲಾಸಿಕ್ 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ, ಗರಿಷ್ಠ 130 ಎಚ್‌ಪಿ ಶಕ್ತಿಯನ್ನು ಮತ್ತು 300 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹಾಗೆಯೇ LED DRL ಗಳೊಂದಿಗೆ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಫಾಲೋ-ಮಿ-ಹೋಮ್ ಹೆಡ್‌ಲ್ಯಾಂಪ್‌ಗಳು, ಹಿಂಭಾಗದ ವಾಷರ್ ಮತ್ತು ವೈಪರ್ ಮತ್ತು ಮುಂಭಾಗದ ಆರ್ಮ್ ರೆಸ್ಟ್‌ಗಳು ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಕೂಡ ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ, ಡ್ಯುಯಲ್ ಏರ್‌ಬ್ಯಾಗ್‌ಗಳು, ಬಾಗಿಕೊಳ್ಳಬಹುದಾದ ಸ್ಟೀರಿಂಗ್, ಎಂಜಿನ್ ಇಮೊಬಿಲೈಜರ್, ಸೀಟ್ ಬೆಲ್ಟ್ ರಿಮೈಂಡರ್ ಮತ್ತು ವೇಗದ ಎಚ್ಚರಿಕೆಯಂತಹ ಹಲವು ವೈಶಿಷ್ಟ್ಯಗಳು ಇದರಲ್ಲಿವೆ ಎಂದು ತಿಳಿದುಬಂದಿದೆ.

Leave A Reply

Your email address will not be published.