Home International ಈ ದೇಶದ ಜನರೇ ವಾಹನ ಚಾಲನೆಯಲ್ಲಿ ದಿ ಬೆಸ್ಟ್ ! ಭಾರತದ ಪರಿಸ್ಥಿತಿ ಏನು ಈ...

ಈ ದೇಶದ ಜನರೇ ವಾಹನ ಚಾಲನೆಯಲ್ಲಿ ದಿ ಬೆಸ್ಟ್ ! ಭಾರತದ ಪರಿಸ್ಥಿತಿ ಏನು ಈ ವಿಷಯದಲ್ಲಿ? ಇಲ್ಲಿದೆ ಅಚ್ಚರಿಯ ಸಂಗತಿ!

Hindu neighbor gifts plot of land

Hindu neighbour gifts land to Muslim journalist

Best driving: ವಿಶ್ವಾದ್ಯಂತ ವಾಹನ(vehicle)ಗಳ ಬಳಕೆಯ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ನೂತನ ವಾಹನಗಳೂ ಮಾರುಕಟ್ಟೆಗೆ ಎಂಟ್ರಿ ಕೊಡುತ್ತಿವೆ. ಅದರಂತೆ ಖರೀದಿದಾರರು ಮುನ್ನುಗ್ಗುತ್ತಿದ್ದಾರೆ. ಆದರೆ ವಾಹನ ಚಾಲನೆಯ ವಿಷಯದಲ್ಲಿ ಹಲವರು ಟ್ರಾಫಿಕ್ ನಿಯಮ (traffic rules) ಉಲ್ಲಂಘನೆ ಮಾಡುತ್ತಾರೆ. ಚಾಲನೆಯು ಅನಾಹುತಗಳಿಗೂ ಕಾರಣವಾಗುತ್ತದೆ. ಸದ್ಯ ವಿಮಾ ಕಂಪನಿ(insurence company)ಯೊಂದು ವಾಹನ ಚಾಲನೆಯ ಬಗ್ಗೆ ಸಮೀಕ್ಷೆ ನಡೆಸಿದ್ದು, ವರದಿಯಲ್ಲಿ ಭಾರತ(india) ಎಷ್ಟನೇ ಸ್ಥಾನ ಇದೆ ಗೊತ್ತಾ?

ವಿಮಾ ಕಂಪನಿಯು ಚಾಲನಾ ಪ್ರವೃತ್ತಿಯ ಕುರಿತು ವಿಶ್ವದ ಪ್ರಮುಖ 50 ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆಸಿದ್ದು, ಅತ್ಯುತ್ತಮ ಚಾಲನಾ ಪ್ರವೃತ್ತಿ(best driving) ಹೊಂದಿರುವ ರಾಷ್ಟ್ರಗಳು ಮತ್ತು ಅಪಾಯಕಾರಿ ಅಥವಾ ಅತಿರೇಕದ ಚಾಲನಾ ಪ್ರವೃತ್ತಿ ಹೊಂದಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಿದೆ.

ಅಪಾಯಕಾರಿ ಚಾಲನಾ ಪ್ರವೃತ್ತಿ(worst driving) ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಥೈಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಪೆರು ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಲೆಬನಾನ್ ಮತ್ತು ಭಾರತವು ನಾಲ್ಕನೇ ಸ್ಥಾನದಲ್ಲಿದೆ.

ಅತ್ಯುತ್ತಮ ಚಾಲನಾ ಪ್ರವೃತ್ತಿ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಜಪಾನ್(Japan) ಮೊದಲ ಸ್ಥಾನದಲ್ಲಿದೆ. ಹಾಗೆಯೇ ಎರಡನೇ ಸ್ಥಾನದಲ್ಲಿ ನೆದರ್ಲ್ಯಾಂಡ್ ಇದೆ. ನಾರ್ವೆ ಮೂರನೇ ಸ್ಥಾನದಲ್ಲಿದ್ದು, ನಾಲ್ಕನೇ ಸ್ಥಾನದಲ್ಲಿ ಸ್ಕ್ಯಾಂಡಿನೇವಿಯಾ ಮತ್ತು ಸ್ವಿಡನ್ ಐದನೇ ಸ್ಥಾನದಲ್ಲಿದೆ.

ಇತ್ತೀಚೆಗೆ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಕಾರಣ ಅಪಾಯಕಾರಿ ಚಾಲನಾ ಪ್ರವೃತ್ತಿ. ಇದನ್ನು ತಗ್ಗಿಸಲು ಚಾಲಕರಿಗೆ, ನಿಯಮ ಉಲ್ಲಂಘಿಸಿದರೆ, ದುಬಾರಿ ದಂಡಗಳನ್ನು ವಿಧಿಸಲಾಗುತ್ತಿದೆ. ಜೊತೆಗೆ ಕೇಂದ್ರ ಸಾರಿಗೆ ಇಲಾಖೆಯು ಸುರಕ್ಷಾ ಚಾಲನಾ ಪ್ರವೃತ್ತಿಯನ್ನು ಅಳವಡಿಸಿಕೊಳ್ಳುವಂತೆ ಹಲವಾರು ಅಭಿಯಾನಗಳನ್ನು ನಡೆಸುತ್ತಿದೆ.