ಹಂದಿ ಶಿಕಾರಿಗೆ ಹೋದವರು ಸುರಂಗದೊಳಗೆ ಸಿಲುಕಿ ಸಾವು

Share the Article

Pig Hunt: ಚಿಕ್ಕಮಗಳೂರು : ಹಂದಿ ಶಿಕಾರಿ(Pig Hunt)ಗೆ ಮಾಡಲು ಸುರಂಗದೊಳಗೆ ನುಗ್ಗಿದ ಇಬ್ಬರು ಸುರಂಗದೊಳಗೆ ಉಸಿರುಗಟ್ಟಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರಿನ ಮಾಳಿಗನಾಡು ಎಂಬಲ್ಲಿ ಈ ಘಟನೆ ನಡೆದಿದೆ.

ಮಾಳಿಗನಾಡು ಆನೆಗುಂಡಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ವಿಜಯ್ ಹಾಗೂ ಶರತ್ ಮೃತಪಟ್ಟವರು.

ಎಸ್ಟೇಟ್‌ನಲ್ಲಿ ಕಾಳು ಮೆಣಸು ಕೊಯ್ಯಲು ಬಂದಿದ್ದ ಕಾರ್ಮಿಕರಾದ ವಿಜಯ್ ಹಾಗೂ ಶರತ್ ಅವರು ಮುಳ್ಳು ಹಂದಿ ನೋಡಿ ಶಿಕಾರಿಗೆ ಹೋಗಿದ್ದಾರೆ. ಗುಡ್ಡದಲ್ಲಿ ಹಂದಿ ಸುರಂಗದೊಳಗೆ ಹೋಗಿದೆ.

ಹಂದಿ ಹಿಡಿಯಲು ಸುರಂಗದೊಳಗೆ ಒಣ ಸೊಪ್ಪು ಹಾಕಿ ಬೆಂಕಿ ಹಾಕಿದ್ದಾರೆ,ಹೊಗೆ ಬಂದ ನಂತರ ಈ ಇಬ್ಬರೂ ಸುರಂಗದೊಳಗೆ ನುಗ್ಗಿದ್ದಾರೆ. ಹೊಗೆಯ ಪರಿಣಾಮ ಉಸಿರಾಡಲಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Leave A Reply