Home News ನವೀನ ವೈಶಿಷ್ಟ್ಯಗಳೊಂದಿಗೆ ಮುಂದೆ ಬರಲಿದೆ ಟೊಯೋಟಾ, ಇನ್ನೋವಾ ಕ್ರಿಸ್ಟಾ ಸೇರಿ ಹಲವು ದಿ ಬೆಸ್ಟ್ ಕಾರುಗಳು!!!

ನವೀನ ವೈಶಿಷ್ಟ್ಯಗಳೊಂದಿಗೆ ಮುಂದೆ ಬರಲಿದೆ ಟೊಯೋಟಾ, ಇನ್ನೋವಾ ಕ್ರಿಸ್ಟಾ ಸೇರಿ ಹಲವು ದಿ ಬೆಸ್ಟ್ ಕಾರುಗಳು!!!

upcoming best cars

Hindu neighbor gifts plot of land

Hindu neighbour gifts land to Muslim journalist

upcomming best cars : ಭಾರತದ ಮಾರುಕಟ್ಟೆಯಲ್ಲಿ ಹೊಸ ಹೊಸ ವಾಹನಗಳು, ಗ್ಯಾಜೆಟ್ ಗಳು ಲಗ್ಗೆ ಇಡುತ್ತಿವೆ. ಗ್ರಾಹಕರನ್ನು ಆಕರ್ಷಿಸಲು ಪೈಪೋಟಿ ನಡೆಸುತ್ತಿವೆ. ಹಾಗೆಯೇ ಹಲವು ಜನಪ್ರಿಯ ಕಾರು ಕಂಪನಿಗಳು ನೂತನ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಈಗಾಗಲೇ ಟೊಯೊಟಾ(Toyota), ಮಾರುತಿ ಸುಜುಕಿ(maruti suzuki), ಟಾಟಾ(tata) ಸೇರಿದಂತೆ ಹಲವು ಪ್ರಮುಖ ಕಂಪನಿಯ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸದ್ಯ ಮುಂಬರಲಿರುವ ಬೆಸ್ಟ್ ಕಾರುಗಳ ಲಿಸ್ಟ್(upcomming best cars) ಇಲ್ಲಿದೆ.

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova crysta): ‘ಟೊಯೊಟಾ’ ಆಕರ್ಷಕವಾದ ಹಾಗೂ ಅದ್ಭುತ ವೈಶಿಷ್ಟ್ಯವಿರುವ ಇನ್ನೋವಾ ಕ್ರಿಸ್ಟಾವನ್ನು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದು ನಾಲ್ಕು ರೂಪಾಂತರಗಳಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಿದೆ. ಇದರಲ್ಲಿ, ಡೀಸೆಲ್ ಎಂಜಿನ್ ಆಯ್ಕೆಯನ್ನು ಮಾತ್ರ ಹೊಂದಿರಲಿದ್ದು, ಕಂಪನಿ ಈ ಎಂಪಿವಿಯನ್ನು ಇನ್ನೋವಾ ಹೈಕ್ರಾಸ್ ನೊಂದಿಗೆ ಮಾರಾಟ ಮಾಡಲಿದ್ದೇವೆ ಎಂದು ತಿಳಿಸಿದೆ. ಈ ಕಾರು 2.4 ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿದ್ದು, 150 PS ಗರಿಷ್ಠ ಪವರ್ ಹಾಗೂ 343 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಯನ್ನು ಹೊಂದಿರಲಿದೆ. ಅಲ್ಲದೆ, 16 ಇಂಚಿನ ಸ್ಟೀಲ್ ಅಲಾಯ್ ವೀಲ್ಸ್, ಏರ್ ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBS (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್) ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

ಮಾರುತಿ ಸುಜುಕಿ 7 ಆಸನಗಳ ಗ್ರ್ಯಾಂಡ್ ವಿಟಾರಾ (Maruti suzuki 7 seater grand Vitara): 7 ಆಸನಗಳ ಗ್ರ್ಯಾಂಡ್ ವಿಟಾರಾ, ಹಿಂದಿನ ಮಾದರಿ ಹೊಂದಿರುವ ಎಂಜಿನ್ ಅನ್ನೇ ಹೊಂದಿರಲಿದೆ. ಹಾಗೆಯೇ ಇದು ದೊಡ್ಡದಾದ ಸನ್‌ರೂಫ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ (Hyundai alcazar facelift): ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಹುಂಡೈ ಅಲ್ಕಾಜರ್ ಫೇಸ್‌ಲಿಫ್ಟ್ ಆಕರ್ಷಕ ವಿನ್ಯಾಸ ಹೊಂದಿದ್ದು, ಈ ಹುಂಡೈ ಅಲ್ಕಾಜರ್ ಹೊರ ಮತ್ತು ಒಳಭಾಗದ ವಿನ್ಯಾಸದಲ್ಲಿ, ಎಂಜಿನ್ ಹಾಗೂ ವೈಶಿಷ್ಟ್ಯಗಳಲ್ಲಿ ನವೀಕರಣಗಳನ್ನು ಪಡೆದುಕೊಳ್ಳುತ್ತಿದೆ. ನೂತನ ಕಾರು ದೊಡ್ಡದಾದ ಸನ್ ರೂಫ್, ವೈರ್ ಲೆಸ್ ಚಾರ್ಜಿಂಗ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕನ್ಸೋಲ್ ಅನ್ನು ಹೊಂದಿದೆ. ಈ ಕಾರು ರೂ.15-20 ಲಕ್ಷ ಬೆಲೆಯೊಳಗೆ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ.

ಮಾರುತಿ ಸುಜುಕಿ ಇನ್ನೋವಾ ಆಧಾರಿತ ಎಂಪಿವಿ: ಮಾರುತಿ ಸುಜುಕಿ ಟೊಯೊಟಾ ಇನ್ನೋವಾ ಹೈಕ್ರಾಸ್ ಆಧಾರಿತ ಹೊಸ ಎಂಪಿವಿಯನ್ನು ತಯಾರಿಸುವ ಕಾರ್ಯ ನಡೆಯುತ್ತಿದ್ದು, ಮುಂಬರುಲಿರುವ ಈ ಹೊಸ ಕಾರು, ಇನ್ನೋವಾ ಹೊಂದಿರುವ ರೀತಿಯಲ್ಲಿ ಎಂಜಿನ್ ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳನ್ನು ಪಡೆದಿರಲಿದೆ. ಸುರಕ್ಷತೆಯ ದೃಷ್ಟಿಯಿಂದ ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್) ತಂತ್ರಜ್ಞಾನವನ್ನು ಪಡೆದಿರುತ್ತದೆ.

ಫೋರ್ಸ್ ಗೂರ್ಖಾ 5 ಡೋರ್(Force Gurkha five door): ಇದು ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ 3 ಡೋರ್ ಗೂರ್ಖಾದ ಪ್ಲಾಟ್‌ಫಾರ್ಮ್‌ ಆಧಾರಿತವಾಗಿರಲಿದೆ. ಆದರೆ, ಸ್ವಲ್ಲ ಉದ್ದವಿರಲಿದೆ. ವೈಶಿಷ್ಟ್ಯದಲ್ಲಿ ಹೆಚ್ಚು ಹಿಂದಿನ ಮಾದರಿಗೆ ಹೋಲಿಕೆಯಾಗುತ್ತದೆ. ಈ ಕಾರು 2.6 ಲೀಟರ್ ಡಿಸೇಲ್ ಎಂಜಿನ್ ಜೊತೆಗೆ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಖರೀದಿಗೆ ಲಭ್ಯವಾಗಲಿದೆ.

ಟಾಟಾ Curvv (Tata curvv): ಸದ್ಯ ಟಾಟಾ Curvv ಮುಂದಿನ ವರ್ಷ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ಪೆಟ್ರೋಲ್ ಹಾಗೂ ಡಿಸೇಲ್ ಎಂಜಿನ್ ಆಯ್ಕೆಯಲ್ಲಿ ಗ್ರಾಹಕರಿಗೆ ಖರೀದಿಗೆ ಲಭ್ಯವಾಗಲಿದೆ. ಈ ಕಾರು ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್ ಕಾರುಗಳಿಗೆ ಭಾರೀ ಪೈಪೋಟಿ ನೀಡಲಿದೆ. ಸದ್ಯ ಈ ಕಾರುಗಳು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಗ್ರಾಹಕರನ್ನು ಆಕರ್ಷಿಸಲಿದೆ.