ದಕ್ಷಿಣ ಕನ್ನಡ : ಕೊಳೆತ ಸ್ಥಿತಿಯಲ್ಲಿ ಗದಗ ಮೂಲದ ಕಾರ್ಮಿಕನ ಶವ ಪತ್ತೆ

Share the Article

Death : ದಕ್ಷಿಣ ಕನ್ನಡ : ಕೃಷಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೆ. 25ರಂದು ಕಡಬ ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ಎಂಬಲ್ಲಿ ನಡೆದಿದೆ.

ಗದಗ ಜಿಲ್ಲೆಯ ಗೋವಿಂದ (55) ಮೃತ( Death) ವ್ಯಕ್ತಿ. ಗದಗ ಜಿಲ್ಲೆಯ ಗೋವಿಂದ ಎಂಬಾತನನ್ನು ಕೃಷಿ ಹಾಗೂ ಕೋಳಿ ಫಾರಂ ನೋಡಿಕೊಳ್ಳಲು ನೇಮಿಸಿಕೊಂಡಿದ್ದು, ಆರು ತಿಂಗಳಿನಿಂದ ಕೆಲಸ ಮಾಡುತಿದ್ದು ಫೆ. 21 ರಂದು ಗೋವಿಂದ ಊರಿಗೆ ಹೋಗುವುದಾಗಿ 5000 ರೂ. ಪಡೆದಿದ್ದಾರೆ.

ಫೆ.25ರಂದು ಸತ್ಯಪ್ರಸಾದ್ ಅವರು ತಮ್ಮ ಕೃಷಿ ತೋಟಕ್ಕೆ ನೀರು ಬಿಡುವರೇ ತೋಟಕ್ಕೆ ಬೆಳಗ್ಗೆ ಹೋದಾಗ ತೋಟದಲ್ಲಿ ವಾಸನೆ ಬರುತಿದ್ದು ಬಳಿಕ ಹತ್ತಿರ ಹೋಗಿ ನೋಡಿದಾಗ ಮೃತದೇಹವೊಂದು ಕೊಳೆತ ಸ್ಥಿತಿಯಲ್ಲಿದ್ದು ಹತ್ತಿರ ಹೋಗಿ ನೊಡಿದಾಗ ಮೃತದೇಹವು ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಗೋವಿಂದ ಎಂಬಾತನದ್ದಾಗಿರುತ್ತದೆ.

ಗೋವಿಂದನು ಊರಿಗೆ ಹೋಗುತ್ತೇನೆಂದು ಹೋದವನು ಊರಿಗೆ ಹೋಗದೇ ತೋಟದಲ್ಲಿ ಬಿದ್ದುಕೊಂಡು ಮೃತಪಟ್ಟಿದ್ದು ಮೃತ ಗೋವಿಂದನು ಯಾವುದೋ ವಿಷಪದಾರ್ಥ ಸೇವನೆ ಮಾಡಿಯೋ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರುವುದಾಗಿದೆ.

ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply