Shiv Sena Party Property: ಪಕ್ಷದ ಹೆಸರಾಯ್ತು, ಗುರುತೂ ಆಯ್ತು, ಇನ್ನು ಶಿವಸೇನೆ ಹೆಸರಲ್ಲಿರುವ ಭಾರೀ ಆಸ್ತಿ ಯಾರಿಗೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಅಪ್ಡೇಟ್!
Shiv sena : ರಾಷ್ಟ್ರ ರಾಜಕಾರಣದಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ರಾಜಕೀಯ ಅಂಶವೆಂದರೆ ಮಹಾರಾಷ್ಟ್ರ(Maharastra)ದ ಶಿವಸೇನಾ(Shiv sena) ಪಕ್ಷದಲ್ಲಿ ಆಗುತ್ತಿರುವ ಬದಲಾವಣೆಗಳು. ಹೌದು, ಶಿಂಧೆ(Shindhe) ಹಾಗೂ ಠಾಕ್ರೆ(Thakre) ಬಣಗಳು ದಿನದಿಂದ ದಿನಕ್ಕೆ ಬದಲಾಗುತ್ತಿವೆ. ಒಂದು ಬಣ ಗಳಿಸಿದರೆ, ಮತ್ತೊಂದು ಬಣ ಎಲ್ಲವನ್ನೂ ಕಳೆದುಕೊಳ್ಳುವ ಆತಂಕದಲ್ಲಿದೆ. ಮೊನ್ನೆ ತಾನೆ ತನ್ನ ಚಿಹ್ನೆಯನ್ನು ಕಳೆದುಕೊಂಡ ಠಾಕ್ರೆ ಬಣಕ್ಕೀಗ ಮತ್ತೊಂದು ಸಂಕಷ್ಟ ಎದುರಾಗುವ ಸಂಚಕಾರ ಬಂದೊದಗಿದೆ.
ಹೌದು, ಈ ಹಿಂದೆ ಕೇಂದ್ರ ಚುನಾವಣಾ ಆಯೋಗ ಏಕನಾಥ್ ಶಿಂಧೆ ಬಣವನ್ನೇ ನಿಜವಾದ ಶಿವಸೇನೆ ಎಂದು ಘೋಷಣೆ ಮಾಡಿದೆ. ಅದರೊಂದಿಗೆ ಶಿವಸೇನೆಯ ಚುನಾವಣಾ ಗುರುತು ಹಾಗೂ ಹೆಸರುಗಳು ಶಿಂಧೆ ಬಣದ ಸ್ವತ್ತು. ಅದನ್ನು ಬಳಸಿಕೊಳ್ಳುವ ಸಂಪೂರ್ಣ ಅಧಿಕಾರ ಶಿಂಧೆಬಣಕ್ಕಿದೆ. ಅಲ್ಲದೆ ಅವುಗಳನ್ನು ಚುನಾವಣೆಗಳಲ್ಲಿ ಹಾಗೂ ಪ್ರಚಾರದಲ್ಲಿ ಬಳಸಿಕೊಳ್ಳಲು ಅನುಮತಿಯನ್ನೂ ನೀಡಲಾಗೀತ್ತು. ಇದೀಗ ಇನ್ನೊಂದು ಸಮಸ್ಯೆ ಉದ್ಭವವಾಗಿದ್ದು, ಈಗಾಗಲೇ ಶಿವಸೇನೆಯ ಹೆಸರಲ್ಲಿ ಒಟ್ಟು 191 ಕೋಟಿ ರೂಪಾಯಿಯ ಆಸ್ತಿ ಇದೆ. ಮುಂದೆ ಇದು ಏಕನಾಥ್ ಶಿಂಧೆ ಅಥವಾ ಶಿವಸೇನೆಯ ಉದ್ದವ್ ಠಾಕ್ರೆ ಬಣದ ನಡುವೆ ಯಾರಿಗೆ ಹಂಚಿಕೆಯಾಗಲಿದೆ ಎನ್ನುವ ಕುತೂಹಲ ಎದುರಾಗಿದೆ.
ಯಾಕೆಂದರೆ ಈ ನಡುವೆ ಶಿಂಧೆ ಬಣ ನಾವು ಬಾಳಾಸಾಹೇಬ್ ಠಾಕ್ರೆ(Balasaheb Thakre) ಅವರ ವಿಚಾರಧಾರೆಗಳಿಗೆ ಮಾತ್ರವೇ ನಾವು ಮಾಲೀಕರು. ಅವರ ತತ್ವ ಸಿದ್ಧಾಂತಗಳೇ ನಮಗೆ ಆಸ್ತಿ ಇದ್ದಂತೆ. ಅವುಗಳ ಆಶಯಕ್ಕೆ ತಕ್ಕಂತೆ ನಾವು ಆಡಳಿತ ನಡೆಸೋದು ನಮ್ಮ ಉದ್ದೇಶ. ಹೀಗಾಗಿ ಶಿವಸೇನೆ ಹೆಸರಲ್ಲಿರುವ ಆಸ್ತಿ(Property)ನಮಗೆ ಬೇಡ ಎಂದು ತಿಳಿಸಿದೆ. ಆದರೆ, ಅವರು ಹೀಗೆ ಹೇಳಿದ ಮಾತ್ರಕ್ಕೆ ಉದ್ಧವ್ ಠಾಕ್ರೆ ಬಣಕ್ಕೆ ಶಿವಸೇನೆಯ ಆಸ್ತಿಯನ್ನು ಬಳಸಿಕೊಂಡು ರಾಜಕೀಯ ಮಾಡೋದು ಸಾಧ್ಯವಾಗೋದಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ(Suprime court) ವಿಚಾರಣೆ ಮುಗಿದ ಬಳಿಕ ಇವುಗಳಿಗೆ ಒಂದು ಅಂತ್ಯ ಸಿಗಬಹುದು ಎಂದು ಅಂದಾಜಿಸಲಾಗಿದೆ.
ಫೆಬ್ರವರಿ 17 ರಂದು, ಉದ್ದವ್ ಠಾಕ್ರೆ ಬಣಕ್ಕೆ ದೊಡ್ಡ ಅಘಾತ ನೀಡಿದ್ದ ಚುನಾವಣಾ ಆಯೋಗವು(Election Commission) ಶಿವಸೇನೆ ಎನ್ನುವ ಹೆಸರು ಮತ್ತು ಬಿಲ್ಲು ಹಾಗೂ ಬಾಣದ ಚಿಹ್ನೆಯನ್ನು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ನೀಡಿತ್ತು. ಅದರ ಬೆನ್ನಲ್ಲಿಯೇ ಏಕನಾಥ್ ಶಿಂಧೆ ಅವರನ್ನು ಪಕ್ಷದ ನಾಯಕರನ್ನಾಗಿ ನೇಮಕ ಮಾಡಲಾಗುದೆ. ಚೀಫ್ ಲೀಡರ್ ಅಥವಾ ಮುಖ್ಯ ನಾಯಕ ಎನ್ನುವ ಹುದ್ದೆ ಶಿವಸೇನೆ ಮುಖ್ಯಸ್ಥ ಸ್ಥಾನಕ್ಕೆ ಸಮಾನವಾಗಿದೆ.
ಇದೀಗ ಚುನಾವಣಾ ಆಯೋಗದ ನಿರ್ಧಾರದ ನಂತರ ಹೊಸ ಚರ್ಚೆ ಆರಂಭವಾಗಿದೆ. ಶಿವಸೇನಾ ಭವನ ಸೇರಿದಂತೆ ರಾಜ್ಯಾದ್ಯಂತ ಪಕ್ಷದ ಕಚೇರಿಗಳು ಯಾರಿಗೆ ಸೇರಿದ್ದು ಎನ್ನುವ ಕುತೂಹಲ ಆರಂಭವಾಗಿದೆ. ಶಿವಸೇನೆಯ ಹೆಸರಿನಲ್ಲಿ ಠೇವಣಿ ಇಟ್ಟಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಪಕ್ಷದ ನಿಧಿ ಮತ್ತು ಆಸ್ತಿ ಯಾರಾ ಪಾಲಾಗಲಿದೆ? ಚುನಾವಣಾ ಆಯೋಗದ ಬಳಿ ಲಭ್ಯವಿರುವ ದಾಖಲೆಗಳ ಪ್ರಕಾರ, ಶಿವಸೇನೆ 191 ಕೋಟಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿದೆ.
ಇದಲ್ಲದೆ, ಮುಂಬೈನಲ್ಲಿ(Mubai) 280 ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ 82 ಕಚೇರಿಗಳನ್ನು ಹೊಂದಿದೆ. ಹಾಗೂ ದಾದರ್(Daadar)ನಲ್ಲಿರುವ ಶಿವಸೇನೆ ಕಟ್ಟಡವೂ ಉದ್ಧವ್ ಬಣದಿಂದ ಆಕ್ರಮಿಸಿಕೊಂಡಿದೆ. ಏಕನಾಥ್ ಶಿಂಧೆ ಹೆಸರಿನ ನಿಜವಾದ ಶಿವಸೇನೆ, ಯಾವ ಕಟ್ಟಡದಲ್ಲಿ ಸ್ಥಾನ ಪಡೆದುಕೊಳ್ಳಲಿದೆ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ. ಮುಂದಿನ ದಿನಗಳಲ್ಲಿ ಮುಂಬೈ ಸೇರಿದಂತೆ ಮಹಾರಾಷ್ಟ್ರ ಹಲವು ನಗರಗಳಲ್ಲಿ ಪಾಲಿಕೆ ಚುನಾವಣೆ ಇದೆ. ಇದಕ್ಕಾಗಿ ಹಣ ಅಗತ್ಯವಿರುತ್ತದೆ. ಆಗ ಶಿಂಧೆ ಅವರ ಶಿವಸೇನೆ ಈ ಹಣವನ್ನು ಬಳಸಿಕೊಳ್ಳಲಿದೆಯೇ ಇಲ್ಲವೇ ಎನ್ನುವ ಕುತೂಹಲವಿದೆ. ಅದಾಗ್ಯೂ ಹಳೆ ಶಿವಸೇನೆಯಿಂದ ಬಾಳಾಸಾಹೇಬರ ವಿಚಾರಗಳು ಮಾತ್ರ ಬೇಕು ಎಂದು ಸಿಎಂ ಏಕನಾಥ್ ಶಿಂಧೆ ಹೇಳುತ್ತಿದ್ದರೂ ಈಗಿರುವ ಸಂವಿಧಾನದ ಪ್ರಕಾರ ಪಕ್ಷ ವಹಿಸಿ ಖಜಾಂಚಿ ನೇಮಕವಾದ ಬಳಿಕ ಸಂಪೂರ್ಣ ಆಸ್ತಿ, ನಿಧಿ ಹೊಸ ಶಿವಸೇನೆ ಪಾಲಾಗಲಿದೆ.
ಶಿಂಧೆ ಅವರು ಪಕ್ಷದ ಆಸ್ತಿ ಮತ್ತು ನಿಧಿಯನ್ನು ತಮಗೆ ಬೇಕಾಗಿಲ್ಲ ಎಂದು ಹೇಳುತ್ತಿದ್ದಾರೆ, ಆದರೆ ಉದ್ಧವ್ ಠಾಕ್ರೆ ಗುಂಪಿನ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹಾಜರಾಗಿದ್ದ ವಕೀಲ ಕಪಿಲ್ ಸಿಬಲ್, ಶಿವಸೇನೆ ಕಚೇರಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದರು. ಚುನಾವಣಾ ಆಯೋಗದ ನಿರ್ಧಾರಕ್ಕೆ ತಡೆ ನೀಡದೇ ಇದ್ದರೆ, ಶಿಂಧೆ ಅವರ ಶಿವಸೇನೆ ಬ್ಯಾಂಕ್ ಖಾತೆಗಳನ್ನೂ ಕೂಡ ಪಡೆದುಕೊಳ್ಳಲಿದೆ. ಈಗ ಇದೆಲ್ಲವೂ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಲ್ಲಿ ನಿರ್ಧಾರವಾಗುವ ನಿರೀಕ್ಷೆಯಿದೆ. ಮುಂದಿನ ವಿಚಾರಣೆ ಮಾರ್ಚ್ 15ಕ್ಕೆ ನಿಗದಿಯಾಗಿದೆ.
ಇನ್ನು ರಾಜಕೀಯ ತಜ್ಞರ ಪ್ರಕಾರ ಶಿಂಧೆ ಬಣ ಇದೀಗ ಉದ್ಧವ್ ಬಣದ ಸಂಸದರು ಮತ್ತು ಶಾಸಕರ ಮೇಲೂ ಕಣ್ಣಿಟ್ಟಿದೆ. ಫೆಬ್ರವರಿ 27 ರಂದು ಪ್ರಾರಂಭವಾಗುವ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಪಕ್ಷದ ಎಲ್ಲಾ ಶಾಸಕರು ಮತ್ತು ಸಂಸದರಿಗೆ ವಿಪ್ ಜಾರಿ ಮಾಡಲಾಗುತ್ತದೆ. ಉದ್ಧವ್ ಠಾಕ್ರೆ ಅವರೊಂದಿಗೆ ಕೇವಲ 10 ಶಾಸಕರು ಮತ್ತು 2-3 ಸಂಸದರು ಮಾತ್ರ ಉಳಿದಿದ್ದಾರೆ, ಈ ವಿಪ್ ನಂತರ ಅವರು ಕೂಡ ಪಕ್ಷವನ್ನು ತೊರೆದು ಶಿಂಧೆ ಅವರ ನಿಜವಾದ ಶಿವಸೇನೆ ಸೇರಿಕೊಳ್ಳಬೇಕಾಗುತ್ತದೆ.