ಉಡುಪಿ : ರಿಕ್ಷಾ -ಪಿಕಪ್ ಅಪಘಾತ ,ಗ್ರಾ.ಪಂ.ಸದಸ್ಯೆ ಮೃತ್ಯು

Share the Article

Accident : ಉಡುಪಿ (UDUPI) : ಉಡುಪಿ ಜಿಲ್ಲೆಯ ಕುಂದಾಪುರ (Kundapura) ತಾಲೂಕಿನ ಹೆಮ್ಮಾಡಿ ಸಮೀಪ ನಡೆದ ರಸ್ತೆ ಅಪಘಾತ(Accident)ದಲ್ಲಿ ಗಾಯಗೊಂಡಿದ್ದ ಗ್ರಾ.ಪಂ.ಸದಸ್ಯೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಹೆಮ್ಮಾಡಿ ಸಮೀಪದ ಕನ್ನಡಕುದ್ರು – ಮೂವತ್ತುಮುಡಿ ಬಳಿಯ ಹೆದ್ದಾರಿಯಲ್ಲಿ ರಿಕ್ಷಾ ಹಾಗೂ ಪಿಕಪ್‌ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡಿದ್ದ ಹೆಮ್ಮಾಡಿ ಗ್ರಾ.ಪಂ. ಸದಸ್ಯೆ ಕುಸುಮಾ (48) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಅವರು ಹೆಮ್ಮಾಡಿ ಗ್ರಾ.ಪಂ.ನ ಎರಡನೇ ವಾರ್ಡ್‌ ಆಗಿರುವ ಸಂತೋಷ್‌ನಗರ ಭಾಗದ ಸದಸ್ಯೆಯಾಗಿದ್ದರು.

ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕುಸುಮಾ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.ಮೃತರು ಪತಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಫೆ. 25ರ ಸಂಜೆ 4 ಗಂಟೆಯ ಸುಮಾರಿಗೆ ತ್ರಾಸಿ ಕಡೆಯಿಂದ ಕುಂದಾಪುರ ಹೆದ್ದಾರಿಯ ಕನ್ನಡಕುದ್ರು ಬಳಿ ಆಟೋ ರಿಕ್ಷಾಗೆ ತ್ರಾಸಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ದರ್ಶನ್‌ ಚಲಾಯಿಸುತ್ತಿದ್ದ ಪಿಕಪ್‌ ವಾಹನ ಢಿಕ್ಕಿಯಾಗಿದೆ.

ಘಟನೆಯಲ್ಲಿ ರಿಕ್ಷಾ ಚಾಲಕ ನಾರಾಯಣ, ಪ್ರಯಾಣಿಸುತ್ತಿದ್ದ ಕುಸುಮಾ ಗಂಭೀರವಾಗಿ ಗಾಯಗೊಂಡಿದ್ದರು. ಇವರೊಂದಿಗಿದ್ದ ಪತಿ ಚಂದ್ರಶೇಖರ ಮೆಂಡನ್‌, ಮಕ್ಕಳಾದ ಚಿರಾಗ್‌ (17) ಹಾಗೂ ಜಾಹ್ನವಿ (15) ಗಾಯಗೊಂಡಿದ್ದರು. ಈ ಕುರಿತು ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Leave A Reply