ಅಚ್ಚರಿಯ ಫೋನ್ ಬಂದಿದೆ ನೋಡಿ, ಟೆಕ್ನೋ ಕಂಪನಿಯ ಕೈ ಚಳಕ!

Tecno Phantom V Fold :ಇಂದಿನ ಕಾಲದಲ್ಲಿ ಮೊಬೈಲ್ ಎಂಬ ಸಾಧನದ ಬಳಕೆ ಮಾಡದವರೆ ವಿರಳ. ಮೊಬೈಲ್ ಎಂಬ ಸಾಧನದ ಹೆಚ್ಚಿನವರ ಪಾಲಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಅದರಲ್ಲಿಯೂ ದಿನದಿಂದ ದಿನಕ್ಕೆ ಹೊಸ ಹೊಸ ವೈಶಿಷ್ಟ್ಯದ ಮೂಲಕ ಮೊಬೈಲ್ ಗಳು ಮಾರುಕಟ್ಟೆಯಲ್ಲಿ ಲಗ್ಗೆ ಇಟ್ಟು ಟ್ರೆಂಡ್ ಸೃಷ್ಟಿಸುತ್ತಿವೆ. ಈ ನಡುವೆ ಟೆಕ್ನೋ ಕಂಪೆನಿ ಹೊಚ್ಚ ಹೊಸ ವಿಶೇಷತೆಯ ಸ್ಮಾರ್ಟ್ ಫೋನ್ ಲಾಂಚ್ ಮಾಡಿದ್ದು, ಮೊಬೈಲ್ ಗಳ ಕ್ರೇಜ್ ಇರುವವರು ಈ ಹೊಚ್ಚ ಹೊಸ ಮಾದರಿಯ ಸ್ಮಾರ್ಟ್ ಫೋನಿನ ವಿಶೇಷತೆ ಬಗ್ಗೆ ಮಾಹಿತಿ ನಿಮಗಾಗಿ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್ ಈವೆಂಟ್‌ನಲ್ಲಿ (Mobile World Congress 2023) ಇಡೀ ಟೆಕ್ ವಲಯವೇ ಶಾಕ್ ಆಗುವ ಫೀಚರ್ ಮೂಲಕ ಟೆಕ್ನೋ ಕಂಪೆನಿ ತನ್ನ ಮೊತ್ತ ಮೊದಲ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಇದಕ್ಕೆ ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್(Tecno Phantom V Fold smartphone) ಎಂದು ನಾಮಕರಣ ಮಾಡಲಾಗಿದೆ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್ ಫೋನ್ ವಿಶೇಷತೆ(Tecno Phantom V Fold specifications)
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್‌ ಬೆರಗುಗೊಳಿಸುವ ಸ್ಪೆಕ್ಸ್ ಶೀಟ್ ಅನ್ನು ಒಳಗೊಂಡಿದೆ. ಇದರ ಜೊತೆಗೆ 6.42 ಇಂಚಿನ LTPO AMOLED ಕವರ್‌ ಡಿಸ್‌ಪ್ಲೇ ಒಳಗೊಂಡಿದ್ದು, ಈ ಡಿಸ್‌ಪ್ಲೇ 1080 x 2550 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್‌ 45W ವೇಗದ ಚಾರ್ಜಿಂಗ್‌ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, VolTE, 4G, ಮೊಬೈಲ್ ಹಾಟ್‌ಸ್ಪಾಟ್, ಬ್ಲೂಟೂತ್ v5.3, Wi-Fi 4 ಬೆಂಬಲ ಹೊಂದಿದೆ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್‌ ವಿಶೇಷತೆ ಗಮನಿಸಿದರೆ, ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಟೆಲಿಫೋಟೋ ಲೆನ್ಸ್ ಹೊಂದಿದ್ದು, 2x ಜೂಮ್‌ನ ವೈಶಿಷ್ಟ್ಯ ಹೊಂದಿದೆ. ಮೂರನೇ ಕ್ಯಾಮೆರಾ 13 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್‌ ಅನ್ನು ಒಳಗೊಂಡಿದೆ. ಇದರ ಜೊತೆಗೆ ಕವರ್ ಪರದೆಯ ಮೇಲ್ಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಹಾಗೂ ಸ್ಮಾರ್ಟ್‌ಫೋನ್‌ ಒಳಭಾಗದಲ್ಲಿ 16MP ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಫೀಚರ್ ಕೂಡ ಇದೆ. ಇದನ್ನು ನೀವು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಯಲ್ಲಿ ಖರೀದಿ ಮಾಡಬಹುದು.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಬೆಲೆ ಮತ್ತು ಲಭ್ಯತೆ(Tecno Phantom V Fold smartphone Price and Availability ):
ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್‌ 12GB + 256GB ರೂಪಾಂತರದ ಆಯ್ಕೆಗೆ 89,999ರೂ. ಆಗಿರಲಿದೆ. ಇದರ 12GB + 512GB ಸ್ಟೋರೇಜ್‌ ರೂಪಾಂತರದ ಆಯ್ಕೆಗೆ 99,999ರೂ. ಆಗಿರಲಿದೆ. ಈ ಸ್ಮಾರ್ಟ್‌ಫೋನ್‌ ಲಾಂಚ್‌ ಆಫರ್‌ನಲ್ಲಿ ನೀವು ಭರ್ಜರಿ 10,000ರೂ.ಗಳ ಡಿಸ್ಕೌಂಟ್‌ ಕೂಡ ಬಂಪರ್ ಆಫರ್ ಆಗಿ ಪಡೆಯಬಹುದು. ಆದರೆ, ಈ ಸ್ಮಾರ್ಟ್‌ಫೋನ್‌ ಸೇಲ್‌ ಡೇಟ್‌ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಟೆಕ್ನೋ ಫ್ಯಾಂಟಮ್ ವಿ ಫೋಲ್ಡ್ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ವೇಗವನ್ನು ಹೊಂದಿದ್ದು, ಇದು ಆಂಡ್ರಾಯ್ಡ್‌ OS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು 12GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 7.85 ಇಂಚಿನ ಇನರ್‌ಡಿಸ್‌ಪ್ಲೇ ಹೊಂದಿದ್ದು, ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಬೆಂಬಲ ಹೊಂದಿದ್ದು, ಇದು 2000 x 2296 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ.

Leave A Reply

Your email address will not be published.