Home Latest Sports News Karnataka NZ vs ENG: ಭರ್ಜರಿ ಜಯ ಸಾಧಿಸಿದ ಕಿವೀಸ್, ಇತಿಹಾಸ ನಿರ್ಮಿಸಿತು ನ್ಯೂಜಿಲೆಂಡ್!

NZ vs ENG: ಭರ್ಜರಿ ಜಯ ಸಾಧಿಸಿದ ಕಿವೀಸ್, ಇತಿಹಾಸ ನಿರ್ಮಿಸಿತು ನ್ಯೂಜಿಲೆಂಡ್!

NZ vs ENG

Hindu neighbor gifts plot of land

Hindu neighbour gifts land to Muslim journalist

NZ vs ENG: ಈಗಾಗಲೇ ಮೌಂಟ್ ಮೌಂಗನುಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ (Ben Stokes) ನೇತೃತ್ವದ ಆಂಗ್ಲ ತಂಡ 267 ರನ್ ಗಳ ಜಯ ಸಾಧಿಸಿತ್ತು. ಆದರೆ ಪ್ರಸ್ತುತ ವೆಲ್ಲಿಂಗ್‌ಟನ್‌ನಲ್ಲಿ ನಡೆದಿರುವ ಎರಡನೇ ಟೆಸ್ಟ್ ನಲ್ಲಿ ಇಂಗ್ಲೆಂಡ್ ಅನ್ನು ನ್ಯೂಜಿಲೆಂಡ್ (new Zealand )1 ರನ್‌ಗಳಿಂದ ಸೋಲಿಸಿದ್ದು, ಇದೀಗ ಇಂಗ್ಲೆಂಡ್(England )ಒಂದು ರನ್ ಗೆ ಸೋಲು ಒಪ್ಪಿಕೊಂಡಿದೆ.

ಸದ್ಯ ಇಂಗ್ಲೆಂಡ್ (NZ vs ENG) ಗೆಲುವಿಗೆ 258 ರನ್ ಗಳ ಗುರಿ ನೀಡಿತ್ತು. ಆದರೆ, ಆಂಗ್ಲರ ತಂಡ 256 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 2 ಟೆಸ್ಟ್‌ಗಳ ಸರಣಿಯನ್ನು ನ್ಯೂಜಿಲೆಂಡ್ (New Zealand) 1-1ರಲ್ಲಿ ಸಮಬಲಗೊಳಿಸಿದೆ.

ವಿಶೇಷವೆಂದರೆ ಇದಕ್ಕೂ ಮೊದಲು 1993ರಲ್ಲಿ ಅಡಿಲೇಡ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ 1 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದೀಗ 30 ವರ್ಷಗಳ ನಂತರ ನ್ಯೂಜಿಲೆಂಡ್ ಈ ಸಾಧನೆ ಮಾಡಿದೆ.

ಅಲ್ಲದೆ ಟೆಸ್ಟ್ ಇತಿಹಾಸದಲ್ಲಿ ಇದು ನಾಲ್ಕನೇ ಬಾರಿ ಈ ರೀತಿ ಆಗಿದೆ. ಫಾಲೋ-ಆನ್ ಆಡುವಾಗ ತಂಡವು ಪಂದ್ಯವನ್ನು ಗೆದ್ದಿರುವುದು. ಇಂಗ್ಲೆಂಡ್ ಗೆಲುವಿಗೆ 258 ರನ್ ಗಳ ಗುರಿ ಇತ್ತು. ಒಂದು ಬಾರಿ ಇಂಗ್ಲೆಂಡ್ 80 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಜೋ ರೂಟ್ ಮತ್ತು ನಾಯಕ ಬೆನ್ ಸ್ಟೋಕ್ಸ್ 6ನೇ ವಿಕೆಟ್‌ಗೆ 121 ರನ್‌ಗಳ ಜೊತೆಯಾಟವನ್ನು ಆಡಿದರು.

ಸದ್ಯ ನೀಲ್ ವ್ಯಾಗ್ನರ್ ನ್ಯೂಜಿಲೆಂಡ್ ಗೆಲುವಿನ ಹೀರೋ ಆದರು. ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. ಇವರಲ್ಲದೆ ನಾಯಕ ಟಿಮ್ ಸೌಥಿ 3 ವಿಕೆಟ್ ಪಡೆದರು. ಮ್ಯಾಟ್ ಹೆನ್ರಿ ಕೂಡ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಟಿಮ್ ಸೌಥಿ ನಾಯಕತ್ವದಲ್ಲಿ ನ್ಯೂಜಿಲೆಂಡ್‌ನ ಮೊದಲ ಗೆಲುವು ಇದಾಗಿದೆ.