River Indie : ಅತೀ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ ರಿವರ್‌ ಇಂಡಿ ಇವಿ ಸ್ಕೂಟರ್!!‌ ಸ್ಟೈಲ್‌, ಮೈಲೇಜ್‌ ಅತ್ಯುತ್ತಮ

River Indie : ಇಂದಿನ ದಿನಗಳಲ್ಲಿ ಓಡಾಟ ನಡೆಸಲು ವಾಹನಗಳು ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಕೂಡ ವಾಹನಗಳು ಇರೋದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಪ್ರೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಹೆಚ್ಚಳ ಕಂಡುಬರುತ್ತಿರುವ ಹಿನ್ನೆಲೆ ಹೆಚ್ಚಿನವರು ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡುತ್ತಿದ್ದಾರೆ. ಇದೀಗ, ವಾಹನ ಪ್ರಿಯರಿಗೆ ಗುಡ್ ನ್ಯೂಸ್!! ಹೊಸ ವೈಶಿಷ್ಟ್ಯದ ಮೂಲಕ ನಿಮ್ಮ ಚಿತ್ತ ಸೆಳೆಯಲು ಮಾರುಕಟ್ಟೆಗೆ ಲಗ್ಗೆ ಇಡಲು ಬರುತ್ತಿದೆ ಬಹು ನಿರೀಕ್ಷಿತ ಇಂಡಿ ಎಲೆಕ್ಟ್ರಿಕ್ ಸ್ಕೂಟರ್.

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿಯಾಗಿರುವ ರಿವರ್ ತನ್ನ ಬಹುನೀರಿಕ್ಷಿತ ಇಂಡಿ ಎಲೆಕ್ಟ್ರಿಕ್ ಸ್ಕೂಟರ್(River Indie electric scooter) ನವೀನ ಮಾದರಿಯ ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಲು ರೆಡಿಯಾಗಿದೆ. ಈ ಇವಿ ಸ್ಕೂಟರ್ ವಿಶೇಷತೆ ಏನು ಅನ್ನುವವರಿಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

ಹೊಸ ಇವಿ ಸ್ಕೂಟರ್ ಮಾದರಿಯು 8.98 ಹಾರ್ಸ್ ಪವರ್ ಉತ್ಪಾದನೆಯೊಂದಿಗೆ ಪ್ರತಿ ಗಂಟೆಗೆ ಗರಿಷ್ಠ 90 ಕಿ.ಮೀ ಟಾಪ್ ಸ್ಪೀಡ್ ಒಳಗೊಂಡಿದೆ.14 ಇಂಚಿನ ಅಲಾಯ್ ವ್ಹೀಲ್ ಜೊತೆಗೆ ಎರಡು ಬದಿಯಲ್ಲೂ ಡಿಸ್ಕ್ ಬ್ರೇಕ್ ವಿಶೇಷತೆ ಒಳಗೊಂಡಿದೆ. ರಿವರ್ ಕಂಪನಿಯು ಇಂಡಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದು, ಪ್ರತಿ ಚಾರ್ಜ್ ಗೆ ಗರಿಷ್ಠ 120 ಕಿ.ಮೀ ಮೈಲೇಜ್ ಒದಗಿಸುತ್ತದೆ. ಇಂಡಿ ಇವಿ ಸ್ಕೂಟರ್ ನಲ್ಲಿರುವ ಬ್ಯಾಟರಿ ಪ್ಯಾಕ್ ಗರಿಷ್ಠ 5 ಗಂಟೆಗಳಲ್ಲಿ ಶೇ. 80 ರಷ್ಟು ಚಾರ್ಜ್ ಆಗುವ ಸಾಮರ್ಥ್ಯ ಹೊಂದಿದೆ. ಗರಿಷ್ಠ 8 ಗಂಟೆಗಳ ಅವಧಿಯಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ. ಹೊಸ ಇವಿ ಸ್ಕೂಟರ್ ಮಾದರಿಯ ರಿವರ್ ಕಂಪನಿಯು IP67 ಮಾನದಂಡ ಹೊಂದಿರುವ 4kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗುತ್ತದೆ. ಇನ್ನು ಈ ಹೊಸ ಮಾದರಿಯ ಬೆಲೆ ಎಷ್ಟು ಎಂದು ಗಮನಿಸಿದರೆ, ಈ ಸ್ಕೂಟರ್ ನ ಬೆಂಗಳೂರು ಎಕ್ಸ್ ಶೋರೂಂ ಪ್ರಕಾರ ರೂ.1.25 ಲಕ್ಷ ಬೆಲೆಯನ್ನು ಒಳಗೊಂಡಿದೆ.

ಹೊಸ ಸ್ಕೂಟರಿನಲ್ಲಿ ಪುಟ್ ಮೇಲ್ಭಾಗ ಹಾಗೂ ಅಂಡರ್ ಸೀಟ್ ನಲ್ಲಿ 55 ಲೀಟರ್ ಸಾಮರ್ಥ್ಯದ ಸ್ಟೊರೇಜ್ ಸ್ಪೇಸ್ ಒದಗಿಸಲಾಗಿದೆ. ಕ್ರ್ಯಾಶ್ ಗಾರ್ಡ್ ವಿಶೇಷತೆ ಸ್ಕೂಟರ್ ಇದರಲ್ಲಿ ಕಂಪನಿಯು ಐದು ವರ್ಷಗಳ ವಾರಂಟಿ ಘೋಷಣೆ ಮಾಡಿದ್ದು, ವಿವಿಧ ಮೂರು ಬಣ್ಣಗಳಲ್ಲಿ ಹೊಸ ಸ್ಕೂಟರ್ ಆಯ್ಕೆ ಮಾಡಬಹುದು. ಹೊಸ ಸ್ಕೂಟರಿನಲ್ಲಿ ರಿವರ್ ಕಂಪನಿಯು ಎಲ್ ಸಿಡಿ ಸ್ಕ್ರೀನ್ ಜೊತೆಗೆ ಕನೆಕ್ಟೆಡ್ ಫೀಚರ್ಸ್ ನೀಡಲಾಗಿದೆ. ಹೊಸ ಇವಿ ಸ್ಕೂಟರಿನಲ್ಲಿ ಗ್ರಾಹಕರ ಬೇಡಿಕೆಯಂತೆ ಇಕೋ, ರೈಡ್ ಜೊತೆಗೆ ರಶ್ ಎಂಬ ಮೂರು ರೈಡಿಂಗ್ ಮೋಡ್ ಜೋಡಣೆ ಮಾಡಲಾಗಿದ್ದು, ಇಕೋ ಮೋಡ್ ನಲ್ಲಿ ಗರಿಷ್ಠ ಮೈಲೇಜ್ ಅನ್ನು ಒಳಗೊಂಡಿದೆ.ಇದರ ಜೊತೆಗೆ ಅನೇಕ ಸುರಕ್ಷಾ ವಿಶೇಷತೆಯನ್ನು ಹೊಂದಿದೆ.

Leave A Reply

Your email address will not be published.