Under Water Film Shot : ನೀರಿನ ಅಡಿಯಲ್ಲಿ ಚಲನಚಿತ್ರಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ? ನಾವು ನೋಡುತ್ತಿರುವುದು ಎಷ್ಟು ನಿಜ? ಇಲ್ಲಿದೆ ಇದಕ್ಕೆ ಉತ್ತರ

Under Water Film Shot : ಸಿನಿಮಾ ಜಗತ್ತು ಸಾಮಾನ್ಯ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಹಾಗೆನೇ ಸಿನಿಮಾದಲ್ಲಿ ಕಂಡು ಬರುವ ಸಾಹಸ ದೃಶ್ಯಗಳು ನಮ್ಮನ್ನು ರೋಮಾಂಚನಗೊಳಿಸುತ್ತವೆ. ವಿಶೇಷವಾಗಿ ಅವುಗಳನ್ನು ನೀರಿನ ಅಡಿಯಲ್ಲಿ ಚಿತ್ರೀಕರಣ ಮಾಡುವುದು. ಬಾಲಿವುಡ್‌ನಲ್ಲಿ ಟೆರರ್‌ನಿಂದ ಬ್ಲೂವರೆಗೆ ಮತ್ತು ಹಾಲಿವುಡ್‌ನಲ್ಲಿ ಟೈಟಾನಿಕ್‌ನಿಂದ ಪಿರಾನ್ಹಾ ಮತ್ತು ಅವತಾರ್-2 ವರೆಗೆ, ನೀರೊಳಗಿನ ಸಾಹಸಗಳು ಮತ್ತು ಸಾಹಸ ದೃಶ್ಯಗಳನ್ನು ನೋಡುವಾಗ, ಅವುಗಳನ್ನು ಹೇಗೆ ಚಿತ್ರೀಕರಿಸಲಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇರಬಹುದು. ಈ ಎಲ್ಲಾ ದೃಶ್ಯಗಳನ್ನು ನದಿಗಳಲ್ಲಿ ಅಥವಾ ಸಮುದ್ರದಲ್ಲಿ (Under Water Film Shot) ಚಿತ್ರೀಕರಿಸಲಾಗಿದೆಯೇ? ಇದಕ್ಕೆಲ್ಲ ಉತ್ತಮ ಈ ಕೆಳಗೆ ನೀಡಲಾಗಿದೆ.

ಚಲನಚಿತ್ರಗಳ ನೀರೊಳಗಿನ ದೃಶ್ಯಗಳನ್ನು ನದಿ ಅಥವಾ ಸಮುದ್ರದಲ್ಲಿ ಮಾತ್ರ ಚಿತ್ರೀಕರಿಸಬೇಕು ಎಂದು ಅಗತ್ಯವಿಲ್ಲ. ಇದು ಆಧುನಿಕ ಯುಗ. ತಂತ್ರಜ್ಞಾನದಲ್ಲಿ ಮುಂದುವರಿದಿದೆ. ಹಾಗಾಗಿ ಅಂತಹ ಹಲವು ಸ್ಟುಡಿಯೋಗಳು ಜಗತ್ತಿನಲ್ಲಿ ಇವೆ. ವಿಶ್ವದ ಅತ್ಯಂತ ಆಧುನಿಕ ನೀರೊಳಗಿನ ಚಲನಚಿತ್ರ ಸ್ಟುಡಿಯೋ ಬೆಲ್ಜಿಯಂನ ವೆಲ್ಬೋಲ್ಡೆಯಲ್ಲಿದೆ. ಹೆಸರು – ಲೈಟ್ಸ್ ಸ್ಟುಡಿಯೋ. ಇದನ್ನು ಕರ್ತೃ – ವಿಮ್ ಮೈಕೆಲ್ಸ್. ಇವರು ಸ್ವತಃ ಸಿನಿಮಾಟೋಗ್ರಾಫರ್ ಮತ್ತು ಡೈವರ್.

ವಿಮ್ ಅವರು ಹೇಳುವ ಪ್ರಕಾರ, “ನಾನು ನೀರಿನಲ್ಲಿ ಸ್ಪೆಷಲ್ ಎಫೆಕ್ಟ್‌ಗಳಿಗಾಗಿ ಅನೇಕ ಬಾರಿ ಕಾಯುತ್ತಿದ್ದೆ. ಯಾವಾಗ ಅಲೆಗಳು ಏಳುತ್ತವೆ ಎಂಬಂತೆ. ಮತ್ತು 50 ಕ್ಕೂ ಹೆಚ್ಚು ಸಿಬ್ಬಂದಿ ನನ್ನೊಂದಿಗೆ ಕಾಯುತ್ತಿದ್ದರು. ಇದು ಸರಿಯಾಗುತ್ತಿಲ್ಲ ಎಂದು ನನ್ನ ಮನಸ್ಸಿಗೆ ಅನಿಸಿತು. ನಂತರ ನಾನು ಇದರ ಸುಧಾರಣೆ ಅತ್ಯಗತ್ಯ ಎಂದು ಭಾವಿಸಿದೆ. ಹಾಗಾಗಿ ಈ ಆಲೋಚನೆಗಳ ಜೊತೆಗೆ ಲೈಟ್ಸ್‌ ಸ್ಟುಡಿಯೋ ಪ್ರಾರಂಭಗೊಂಡಿತು. ಈ ಸ್ಟುಡಿಯೋ 10 ಮೀಟರ್ ಆಳದ ನೀರು ಮತ್ತು ಅನೇಕ ವಿಶೇಷ ಪರಿಣಾಮಗಳನ್ನು ಹೊಂದಿದೆ” ಎಂದು ಹೇಳುತ್ತಾರೆ.

ನೀರೊಳಗಿನ ಸ್ಟುಡಿಯೋದಲ್ಲಿ ವಿಶೇಷ ದೃಶ್ಯಗಳನ್ನು ಸೃಷ್ಟಿಸಬಹುದು. ಸಮುದ್ರದಲ್ಲಿ ಚಂಡಮಾರುತ ಮತ್ತು ಸುನಾಮಿಯ ದೃಶ್ಯ ಉಂಟು ಮಾಡಬಹುದು. ಒಂದು ಮೀಟರ್ ಎತ್ತರದ ಅಲೆಗಳನ್ನು ಎಬ್ಬಿಸಬಹುದು, ಮಳೆಯನ್ನೂ ಮಾಡಬಹುದು. ನಿಜವಾದ ಸ್ಥಳದಲ್ಲಿ ಅಲೆಗಳನ್ನು ಎದುರಿಸುವುದು ಸುಲಭವಲ್ಲ ಎಂದು ನಟರು ಹೇಳುತ್ತಾರೆ. ಉಸಿರಾಡಲು ಪ್ರಯತ್ನಿಸುವ ಮಧ್ಯೆ, ಅಂತಹ ಅಲೆಗಳು ಜೀವಕ್ಕೆ ಅಪಾಯವನ್ನುಂಟುಮಾಡಬಹುದು. ಅಲ್ಲಿ ಈಜುವುದು ಕೂಡ ಅಪಾಯಕಾರಿ. ಆದರೆ ಸ್ಟುಡಿಯೋದಲ್ಲಿ ಈ ರೀತಿಯ ಭಯ ಇರುವುದಿಲ್ಲ.

ಇದನ್ನೂ ಓದಿ : SBI : ಎಸ್‌ಬಿಐ ನಿಂದ ಉದ್ಯೋಗವಕಾಶ!

ನೀರೊಳಗಿನ ಸ್ಟುಡಿಯೋದಲ್ಲಿ ಭದ್ರತೆಗಾಗಿ ಅನೇಕ ತಜ್ಞರು ಇರುತ್ತಾರೆ. ಕೊಳದ ನೀರನ್ನು ಬೆಚ್ಚಗಾಗಲು ಸೌರ ಫಲಕಗಳು ಮತ್ತು ಶಾಖ ಪಂಪ್ ಅನ್ನು ಬಳಸಲಾಗುತ್ತದೆ. ನಟರನ್ನು ಮೊದಲು ಎಲ್ಲಾ ಸಿದ್ಧತೆಗಳೊಂದಿದೆ ತಯಾರು ಮಾಡಲಾಗುತ್ತದೆ ಎನ್ನುತ್ತಾರೆ ಡೈವರ್ ಕ್ರಿಸ್ಟೋಫ್ ಕೂಮನ್. ನಟರಿಗೆ, ನೀರಿನಲ್ಲಿ ಉಸಿರನ್ನು ಹಿಡಿದಿಟ್ಟುಕೊಳ್ಳುವುದು, ನಿಯಂತ್ರಕದಿಂದ ಉಸಿರಾಡುವುದು, ಸ್ಕೂಬಾ ಡೈವಿಂಗ್ ಮೂಲಭೂತ ತರಬೇತಿ ನೀಡಲಾಗುತ್ತದೆ ಎಂದು ಅವರು ಹೇಳುತ್ತಾರೆ. ಹೀಗೆ ಮಾಡುವುದರಿಂದ ಸಮಯವೂ ಉಳಿತಾಯವಾಗುತ್ತದೆ. ಹೀಗಾಗಿ ಸ್ಟುಡಿಯೋದಲ್ಲಿಯೇ ಚಿತ್ರಗಳು ತಯಾರಾಗುತ್ತಿದ್ದು, ಚಿತ್ರ ಸಾಗರ, ಸಮುದ್ರದಲ್ಲಿ ತಯಾರಾಗೋದಿಲ್ಲ, ಒಂದು ಸಣ್ಣ ಸ್ಟುಡಿಯೋದಲ್ಲಿ ಶೂಟ್‌ ಮಾಡಲಾಗುತ್ತದೆ ಎಂಬ ಅರಿವು ಜನರಿಗೆ ಗೊತ್ತೇ ಆಗುವುದಿಲ್ಲ. ಅಷ್ಟೊಂದು ನೈಜತೆಯಿಂದ ಕೂಡಿರುತ್ತೆ ಇದರ ಚಿತ್ರೀಕರಣ ಎನ್ನಬಹುದು.

Leave A Reply

Your email address will not be published.