IRCTC : ಐಆರ್ ಸಿಟಿಸಿ ಯಿಂದ ಸಿಹಿ ಸುದ್ದಿ, ಇಲ್ಲಿದೆ ಕಂಪ್ಲೀಟ್ ವಿವರ!

IRCTC Tour Package : ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಹಾಗೂ ಟೂರಿಸಂ ಕಾರ್ಪೊರೇಷನ್ (IRCTC) ಈಗಾಗಲೇ ನಮ್ಮ ದೇಶದಲ್ಲಿ ಅನೇಕ ಪ್ರವಾಸ ಪ್ಯಾಕೇಜ್‌(tour package) ಗಳನ್ನು ತಂದಿದೆ. ಅಲ್ಲದೆ, ಈ ಹಿಂದೆ ಕೆಲವು ವಿದೇಶಿ ಪ್ರವಾಸದ ಪ್ಯಾಕೇಜ್‌ಗಳನ್ನು ಸಹ ತಂದಿದೆ. ಭಾರತೀಯ ರೈಲ್ವೇಯ ಅಂಗಸಂಸ್ಥೆಯಾದ IRCTC ಪ್ರತಿ ಬಾರಿ ನೂತನ ಪ್ಯಾಕೇಜ್ ಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಹಾಗೆಯೇ ಮತ್ತೆ ಇದೀಗ ಪ್ರವಾಸ ಪ್ಯಾಕೇಜ್ ಅನ್ನು ಘೋಷಿಸಿದ್ದು, IRCTCಯ ಈ ಪ್ರವಾಸ(IRCTC tour package) ಪ್ರತಿ ಶುಕ್ರವಾರ ಪ್ರಾರಂಭವಾಗುತ್ತದೆ. ಪ್ರವಾಸ ಪ್ಯಾಕೇಜ್‌ ಎಲ್ಲಿಂದ ಆರಂಭವಾಗಲಿದೆ? ಕೊನೆ ಎಲ್ಲಿಗೆ? ಯಾವೆಲ್ಲ ಸ್ಥಳಗಳನ್ನು ವೀಕ್ಷಿಸಬಹುದು? ಇವೆಲ್ಲದರ ಮಾಹಿತಿ ಇಲ್ಲಿದೆ.

ಪ್ರವಾಸದ ವಿವರ:
• IRCTC (Indian Railway Catering and Tourism Corporation)ಯ ಈ ಪ್ರವಾಸ ಏಪ್ರಿಲ್ 15ರಿಂದ ಆರಂಭವಾಗಿ, ಜುಲೈ 14ರವರೆಗೆ ನಡೆಯಲಿದೆ.
• ಈ ಪ್ಯಾಕೇಜ್ ಅನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುತ್ತದೆ ಎಂದು ಹೇಳಲಾಗಿದೆ.
• ಏಪ್ರಿಲ್‌ನಿಂದ ಜುಲೈವರೆಗೆ ಗರಿಷ್ಠ ಅವಧಿ ಮತ್ತು ಡಿಸೆಂಬರ್‌ನಿಂದ ಜನವರಿವರೆಗೆ ಆಯೋಜಿಸಲಾಗುತ್ತದೆ.
• ಹಾಗೆಯೇ ಈ ಪ್ರವಾಸ ಲಕ್ನೋ(Lucknow) ದಿಂದ ಪ್ರಾರಂಭವಾಗಲಿದೆ.
• ಪ್ರವಾಸವು ಚಂಡೀಗಢ (Chandigarh), ಶಿಮ್ಲಾ(Shimla) ಮತ್ತು ಕುಫ್ರಿ(Kufri) ಎನ್ನುವ ಮೂರು ಸ್ಥಳಗಳನ್ನು ಒಳಗೊಂಡಿದೆ.

ಯಾವೆಲ್ಲ ಸ್ಥಳಗಳಿಗೆ ಭೇಟಿ?
ಚಂಡೀಗಢಕ್ಕೆ ಭೇಟಿ ನೀಡಿ, ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಾದ ರೋಸ್ ಗಾರ್ಡನ್ (Rose garden), ರಾಕ್ ಗಾರ್ಡನ್, ಮಾನಸಾ ದೇವಿ ಮಂದಿರ, ಶಿಮ್ಲಾದ ಪಿಂಜೋರ್ ಗಾರ್ಡನ್ ಗೆ ಭೇಟಿ ನಿಡಲಿದ್ದು, ಕುಫ್ರಿಯ ಸುಖನಾ ಸರೋವರ ಸೇರಿದಂತೆ ಹಲವು ಪ್ರಸಿದ್ಧ, ಜನಪ್ರಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ, ಪ್ರಕೃತಿ ಸೌಂದರ್ಯ ವೀಕ್ಷಿಸಬಹುದಾಗಿದೆ.

ಲಕ್ನೋ-ಚಂಡೀಗಢ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಎರಡೂ ಪ್ರವಾಸ ಕೈಗೊಳ್ಳಲು ಬಯಸುವವರು ಪಾವತಿಸಬೇಕಾದ ಮೊತ್ತದ ವಿವರ ಇಲ್ಲಿದೆ.

ಪಾವತಿ ಮೊತ್ತದ ವಿವರ:
• ಪ್ರವಾಸಕ್ಕೆ ತೆರಳಲು ಬಯಸುವವರು ಮೊತ್ತ ಪಾವತಿಸಬೇಕಾಗಿದ್ದು, ಸೆಕೆಂಡ್‌ ಕ್ಲಾಸ್‌ ಎಸಿ ಬೋಗಿಯಲ್ಲಿ ಒಬ್ಬರು 39,225 ಪಾವತಿಸಬೇಕಾಗುತ್ತದೆ.
• ಅದರಲ್ಲಿ ಇಬ್ಬರಿಗಾದರೆ 22,170 ರೂ, ಹಾಗೆಯೇ ಮೂವರಿಗೆ 17,620 ರೂಪಾಯಿ ಆಗುತ್ತದೆ.
• 2ನೇ ಹಂತದ ಎಸಿ ಬೋಗಿಯಲ್ಲಿ ಒಬ್ಬರಿಗೆ 37,740 ರೂ. ಆಗಿರುತ್ತದೆ. ಹಾಗೂ ಇಬ್ಬರಿಗೆ 21,055 ರೂ. ಇನ್ನು ಮೂವರಿಗೆ 16,875 ರೂಪಾಯಿ ಆಗಿರುತ್ತದೆ.
• ಮೂರನೇ ಹಂತದ ಎಸಿ ಕ್ಲಾಸ್‌ನಲ್ಲಿ ಒಬ್ಬರು 38,025 ರೂ,ಪಾವತಿಸಬೇಕು. ಇಬ್ಬರಿಗೆ 20,970 ರೂ, ಮತ್ತು ಮೂವರಿಗೆ 16,420 ರೂ. ಆಗಿರಲಿದೆ.

ಟಿಕೆಟ್ ಬುಕಿಂಗ್ ಹೇಗೆ?
ಟಿಕೆಟ್ ಬುಕ್ ಮಾಡಲು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 8287930908 ಮತ್ತು 8287930902ಗೆ ಸಂಪರ್ಕಿಸಬಹುದಾಗಿದೆ.

Leave A Reply

Your email address will not be published.