Ameesha Patel : ಬಾಲಿವುಡ್ ನಟಿ ಅಮಿಷಾ ಪಟೇಲ್ ಸಿನಿ ಕೆರಿಯರ್ ಕೆಳಗಿಳಿಯಲು ಕಾರಣವೇನು? ಬ್ಲಾಕ್‌ಬಸ್ಟರ್ ಸಿನಿಮಾ ಕೊಟ್ಟ ಈ ನಟಿ ಈಗ ಮಾಡುತ್ತಿರುವುದೇನು?
Ameesha Patel : ನಾವು ಇಂದು ಇಲ್ಲಿ ನಿಮಗೆ ಒಂದು ನಟಿಯ ಬಗ್ಗೆ ಹೇಳಲಿಚ್ಛಿಸಲಿದ್ದೇವೆ. ಈಕೆ ತನ್ನ ನಟನಾ ಕೆರಿಯರ್‌ನಲ್ಲಿ ಮಾಡಿದ ಮೊದಲ ಸಿನಿಮಾವೇ ಬ್ಲಾಕ್‌ಬ್ಲಸ್ಟರ್ ಆಗಿತ್ತು. ಅನಂತರ ಆಕೆ ಕೈಗೆತ್ತಿಕೊಂಡ ಸಿನಿಮಾ ಕೂಡಾ ಮೊದಲ ಸಿನಿಮಾಗಿಂತ ಸೂಪರ್ ಡೂಪರ್ ಹಿಟ್. ಈಕೆ ತನ್ನ ಸಿನಿ ಕೆರಿಯರ್‌ನಲ್ಲಿ ಅಂದರೆ ಸುಮಾರು ಇಪ್ಪತ್ತು ವರ್ಷದಲ್ಲಿ ನಲುವತ್ತು ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಆದರೆ ಈಕೆ ಗಮನ ಸೆಳೆಯುವುದು ಕೇವಲ ಈಕೆ ಮಾಡಿದ ಬೆರಳೆಣಿಕೆಯ ಸಿನಿಮಾದಿಂದ. ಈಕೆ ತನ್ನ ಕೆಲಸದಿಂದ ಹೆಚ್ಚಾಗಿ ತನ್ನ ನಿಜ ಜೀವನದ ವಿಷಯದಲ್ಲೇ ಬಹಳ ಪ್ರಚಲಿತದಲ್ಲಿದ್ದಾಳೆ. ಹೌದು, ನಾವು ಇಲ್ಲಿ ಮಾತಾಡ್ತ ಇರೋ ನಟಿಯ ಹೆಸರೇ ಅಮಿಷಾ ಪಟೇಲ್ (Ameesha Patel). ಬಾಲಿವುಡ್ ಚಿತ್ರರಂಗ ಕಂಡ ಒಂದು ಕಾಲದ ಫೇಮಸ್ ನಟಿ ಎಂದರೆ ತಪ್ಪಾಗಲಾರದು. ಇಂದು ನಾವು ಇಲ್ಲಿ ಈಕೆಗೆ ಮೊದಲ ಸಿನಿಮಾ ಹೇಗೆ ದೊರೆಯಿತು, ಇಷ್ಟು ವರ್ಷ ಸಿನಿಮಾ ರಂಗದಲ್ಲಿದ್ದರೂ ಕೂಡಾ ಯಾಕೆ ಸಫಲತೆಯನ್ನು ಕಾಣಲಿಲ್ಲ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಮಿಷಾ ಪಟೇಲ್ ಜನ್ಮ 9th June 1975 ರಂದು ಗುಜರಾತ್‌ನಲ್ಲಿ ಆಗಿತ್ತು. ಈಕೆಯ ಕುಟುಂಬ ಮುಂಬಯಿನಲ್ಲಿ ಸೆಟಲ್ ಆಗಿದ್ದಾರೆ. ಅಮಿಷಾ ಪಟೇಲ್ ಅವರ ತಂದೆ ಹೆಸರು ಅಮಿತ್. ಬ್ಯುಸಿನೆಸ್‌ಮೆನ್ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಗೃಹಿಣಿ. ಅಮಿಷಾ ಪಟೇಲ್ ವಿದ್ಯಾಭ್ಯಾಸವೆಲ್ಲ ಮುಂಬಯಿಯಲ್ಲೇ ನಡೆಯಿತು. ಹಾಗೂ ಈಕೆ ತನ್ನ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಯು.ಎಸ್.ಗೆ ಹೋಗಿದ್ದರು. ಬಯೋಜೆನೆಟಿಕ್ ಇನ್ ಇಂಜಿನಿಯರಿಂಗ್, ಹಾಗೂ ಎಕಾನಮಿಕ್ಸ್‌ನ ವಿದ್ಯಾಭ್ಯಾಸವನ್ನು ಕಂಪ್ಲೀಟ್ ಮಾಡಿದರು. ಅಲ್ಲಿ ಅವರು ಗೋಲ್ಡ್ ಮೆಡಲ್ ಕೂಡಾ ತೆಗೆದುಕೊಂಡಿದ್ದರು. ಅಮಿಷಾ ಅವರ ಕುಟುಂಬದ ಬಗ್ಗೆ ಮಾತನಾಡುವುದಾದರೆ ಅಮಿಷಾ ಅವರ ಅಜ್ಜ ಒಬ್ಬ ಪ್ರಖ್ಯಾತ ವಕೀಲರಾಗಿದ್ದರು. ಹಾಗೂ ಆ ಕಾಲದಲ್ಲಿ ಅವರು ತುಂಬಾ ಪ್ರಸಿದ್ಧಿಯನ್ನು ಪಡೆದ ವಕೀಲರಾಗಿದ್ದು. ನಾನಾವಟಿ ಎಂಬ ಪ್ರಖ್ಯಾತ ಕೇಸನ್ನು ಕೂಡಾ ಅಮಿಷಾ ಅವರ ಅಜ್ಜನೇ ನಿಭಾಯಿಸಿದ್ದರು. ಈ ಕೇಸಿನ ಫಿಲ್ಮ್ ಕೂಡಾ ಪ್ರಚಲಿತದಲ್ಲಿ ಬಂದಿತ್ತು. ಅದುವೇ ಅಕ್ಷಯ್‌ಕುಮಾರ್ ನಟನೆಯ ರುಸ್ತುಂ ಸಿನಿಮಾ. ಇನ್ನು ಅಮಿಷಾ ಅವರ ತಂದೆ ಬಗ್ಗೆ ಹೇಳುವುದಾದರೆ ಅಮಿಷಾ ಅವರ ತಂದೆ ನಟ ರಾಕೇಶ್ ರೋಷನ್ ಅವರ ಸ್ಕೂಲ್ ಫ್ರೆಂಡ್ ಆಗಿದ್ದರು. ಅಮಿಷಾ ಅವರಿಗೆ ಓರ್ವ ತಮ್ಮ ಕೂಡಾ ಇದ್ದಾನೆ ಆತನ ಹೆಸರು ಅಷ್ಮಿತ್ ಪಟೇಲ್. ಈತ ಕೂಡಾ ಓರ್ವ ನಟ. ಇನ್ನು ಅಮಿಷಾ ತನ್ನ ವಿದ್ಯಾಭ್ಯಾಸ ಮುಗಿದ ನಂತರ ಯುಸ್ ನಲ್ಲೇ ಕೆಲಸ ಮಾಡಿಕೊಂಡಿದ್ದರು. ಆದರೆ ಎಲ್ಲೋ ಮನಸ್ಸಿನ ಮೂಲೆಯಲ್ಲಿ ತಾನು ನಟನೆ ಕಲಿಯಬೇಕೆಂಬ ಆಸಕ್ತಿ ಇತ್ತು. ಹಾಗಾಗಿ ಯುಎಸ್ ನಲ್ಲಿದ್ದ ಕೆಲಸ ಬಿಟ್ಟು, ಇಂಡಿಯಾಗೆ ಅಮಿಷಾ ಬಂದರು.
ಭಾರತಕ್ಕೆ ಬಂದ ಅಮಿಷಾ ಸತ್ಯದೇವ್ ದುಬೇ ಥಿಯೇಟರ್ ಸೇರಿ, ಅಲ್ಲಿ ನಟನೆ ಕಲಿಯತೊಡಗಿದರು. ಇದು ಬಹಳ ದೊಡ್ಡ ನಟನಾ ಥಿಯೇಟರ್ ಆಗಿತ್ತು. ಹಾಗೂ ಇಲ್ಲೇ ನೀಲಂ ಎಂಬ ಒಂದು ಉರ್ದು ಭಾಷೆಯಲ್ಲಿ ನಟನೆ ಕೂಡಾ ಮಾಡಿ ಎಲ್ಲರಿಂದ ಶಹಬ್ಬಾಶ್ ಗಿರಿ ತೆಗೆದುಕೊಂಡಿದ್ದರು ಅಮಿಷಾ. ಇದು ನಡೆದಿರುವುದು 1999 ರಲ್ಲಿ. ಥಿಯೇಟರ್ ಮಾಡುತ್ತಲೇ ಅಮಿಷಾ ಪಟೇಲ್ ಅನೇಕ add ಫಿಲ್ಮ್ ನಲ್ಲಿ ಕೂಡಾ ನಟಿಸ್ತಾ ಇದ್ದರು. ಇವರು ನಟಿಸಿದ ಪ್ರಮುಖ ಆಡ್ ಫಿಲ್ಮ್ ಗಳು ಯಾವುದೆಂದರೆ ಬಜಾಜ್, ಲಕ್ಸ್, ಕ್ಯಾಡಬರಿ, ಫೇರ್ ಆಂಡ್ ಲವ್ಲಿ ಯಂತಹ ಬಹಳ ದೊಡ್ಡ ದೊಡ್ಡ ಸಂಸ್ಥೆಯ ಜಾಹಿರಾತಿನಲ್ಲಿ ಅಮಿಷಾ ಪಟೇಲ್ ನಟಿಸಿದ್ರು. ಈ ಆಡ್ ಗಳಿಂದಲೇ ಅಮಿಷಾ ಬಾಲಿವುಡ್‌ನ ಗಮನ ಸೆಳೆಯೋವಲ್ಲಿ ಸಕ್ಸಸ್ ಆದರು.
ಈ ಸಮಯದಲ್ಲೇ ರಾಕೇಶ್ ರೋಷನ್ ತನ್ನ ಮಗ ಹೃತಿಕ್ ರೋಷನ್‌ಗಾಗಿ ಒಂದು ಸಿನಿಮಾ ಮಾಡ್ತಾ ಇದ್ದರು. ಅದುವೇ ಕಹೋ ನಾ ಪ್ಯಾರ್ ಹೇ ಸಿನಿಮಾ. ಈ ಸಿನಿಮಾದಲ್ಲಿ ಕರೀನಾ ಕಪೂರ್ ಎಂಟ್ರಿ ಆಗಿತ್ತು. ಆರು ದಿನದ ಶೂಟಿಂಗ್ ಕೂಡಾ ನಡೆದಿತ್ತು. ಆದರೆ ತನ್ನ ಅಟಿಟ್ಯೂಡ್‌ನ ಕಾರಣ ಕರೀನಾ ಕಪೂರ್‌ಳನ್ನು ಆ ಸಿನಿಮಾದಿಂದ ಹೊರಗೆ ಕಳಿಸಲಾಗಿತ್ತು. ನಂತರ ರಾಕೇಶ್ ರೋಷನ್ ತನ್ನ ಸ್ನೇಹಿತ ಅಮಿತ್‌ಗೆ ಕರೆ ಮಾಡಿ ನಿನ್ನ ಮಗಳು ನನ್ನ ಮಗನ ಜೊತೆಗೆ ಆಕ್ಟಿಂಗ್ ಮಾಡುತ್ತಾಳಾ ಎಂದು ಕೇಳಿದರು. ಈ ರೀತಿ ಅಮಿಷಾ ಪಟೇಲ್‌ಗೆ ಸಿಕ್ಕಿತು ಕಹೋನಾ ಪ್ಯಾರ್ ಹೇ ಸಿನಿಮಾ. ಈ ಸಂದರ್ಭದಲ್ಲಿ ಹಿಂದಿ ಚಿತ್ರರಂಗ ಹಾಗೂ ದಕ್ಷಿಣ ಚಿತ್ರರಂಗದಲ್ಲಿ ಕೂಡಾ ಅಮಿಷಾ ನಟಿಸೋಕೆ ಶುರುಮಾಡಿದ್ದರು. ಅಲ್ಲಿ ಕೂಡಾ ಸಿನಿಮಾ ಹಿಟ್ ಆಯಿತು. 2001ರಲ್ಲಿ ಗದರ್ ಏಕ್ ಪ್ರೇಮ್ ಕಥಾ ಸಿನಿಮಾ ಬಂತು. ಇದು ಕೂಡಾ ಸೂಪರ್ ಡೂಪರ್ ಹಿಟ್ ಸಿನಿಮಾವಾಗಿತ್ತು. ತಾನು ನಟಿಸಿದ ಮೊದಲ ಮೂರು ಸಿನಿಮಾ ಬ್ಲಾಕ್‌ಬ್ಲಸ್ಟರ್ ಆಗಿತ್ತು. ನಂತರ ಮಾಡಿದ ಸಿನಿಮಾವೆಲ್ಲ ಪ್ಲಾಪ್ ಆಗುತ್ತಲೇ ಹೋಯಿತು. ಒಂದು ಕಡೆ ಪ್ಲಾಪ್ ಸಿನಿಮಾಗಳ ಸರಮಾಲೆಯ ಜೊತೆಗೆ ಅಮಿಷಾ ತನ್ನ ತಂದೆ ತಾಯಿಯ ವಿರುದ್ಧವೇ 12ಕೋಟಿ ಹಣ ದುರುಪಯೋಗದ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಕೇಸ್ ಮಾಡಿದ್ದರು.
ಇವೆಲ್ಲವೂ ಆಕೆ ಡೈರೆಕ್ಟರ್ ವಿಕ್ರಂ ಭಟ್ ಜೊತೆ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದಾಗ ನಡೆದಿತ್ತು. ಏಕೆಂದರೆ ಅಮಿಷಾ ಅವರ ತಂದೆ ತಾಯಿಗೆ ಮಗಳು ಮದುವೆಯಾದವನ ಜೊತೆ ಸಂಬಂಧದಲ್ಲಿರುವುದು ಇಷ್ಟವಿರಲಿಲ್ಲ. ಆದರೆ ಅಮಿಷಾ ವಿಕ್ರಂ ಭಟ್ ಬೇಕು ಎಂದೇ ಹಠದಲ್ಲಿದ್ದರು. ಈ ಸಮಯದಲ್ಲೇ ಅಮಿಷಾ ತನ್ನ ತಂದೆಯ ಬಳಿ ತಾನು ನೀಡಿದ ಹಣ ವಾಪಾಸು ಕೇಳಿದ್ದಾಳೆ, ಆವಾಗ ತಂದೆ ಇದನ್ನು ಕೊಡಲು ನಿರಾಕರಿಸಿದ್ದಾರೆ. ನಂತರ ಅಮಿಷಾ ತನ್ನ ತಂದೆ ತಾಯಿಗೆ ಲೀಗಲ್ ನೋಟಿಸ್ ನೀಡಿದ್ದರು. ಆ ಸಮಯದಲ್ಲಿ ತಂದೆ ಮಗಳ ಗಲಾಟೆ ವಿಷಯ ಆ ಸಮಯದಲ್ಲಿ ಮೀಡಿಯದಲ್ಲಿ ಬಹಳ ಚರ್ಚೆಯಾಗಿತ್ತು.
ಇದರ ಮಧ್ಯೆ ಅಮಿಷಾ ನಟನೆಯ ಹಮ್‌ರಾಜ್ ಎಂಬ ಸಿನಿಮಾ ಬಹಳ ಹಿಟ್ ಆಗಿತ್ತು. ಅನಂತರ ಮತ್ತೆ ಸೋಲಿನ ಸರಮಾಲೆ ನಡೆಯಿತು. ಇದರ ಜೊತೆಗೆ ಅಮಿಷಾ ಪಟೇಲ್ ಅವರ ಸಂಬಂಧ ವಿಕ್ರಂ ಭಟ್‌ಜೊತೆ ಹದಗೆಡುತ್ತಾ ಹೋಯಿತು. ಒಂದು ಕಡೆಯಲ್ಲಿ ಅಮಿಷಾ ಅವರ ಕೆರಿಯರ್ ಒಳ್ಳೆ ರೀತಿಯಲ್ಲಿ ಹೋಗುತ್ತಿರಲಿಲ್ಲ, ವಿಕ್ರಂ ಭಟ್ ಅವರದ್ದು ಕೂಡಾ. ಇದೇ ಕಾರಣದಿಂದ ಇಬ್ಬರು ತಮ್ಮ ಐದು ವರ್ಷದ ಪ್ರೀತಿಗೆ ತಿಲಾಂಜಲಿ ಇಟ್ಟರು. ಇವರಿಬ್ಬರು 2003-2008 ಇವರಿಬ್ಬರು ಜೊತೆಗೆ ಇದ್ದರು. 2008 ರಲ್ಲಿ ಅಮಿಷಾ (Ameesha Patel) ಮತ್ತೆ ಪ್ರೀತಿಯಲ್ಲಿ ಬಿದ್ದರು. ಲಂಡನ್ ಬೇಸ್ ಬ್ಯುಸಿನೆಸ್‌ಮ್ಯಾನ್ ತನವ್ ಪೂರಿ ಜೊತೆ. ಇವರಿಬ್ಬರ ಒಡನಾಟ ನೋಡಿ ಎಲ್ಲರೂ ಇವರಿಬ್ಬರು ಮದುವೆಯಾಗುತ್ತಾರೆ ಎಂದುಕೊಂಡಿದ್ದರು. ಆದರೆ ಈ ಸಂಬಂಧ ಕೂಡಾ 2010ರಲ್ಲಿ ಮುರಿಯಿತು.
2011 ರಲ್ಲಿ ಅಮಿಷಾ ತನ್ನ ಸ್ನೇಹಿತ ಕುನಾಲ್ ಗೋಮರ್ ಜೊತೆ ಸೇರಿ ಒಂದು ಪ್ರೊಡಕ್ಷನ್ ಹೌಸ್ ಓಪನ್ ಮಾಡುತ್ತಾರೆ. ಅಮಿಷಾ ಪಟೇಲ್ ಪ್ರೊಡಕ್ಷನ್ ಹೌಸ್ ಎಂದು ಇದರ ಹೆಸರು. ಆದರೆ ಇಲ್ಲೂ ಮಾಡಿದ ಸಿನಿಮಾ ಕೂಡಾ ಓಡಲಿಲ್ಲ. ಜೊತೆಗೆ ಸಾಲದ ವಿಷಯದಿಂದಾಗಿ ಅಮಿಷಾ ಪಟೇಲ್ ಮೇಲೆ ಕೇಸ್ ಕೂಡ ಹಾಕಲಾಗಿತ್ತು. ಇದರ ಜೊತೆಗೆ ಅಮಿಷಾ ತನ್ನ ಸ್ನೇಹಿತ ಕುನಾಲ್ ಜೊತೆಗೆ ಅಫೇರ್ ಶುರುವಾಗಿತ್ತು. ಈತ ಕೂಡಾ ಮದುವೆಯಾಗಿದ್ದು, ಆದರೂ ಆತನ ಜೊತೆ ಸಂಬಂಧ ಮುಂದುವರಿಸಿದ್ದಳು ಅಮಿಷಾ. ಆದರೆ ಈ ಸಂಬಂಧ ಒಂದು ವರ್ಷದ ವರೆಗೆ ಮಾತ್ರ ಮುಂದುವರಿಯಿತು. ನಂತರ ಮುರಿಯಿತು.
ಒಂದು ಕಡೆ ಸಿನಿಮಾ ಪ್ಲಾಪ್ ಆಗ್ತಿತ್ತು, ಪ್ರೊಡಕ್ಷನ್ ಹೌಸ್ ಕೂಡಾ ಫೇಲ್ ಆಯ್ತು. ಇನ್ನು ಅಮಿಷಾಳ ಕೈಯಲಿದ್ದದ್ದು ವಾಪಸ್ ಫಿಲ್ಮ್ ಇಂಡಸ್ಟ್ರಿಗೆ ಕಂ ಬ್ಯಾಕ್ ಮಾಡೋದು. ಅನಂತರ 2013 ರೇಸ್‌೨ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಹಿಟ್ ಆಗಿತ್ತು, ಆದರೆ ಇದರಲ್ಲಿ ಅಮಿಷಾ ಕೇವಲ ಸಪೋರ್ಟಿಂಗ್ ರೋಲ್ ಮಾಡಿದ್ದರು, ಆದರೆ ಇದು ಅಮಿಷಾ ಅವರ ಸಿನಿಕೆರಿಯರ್ ಗೆ ದೊಡ್ಡ ಇಂಪ್ಯಾಕ್ಟ್ ಮಾಡಿಲ್ಲ. ಏಕೆಂದರೆ ಇಲ್ಲಿ ಅಮಿಷಾ ಸೈಡ್ ರೋಲ್ ಮಾಡಿದ್ದರು. ಈ ಸಂದರ್ಭದಲ್ಲಿ ನೆಸ್‌ವಾಡಿಯಾ ಜೊತೆ ಪ್ರೀತಿಯಲ್ಲಿ ಮತ್ತೆ ಬಿದ್ದರು ಅಮಿಷಾ ಪಟೇಲ್. ಎರಡು ವರ್ಷದ ನಂತರ ಈ ಸಂಬಂಧ ಕೂಡಾ ಮುರಿದುಬಿತ್ತು.
2013-2018 ವರೆಗೆ ಅಮಿಷಾ ಪಟೇಲ್ ಅವರ ಯಾವುದೇ ಸಿನಿಮಾ ಬಂದಿರಲಿಲ್ಲ. ಇವರು ಸಿನಿರಂಗದಿಂದ ದೂರನೇ ಇದ್ದರು ಎನ್ನಬಹುದು. ತನ್ನ ಅಟಿಟ್ಯೂಡ್ ಹಾಗೂ ಅಹಂಕಾರದಿಂದಲೇ ಈ ನಟಿ ತನ್ನ ಸಿನಿ ಕೆರಿಯರ್‌ನ್ನು ಕಳೆದುಕೊಂಡಿದ್ದಳು ಎಂದು ಹೇಳಲಾಗಿದೆ. ಏಕೆಂದರೆ ಈಕೆಯ ಜೊತೆಗೆ ನಟನಾ ವೃತ್ತಿ ಮಾಡುತ್ತಾ ಇದ್ದವರು ಈಗಲೂ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾ ಇದ್ದಾರೆ. ಈಗ ಗದರ್ ಪಾರ್ಟ್ 2 ಸಿನಿಮಾದಲ್ಲಿ ನಟಿಸುತ್ತಾ ಇದ್ದಾರೆ. ಇದು ಸೀಕ್ವೇಲ್ ಮೂವಿಯಾಗಿದ್ದು, ಇದು ಬಿಟ್ಟರೆ ಬೇರೆ ಯಾವ ಪ್ರಾಜೆಕ್ಟ್ ಕೂಡಾ ಅಮಿಷಾ ಪಟೇಲ್ ಬಳಿ ಇಲ್ಲ.