Yogi Adityanath : ಮುಖ್ಯಮಂತ್ರಿ ಬುಲ್ಡೋಜರ್ ಬಾಬಾ ಆದಿತ್ಯನಾಥ್‌ ಅಬ್ಬರಕ್ಕೆ ಸ್ತಬ್ಧಗೊಂಡ ಉತ್ತರ ಪ್ರದೇಶ ವಿಧಾನಸಭೆ !

Share the Article

Yogi Adityanath : ಉಗ್ರ ಪ್ರತಾಪಿ, ಆದರೆ ಸದಾ ನಗುಮೊಖದಲ್ಲಿಯೇ ಕಾಣುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ( Yogi Adityanath) ಶುಕ್ರವಾರ ಉಗ್ರಸ್ವರೂಪಿಯಾಗಿದ್ದರು. ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಅವರ ಟೀಕೆ ಹಾಗೂ ಆರೋಪಗಳಿಗೆ, ಉತ್ತರಪ್ರದೇಶ ವಿಧಾನಸಭೆಯ ಅಧಿವೇಶನದಲ್ಲಿ ಮಾತನಾಡಿದ ಅವರು ಉಗ್ರ ರೂಪದಲ್ಲಿ ಉತ್ತರ ನೀಡಿದರು.

2005 ರಲ್ಲಿ ಬಹುಜನ ಸಮಾಜವಾದಿ ಪಕ್ಷದ ಶಾಸಕನ ಕೊಲೆ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಯಾಗಿದ್ದ ಉಮೇಶ್‌ ಪಾಲ್‌ರನ್ನು ಇತ್ತೀಚೆಗೆ ಕೊಲೆ ಮಾಡಲಾಗಿತ್ತು. ಈ ಕುರಿತು ವಿಧಾನಸಭೆಯಲ್ಲಿ ಸರ್ಕಾರವನ್ನು ಟೀಕಿಸಿದ ಅಖಿಲೇಶ್‌ ಯಾದವ್‌ಗೆ ಅತ್ಯಂತ ಉಗ್ರ ರೀತಿಯಲ್ಲಿಯೇ ಉತ್ತರ ನೀಡಿದ್ದಾರೆ ಯೋಗಿ ಆದಿತ್ಯನಾಥ್‌.

‘ಮಾಫಿಯೋಂ ಕೋ ಮಿಟ್ಟಿ ಮೇ ಮಲಾ ದೇಂಗೆ. (ಮಾಫಿಯಾದವರನ್ನು ಮಣ್ಣಲ್ಲಿ ಹೂತು ಹಾಕ್ತೇನೆ) ಎಂದು ಅವರು ಅಬ್ಬರಿಸಿದ್ದಾರೆ. ಇದೇ ವೇಳೆ ಅಂಡರ್‌ವರ್ಲ್ಡ್‌ ಮತ್ತು ಮಾಫಿಯಾದ ವಿರುದ್ಧ ತಮ್ಮ ಸರ್ಕಾರ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸುತ್ತಿದೆ ಎಂದು ಪುನರುಚ್ಛರಿಸಿದರು. ಇನ್ನೊಂದೆಡೆ ಸಮಾಜವಾದಿ ಪಕ್ಷ (SP) ಅಪರಾಧಿಗಳು, ರೌಡಿಗಳು ಮತ್ತು ಕ್ರಿಮಿನಲ್‌ ಹಿನ್ನೆಲೆ ಹೊಂದಿರುವವರನ್ನು ಪೋಷಣೆ ಮಾಡುವಲ್ಲಿ ನಿರತವಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಸರ್ಕಾರ ಶೂನ್ಯ ಸಹಿಷ್ಣುತೆಯ ನೀತಿಯ ಆಧಾರದ ಮೇಲೆ ಕೆಲಸ ಮಾಡುತ್ತಿದೆ. ಆದರೆ, ಈ ಘಟನೆಯಲ್ಲಿ ಭಾಗಿಯಾಗಿರುವ ಕ್ರಿಮಿನಲ್‌ ವ್ಯಕ್ತಿಯನ್ನು ಸಮಾಜವಾದಿ ಪಕ್ಷವೇ ಪೋಷಣೆ ಮಾಡುತ್ತಿದೆ. ಅವರನ್ನು ಸಂಸದರನ್ನಾಗಿ ಮಾಡಿದ್ದು ಎಸ್‌ಪಿ. ನೀವೇನೇ ಮಾಡಿಕೊಳ್ಳಿ: ಆದ್ರೆ, ಈ ಮಾಫಿಯಾದವರನ್ನು ನಾವು ಬಿಡೋ ಮಾತೇ ಇಲ್ಲ ಎಂದು ಬಾಬಾ ಅಬ್ಬರಿಸಿದ್ದಾರೆ.

ಈ ಕೃತ್ಯ ಎಸಗಿದ ಮಾಫಿಯಾ ಇಂದು ರಾಜ್ಯದಿಂದ ತಲೆಮರೆಸಿಕೊಂಡಿದೆ, ಮಾಫಿಯಾ ಯಾರೇ ಇರಲಿ, ರಾಜ್ಯದಲ್ಲಿ ‘ಮಾಫಿಯಾ ರಾಜ್’ ನಡೆಯಲು ನಮ್ಮ ಸರ್ಕಾರ ಬಿಡುವುದಿಲ್ಲ ಎಂದು ಯುಪಿ ಸಿಎಂ ಹೇಳಿದ್ದಾರೆ.

Leave A Reply