Home Technology 0888888888 : ನಿಮಗಿದು ಗೊತ್ತೇ? ಈ ನಂಬರ್‌ ಯಾಕೆ ಈಗ ಇಲ್ಲ : ಕಾರಣ ಇಲ್ಲಿದೆ

0888888888 : ನಿಮಗಿದು ಗೊತ್ತೇ? ಈ ನಂಬರ್‌ ಯಾಕೆ ಈಗ ಇಲ್ಲ : ಕಾರಣ ಇಲ್ಲಿದೆ

Number Blocked

Hindu neighbor gifts plot of land

Hindu neighbour gifts land to Muslim journalist

Mobile Number Blocked : ನೀವು ಅತ್ಯಂತ ಭಯಾನಕವಾದ ಮನೆ (Home), ಕಾಡು ಅಥವಾ ಬೇರೆ ಸ್ಥಳಗಳ ಬಗ್ಗೆ, ವಸ್ತುಗಳ ಬಗ್ಗೆ ಕೇಳಿರಬಹುದು. ಅಂತಹ ಭಯಾನಕ ವಿಷಯದ ಬಗ್ಗೆ ಅನ್ವೇಷಣೆ ನಡೆಸಲು ಹೋದವರಲ್ಲಿ ಸತ್ಯಾ ಸತ್ಯತೆಗಳನ್ನು ತಿಳಿದು ಬಂದವರು ಇದ್ದಾರೆ. ಇನ್ನು ಕೆಲವರು ಸದ್ದಿಲ್ಲದೆ ಕಣ್ಮರೆ ಆಗಿರುವುದು ಇದೆ. ಆದರೆ ಇಲ್ಲೊಂದು ಭಯಾನಕ ಫೋನ್ (Phone) ಸಂಖ್ಯೆಯ ಬಗ್ಗೆ ತಿಳಿದುಕೊಳ್ಳಲೇ ಬೇಕು.

ಹೌದು ಇದುವರೆಗೆ ಯಾವ ವ್ಯಕ್ತಿ 0888888888 ಈ ಮೊಬೈಲ್ ಸಂಖ್ಯೆಯನ್ನು (mobile )ಬಳಸಿದ್ದಾರೆಯೋ, ಸಾವು ಅವರನ್ನು ಹುಡುಕಿಕೊಂಡು ಅಟ್ಟಾಡಿಸಿದೆ. ಅಂದರೆ, ಈ ಮೊಬೈಲ್ ಸಂಖ್ಯೆ ಬಳಸಿರುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈ ಘಟನೆಗಳು ಒಂದೆರಡು ದಿನಗಳಿಂದ ನಡೆಯುತ್ತಿಲ್ಲ ಮತ್ತು ಕಳೆದ 10 ವರ್ಷಗಳಿಂದ ಈ ಘಟನೆಗಳು ನಡೆಯುತ್ತಿವೆಯಂತೆ.

ಈ ಮೊದಲು ಬಲ್ಗೇರಿಯಾದಲ್ಲಿ ಈ ನಂಬರ್ ಬಳಕೆಯಲ್ಲಿತ್ತಂತೆ. ಬಲ್ಗೇರಿಯಾದ ಮೊಬಿಟೆಲ್ ಕಂಪನಿಯ ಸಿಇಒ ಮೊದಲು ಈ ಮೊಬೈಲ್ ನಂಬರ್ ಅನ್ನು ಖರೀದಿಸಿದ್ದರು. ಇದನ್ನು ಬಳಸುತ್ತಿದ್ದ ವ್ಲಾಡಿಮಿರ್ ಗೆಸಾನೋವ್ 2001ರಲ್ಲಿ ಸಾವನ್ನಪ್ಪಿದ್ದರು. ಕ್ಯಾನ್ಸರ್ ಬಂದು ಸಾವನ್ನಪ್ಪಿದ್ದಾನೆ ಎಂದು ಸುದ್ದಿಯಾಯಿತು. ಆದರೆ ಮೊಬೈಲ್ ನಂಬರ್ ಸಾವಿಗೆ ಕಾರಣವೆಂದು ಮಾಧ್ಯಮಗಳು ವರದಿ ಮಾಡಿದ್ದವು.

ಇದಾದ ನಂತರ ಈ ಸಂಖ್ಯೆಯನ್ನು ದಿಮಿತ್ರಿವ್ ಹೆಸರಿನ ಕುಖ್ಯಾತ ಡ್ರಗ್ ಡೀಲರ್ ಖರೀದಿ ಮಾಡಿದ್ದರು. 2003ರಲ್ಲಿ ಅವರನ್ನು ಹೊಡೆದು ಸಾಯಿಸಲಾಯಿತು. ಸಾವಿನ ವೇಳೆ ಈ ಸಂಖ್ಯೆ ದಿಮಿತ್ರಿವ್ ಬಳಿಯೇ ಇತ್ತು. ನಂತರ ಪ್ರಸಿದ್ಧ ವ್ಯಾಪಾರಿಯೊಬ್ಬರ ಕೈಗೆ ಈ ನಂಬರ್ ಬಂದಿತ್ತು. ಆ ವ್ಯಾಪಾರಿ ಕೂಡ ನಿಗೂಢವಾಗಿಯೇ ಸತ್ತು ಹೋಗಿದ್ದಾರೆ.

ಇದುವರೆಗೆ ಯಾವ ವ್ಯಕ್ತಿ ಈ ಮೊಬೈಲ್ ಸಂಖ್ಯೆಯನ್ನು ಬಳಸಿದ್ದಾರೆಯೋ, ಆ ವ್ಯಕ್ತಿಗಳೆಲ್ಲ ಸಾವನ್ನಪ್ಪಿದ್ದಾರೆ. ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿಯೂ ಕೂಡ ಈ ಅಪಾಯಕಾರಿ ಮೊಬೈಲ್ ನಂಬರ್ (Mobile Number Blocked )ಬಗೆಗಿನ ಚರ್ಚೆಗಳು ನಡೆದಿದ್ದು, ಹಲವಾರು ವಿವಾದಗಳು ಹುಟ್ಟಿಕೊಂಡಿದ್ದವು.

ಸದ್ಯ 2005ರ ನಂತರ ಈ ಮೊಬೈಲ್ ಸಂಖ್ಯೆಯನ್ನು ಯಾರಿಗೂ ನೀಡದೆ ಬ್ಯಾನ್ ಮಾಡಲಾಗಿದ್ದು, ಈ ಮೊಬೈಲ್ ಸಂಖ್ಯೆ ಕೊನೆಗೂ ನಿಗೂಢವಾಗಿಯೇ ಉಳಿದುಬಿಟ್ಟಿದೆ.